Visa on Arrival: ಅನಿವಾಸಿ ಭಾರತೀಯರೇ ಗಮನಿಸಿ: ಆಗಮನ ವೀಸಾ ಬಯಸುವವರು ಈ ನಿಯಮ ಪಾಲಿಸಲೇಬೇಕು!

ಕತಾರ್‌ನಲ್ಲಿ ಸ್ನೇಹಿತರು ಅಥವಾ ಕುಟುಂಬವನ್ನು ಹೊಂದಿರುವ ಮತ್ತು ಅವರೊಂದಿಗೆ ಇರಲು ಬಯಸುವ ಜನರಿಗೆ ಇದು ಅನ್ವಯಿಸುತ್ತದೆ. ಹೊಸ ನಿಯಮವು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಫಿಲಿಪೈನ್ಸ್‌ನ ನಾಗರಿಕರಿಗೆ ಅನ್ವಯಿಸುತ್ತದೆ. 

Written by - Bhavishya Shetty | Last Updated : May 29, 2022, 08:57 AM IST
  • ಎನ್‌ಆರ್‌ಐಗಳಿಗಾಗಿ ಕತಾರ್‌ ಸರ್ಕಾರದಿಂದ ಯೋಜನೆ
  • ಆಗಮನದ ವೀಸಾ ಬಯಸುವವರು ಈ ನಿಯಮ ಪಾಲಿಸಲೇಬೇಕು
  • ʼಡಿಸ್ಕವರ್ ಕತಾರ್ʼ ಮೂಲಕ ಬುಕ್‌ ಮಾಡಿದರೆ ಮಾತ್ರ ಮಾನ್ಯ
Visa on Arrival: ಅನಿವಾಸಿ ಭಾರತೀಯರೇ ಗಮನಿಸಿ: ಆಗಮನ ವೀಸಾ ಬಯಸುವವರು ಈ ನಿಯಮ ಪಾಲಿಸಲೇಬೇಕು! title=
Visa on Arrival

ಕತಾರ್‌ ಕಡೆಗೆ ಮುಖ ಮಾಡಿರುವ ಅನಿವಾಸಿ ಭಾರತೀಯರು ಮತ್ತು ಆಗಮನದ ವೀಸಾ (Visa on Arrival) ಬಯಸುತ್ತಿರುವವರು ಕತ್ತಾರ್‌ನಲ್ಲಿ ತಂಗುವ ಸಂಪೂರ್ಣ ಅವಧಿಗೆ ಹೋಟೆಲ್‌ನ್ನು ಬುಕ್‌ ಮಾಡಬೇಕಾಗಿದೆ. ಇನ್ನು ಹೊಟೇಲ್‌ ಅಥವಾ ವಸತಿ ಬುಕ್ಕಿಂಗ್‌ನ್ನು ʼಡಿಸ್ಕವರ್ ಕತಾರ್ʼ ವೆಬ್‌ಸೈಟ್‌ ಮೂಲಕ ಮಾಡಿದರೆ ಮಾತ್ರ ಅದು ಮಾನ್ಯವಾಗುತ್ತದೆ.

ಕತಾರ್‌ನಲ್ಲಿ ಸ್ನೇಹಿತರು ಅಥವಾ ಕುಟುಂಬವನ್ನು ಹೊಂದಿರುವ ಮತ್ತು ಅವರೊಂದಿಗೆ ಇರಲು ಬಯಸುವ ಜನರಿಗೆ ಇದು ಅನ್ವಯಿಸುತ್ತದೆ. ಹೊಸ ನಿಯಮವು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ಫಿಲಿಪೈನ್ಸ್‌ನ ನಾಗರಿಕರಿಗೆ ಅನ್ವಯಿಸುತ್ತದೆ. 

ಇದನ್ನು ಓದಿ: NRIಗಳೇ ಗಮನಿಸಿ: ಎಕ್ಸ್‌ಪ್ರೆಸ್ ಎಂಟ್ರಿ ಸಿಸ್ಟಮ್‌ನಲ್ಲಿ ಬದಲಾವಣೆ ತರಲು ಕೆನಡಾ ಚಿಂತನೆ

2022 ರ ಮಾಹಿತಿಯ ಪ್ರಕಾರ, ಕತಾರ್‌ನಲ್ಲಿ ಭಾರತೀಯರು ಶೇ.24ರಷ್ಟಿದ್ದು, ಏಕೈಕ ಅತಿದೊಡ್ಡ ರಾಷ್ಟ್ರೀಯತೆಯನ್ನು ಹೊಂದಿದ್ದಾರೆ. ಕತಾರ್ ಪ್ರಜೆಗಳು ಒಟ್ಟು ಜನಸಂಖ್ಯೆಯ ಶೇ.15 ಕ್ಕಿಂತ ಕಡಿಮೆ ಇದ್ದಾರೆ. ಇನ್ನು ಅರಬ್ ರಾಷ್ಟ್ರೀಯತೆ ಶೇ. 13, ಭಾರತೀಯ ರಾಷ್ಟ್ರೀಯತೆ ಶೇ.24, ನೇಪಾಳಿ ಶೇ.16, ಫಿಲಿಪಿನೋ ಶೇ.11 ಹಾಗೂ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಶೇ.5 ರಷ್ಟು ರಾಷ್ಟ್ರೀಯತೆಯನ್ನು ಹೊಂದಿದ್ದಾರೆ. 

ಅರೈವಲ್‌ ವೀಸಾಗಳು ಒಂದು ಟ್ರಿಪ್ ಅಥವಾ ಬಹು ಟ್ರಿಪ್‌ಗಳಿಗೆ ಮಾನ್ಯವಾಗಿರುತ್ತದೆ. ಅಷ್ಟೇ ಅಲ್ಲದೆ, ವಿಸಾ ಲಭಿಸಿದ ದಿನಾಂಕದಿಂದ 30 ದಿನಗಳವರೆಗೆ ಅದನ್ನು ಉಪಯೋಗಿಸಬಹುದು. ಒಂದು ವೇಳೆ ಅದನ್ನು ವಿಸ್ತರಿಸಬೇಕು ಎಂದಾದರೆ 30 ದಿನಗಳವರೆಗೆ ವಿಸ್ತರಿಸಬಹುದು.

ಅನ್ವಯಿಸುವ ಹೆಚ್ಚುವರಿ ನಿಯಮಗಳು:

1. ಪಾಸ್ಪೋರ್ಟ್ ಕನಿಷ್ಠ 6 ತಿಂಗಳವರೆಗೆ ಮಾನ್ಯವಾಗಿರಬೇಕು. ರಿಟರ್ನ್ ಟಿಕೆಟ್ ಅನ್ನು ದೃಢೀಕರಿಸಬೇಕು.

2. ಆಗಮಿಸುವ ಪ್ರಯಾಣಿಕರು ಕನಿಷ್ಟ 1400 ಯುಎಸ್‌ ಡಾಲರ್‌ ನಗದು ಮೊತ್ತವನ್ನು ಹೊಂದಿರಬೇಕು ಅಥವಾ ಸಂಪೂರ್ಣ ಕುಟುಂಬಕ್ಕೆ ಅನ್ವಯಿಸುವ ಮಾನ್ಯ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರಬೇಕು.

3. ಸಾರ್ವಜನಿಕ ಆರೋಗ್ಯ ಸಚಿವಾಲಯವು ಅನುಮೋದಿಸಿದ ಲಸಿಕೆಗಳೊಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ಹಾಕಿಸಿಕೊಂಡಿರಬೇಕು. 

4. ಆಗಮನದ ಸಮಯದಿಂದ 48 ಗಂಟೆಗಳ ಅವಧಿಯಲ್ಲಿ ಪೂರ್ಣಗೊಂಡ ನೆಗೆಟಿವ್‌ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ದೃಢೀಕರಿಸುವ ಪ್ರಮಾಣಪತ್ರವನ್ನು ಹೊಂದಿರಬೇಕು.

5. ಪ್ರಯಾಣಿಸುವ ಮೊದಲು ಸಾರ್ವಜನಿಕ ಆರೋಗ್ಯ ಸಚಿವಾಲಯದ ಅನುಮೋದನೆಯನ್ನು ಪಡೆಯಲು Ehteraz ಪ್ಲಾಟ್‌ಫಾರ್ಮ್‌ನಲ್ಲಿ (www.ehteraz.gov.qa) ಎಲೆಕ್ಟ್ರಾನಿಕ್ ನೋಂದಣಿಯನ್ನು ಪೂರ್ಣಗೊಳಿಸಿರಬೇಕು.

ಇದನ್ನು ಓದಿ: NRI ಉತ್ಸವ: 75 ವರ್ಷಗಳ ಸ್ವಾತಂತ್ರ್ಯದ ಇತಿಹಾಸ ಸ್ಮರಿಸಲು ಮುಂದಾದ ಸಾಗರೋತ್ತರ ಭಾರತೀಯರು

ಕತಾರ್‌ನಲ್ಲಿ ಭಾರತದಿಂದ ಸಂದರ್ಶಕರನ್ನು ಆಕರ್ಷಿಸಲು ಇತ್ತೀಚಿನವರೆಗೂ ರೋಡ್ ಶೋಗಳನ್ನು ನಡೆಸಲಾಗಿತ್ತು. ಇದೀಗ ಮತ್ತೆ ಇಂತಹ ಯೋಜನೆಗಳನ್ನು ಜಾರಿಗೊಳಿಸಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News