Viral Video: ಶಾಲೆಯಲ್ಲಿಯೇ ಜುಟ್ಟು ಹಿಡಿದು ಕಿತ್ತಾಡಿಕೊಂಡ ಪ್ರಿನ್ಸಿಪಾಲ್-ಟೀಚರ್: ಶಿಕ್ಷಕರ ಜಡೆಜಗಳ ಕಂಡ ಮಕ್ಕಳು ಮಾಡಿದ್ದೇನು?
Principal Teacher Clash Viral Video: ಈ ವಿಡಿಯೋದಲ್ಲಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿ ಜಡೆ ಹಿಡಿದುಕೊಂಡು ಕಿತ್ತಾಡಿಕೊಂಡಿದ್ದಾರೆ. ಅಲ್ಲೇ ಇದ್ದ ಯಾರೋ ಈ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಇಬ್ಬರು ಸಹ ಜಡೆ ಹಿಡಿದುಕೊಂಡು ಕಿತ್ತಾಡುತ್ತಿದ್ದರೆ, ಪಕ್ಕದಲ್ಲೇ ನಿಂತಿದ್ದ ಮಕ್ಕಳು ಅಳುತ್ತಾ ಕಾಪಾಡಿ.. ಕಾಪಾಡಿ.. ಎಂದು ಕೂಗುತ್ತಿದ್ದಾರೆ.
Principal Teacher Clash Viral Video: ಶಿಕ್ಷಕರೆಂದರೆ ಮಕ್ಕಳನ್ನು ತಿದ್ದಿ, ಬುದ್ದಿ ಮಾತುಗಳನ್ನು ಹೇಳಿ ಸರಿ ದಾರಿಯನ್ನು ತೋರಿಸುವ ಮಾರ್ಗದರ್ಶಕರು. ಶಿಕ್ಷಕರನ್ನು ನೋಡುತ್ತಾ, ಅವರನ್ನೇ ಪಾಲಿಸುತ್ತಾ ಮಕ್ಕಳು ಬೆಳೆಯುತ್ತಾರೆ. ಇದೀಗ ಅಂತಹ ಶಿಕ್ಷಕರೇ ಮಕ್ಕಳೆದುರು ಜಡೆ ಹಿಡಿದುಕೊಂಡು ಕಿತ್ತಾಡಿಕೊಂಡಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿ ಜಡೆ ಹಿಡಿದುಕೊಂಡು ಕಿತ್ತಾಡಿಕೊಂಡಿದ್ದಾರೆ. ಅಲ್ಲೇ ಇದ್ದ ಯಾರೋ ಈ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ಇಬ್ಬರು ಸಹ ಜಡೆ ಹಿಡಿದುಕೊಂಡು ಕಿತ್ತಾಡುತ್ತಿದ್ದರೆ, ಪಕ್ಕದಲ್ಲೇ ನಿಂತಿದ್ದ ಮಕ್ಕಳು ಅಳುತ್ತಾ ಕಾಪಾಡಿ.. ಕಾಪಾಡಿ.. ಎಂದು ಕೂಗುತ್ತಿದ್ದಾರೆ.
ಇದನ್ನೂ ಓದಿ: Shaving Tips: ಶೇವಿಂಗ್ ಬಳಿಕ ಉರಿ-ತುರಿಕೆ ಅನುಭವವಾಗುತ್ತಿದೆಯೇ? ಇದನ್ನು ತಪ್ಪಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್
ಈ ಗಲಾಟೆ ಯಾವ ಕಾರಣಕ್ಕೆ ನಡೆದಿದೆ, ಎಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಆದರೆ ವಿಡಿಯೋದಲ್ಲಿ ಕಂಡುಬರುವಂತೆ ಉತ್ತರ ಪ್ರದೇಶದ ಕಾಸ್ ಗಂಜ್ ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಇವರಿಬ್ಬರ ಗಲಾಟೆ ಕಂಡು ಇತರ ಇಬ್ಬರು ಮಹಿಳೆಯರು ಬಂದು ಅವರನ್ನು ತಡೆಯಲು ಮುಂದಾಗುತ್ತಾರೆ. ಆದರೆ ಒಬ್ಬರಿಗೊಬ್ಬರು ಮತ್ತಷ್ಟು ಜೋರಾಗಿ ಗಲಾಟೆ ಮಾಡಿದ್ದಲ್ಲದೆ, ಒಬ್ಬ ಶಿಕ್ಷಕಿ ಕಾಲಿಂದ ಚಪ್ಪಲಿ ತೆಗೆದುಕೊಂಡು, ಹೊಡೆಯಲು ಪ್ರಾರಂಭಿಸುತ್ತಾಳೆ. ಈ ವಿಡಿಯೋವನ್ನು ನೀವೆ ನೋಡಿ.
https://www.facebook.com/reel/678577647316890
ಸದ್ಯ ಈ ವಿಡಿಯೋ ಕಂಡ ನೆಟ್ಟಿಗರು ತಮಾಷೆಯಾಗಿ ಕಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಶಿಕ್ಷಕರ ವರ್ತನೆಗೆ ಛೀಮಾರಿ ಹಾಕಿದ್ದಾರೆ. ಒಬ್ಬ ವ್ಯಕ್ತಿ, “ಇಂತಹ ಶ್ರಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ತೋರ್ಪಡಿಸಿ” ಎಂದು ಪರೋಕ್ಷವಾಗಿ ತಿವಿದಿದ್ದಾರೆ. ಮತ್ತೋರ್ವ ನೆಟ್ಟಿಜನ್ “ಇದರಿಂದ ನಮ್ಮ ಎಲ್ಲ ಮಕ್ಕಳ ಭವಿಷ್ಯ ಹಾಳಾಗುತ್ತದೆ” ಎಂದು ಗಂಭೀರವಾಗಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆ: ಸ್ಪರ್ಧೆಗೆ ಟಾರ್ಗೆಟ್ ಯಾರು!?
ವಿದ್ಯೆ ಬುದ್ಧಿ ಕಲಿಸಬೇಕಾದ ಶಿಕ್ಷಕರೇ ಈ ರೀತಿ ವರ್ತನೆ ತೋರಿರುವುದು ನಾಚಿಗೆಗೇಡಿನ ಸಂಗತಿ ಎಂದರೆ ತಪ್ಪಾಗಲಾರದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.