ಫರಿದಾಬಾದ್ : ಖಾಸಗಿ ಶಾಲೆಗಳು ಕೂಡ ಆರ್‌ಟಿಐ (RTI) ವ್ಯಾಪ್ತಿಗೆ ಬಂದಿವೆ. ಈ ನಿಟ್ಟಿನಲ್ಲಿ, ರಾಜ್ಯ ಮಾಹಿತಿ ಆಯೋಗ (SIC) ಆದೇಶ ಹೊರಡಿಸಿದೆ. ಇನ್ನು ಮುಂದೆ ಆರ್‌ಟಿಐ ಅಡಿಯಲ್ಲಿ ಕೇಳಲಾದ ಮಾಹಿತಿಯನ್ನು ನೀಡಲು ಖಾಸಗಿ ಶಾಲೆಗಳು ನಿರಾಕರಿಸುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.  ಆರ್‌ಟಿಐ ಅಡಿಯಲ್ಲಿ ಕೋರಲಾದ ಮಾಹಿತಿ ನೀಡುವಲ್ಲಿ ಶಾಲೆ (Private Schools) ವಿಫಲವಾದರೆ  ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಬಹುದು. 


COMMERCIAL BREAK
SCROLL TO CONTINUE READING

ನಿಯಮಗಳನ್ನು ಪಾಲಿಸದಿದ್ದರೆ ಶಾಲೆ ವಿರುದ್ದ ಕ್ರಮ : 
ಎಲ್ಲಾ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಎಸ್‌ಐಸಿ (SIC) ಕಳುಹಿಸಿದ ಪತ್ರದಲ್ಲಿ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಆರ್‌ಟಿಐ (RTI) ಮೂಲಕ ಖಾಸಗಿ ಶಾಲೆಗಳ ಬಗ್ಗೆ ಮಾಹಿತಿ ಕೇಳಿದರೆ, ಶಾಲೆಗಳಿಂದ ಕೋರಿದ ಮಾಹಿತಿಯನ್ನು ಒದಗಿಸಬೇಕಾಗುತ್ತದೆ ಎಂದು ಸೂಚಿಸಲಾಗಿದೆ. ಒಂದು ವೇಳೆ ಶಾಲೆಯು ಮಾಹಿತಿ ನೀಡಲು ನಿರಾಕರಿಸಿದರೆ, ಶಾಲೆಗೆ ಶೋಕಾಸ್ ನೋಟಿಸ್ (Notice) ನೀಡಬೇಕು ಮತ್ತು ಮಾನ್ಯತೆಯನ್ನು ರದ್ದುಗೊಳಿಸಬಹುದು ಎಂದು ಕೂಡಾ ಹೇಳಲಾಗಿದೆ. ಆದರೂ ಅನೇಕ ಶಾಲೆಗಳು ಈ ನಿಯಮದಿಂದ ತಪ್ಪಿಸಿಕೊಳ್ಳುವ ಸಲುಆಗಿ ತಮ್ಮ ವಾದವನ್ನು ಕೂಡಾ ಮುಂದಿಟ್ಟಿವೆ. ತಮ್ಮದು ಖಾಸಗಿ ಸಂಸ್ಥೆಗಳಾಗಿದ್ದು, (Private School) ಮಾಹಿತಿಯನ್ನು ಒದಗಿಸುವ ಬಗ್ಗೆ  ಒತ್ತಾಯಿಸುವಂತಿಲ್ಲ ಎಂದು ಹೇಳಿದೆ. 


ಇದನ್ನೂ ಓದಿ :  ತಪ್ಪಿ ಬೇರೆಯವರ ಖಾತೆಗೆ ಹಣ ಟ್ರಾನ್ಸ್ಫರ್ ಆದರೆ ತಕ್ಷಣ ಈ ಕೆಲಸ ಮಾಡಿ, ದುಡ್ಡು ವಾಪಸ್ ಸಿಗಲಿದೆ


ಖಾಸಗಿ ಶಾಲಾ ಮಾಹಿತಿ ಅಧಿಕಾರಿಯನ್ನು ನೇಮಿಸಬೇಕು :
ಉತ್ತರ ಪ್ರದೇಶದ ಎಲ್ಲಾ ಖಾಸಗಿ ಶಾಲೆಗಳು ಕೂಡ ಮಾಹಿತಿ ಹಕ್ಕು ಕಾಯ್ದೆ (RTI) ವ್ಯಾಪ್ತಿಯಡಿ ಬರುತ್ತವೆ. ಹಾಗಾಗಿ ಈ ಕಾಯಿದೆಯಡಿ ಕೇಳಿದ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. ಜುಲೈನಲ್ಲಿ, ರಾಜ್ಯ ಮಾಹಿತಿ ಆಯೋಗವು  ಈ ಆದೇಶವನ್ನು ನೀಡಿತ್ತು. ಅಲ್ಲದೆ, ರಾಜ್ಯ ಮಾಹಿತಿ ಆಯುಕ್ತ ಪ್ರಮೋದ್ ಕುಮಾರ್ ತಿವಾರಿ (Pramod Kumar Tiwari) ತಮ್ಮ ಆದೇಶದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು ಖಾಸಗಿ ಶಾಲೆಗಳಲ್ಲಿ ನೇಮಿಸುವಂತೆಯೂ ಸೂಚಿಸಿದ್ದರು.  


ಇದನ್ನೂ ಓದಿ :  Girls Permitted To Join NDA: ಸಶಸ್ತ್ರ ಪಡೆಗಳಲ್ಲಿನ ತಾರತಮ್ಯಕ್ಕೆ ತೆರೆ, NDA ಮೂಲಕ ಮಹಿಳೆಯರಿಗೆ ಎಂಟ್ರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.