PM Kisan Sammaan Nidhi: ತಲುಪಬಾರದ ಜನರ ಖಾತೆ ತಲುಪಿದ 1364 ಕೋಟಿ ರೂ. ಅರ್ಹ ರೈತರ ಹಣ

PM Kisan Sammaan Nidhi: ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ, ಕೇಂದ್ರ ಕೃಷಿ ಸಚಿವಾಲಯವು ಎರಡು ವರ್ಗದ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದೆ.  ಇದರಲ್ಲಿ 'ಅರ್ಹತೆ ಪಡೆಯದ ರೈತರು' ಮೊದಲ ವರ್ಗಕ್ಕೆ ಸೇರಿದ್ದರೆ, 'ಆದಾಯ ತೆರಿಗೆ ಪಾವತಿಸುವ ರೈತರು' ಎರಡನೆಯ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ.

Written by - Nitin Tabib | Last Updated : Jan 10, 2021, 05:54 PM IST
  • ಅನರ್ಹ ಜನರ ಖಾತೆ ಸೇರಿದ ಸುಮಾರು 1364 ಕೋಟಿ ರೂ. ಅರ್ಹ ರೈತರ ಹಣ.
  • ಹಣ ವರ್ಗಾವಣೆ ವಿಷಯಗಲ್ಲಿ ಬಿಗ್ ಮಿಸ್ಟೇಕ್.
  • RTI ಅರ್ಜಿಗೆ ನೀಡಿದ ಉತ್ತರದಲ್ಲಿ ಖುದ್ದು ಅಂಕಿ-ಅಂಶಗಳನ್ನು ಬಹಿರಂಗಪಡಿಸಿದ ಕೇಂದ್ರ ಕೃಷಿ ಸಚಿವಾಲಯ.
PM Kisan Sammaan Nidhi: ತಲುಪಬಾರದ ಜನರ ಖಾತೆ ತಲುಪಿದ 1364 ಕೋಟಿ ರೂ. ಅರ್ಹ ರೈತರ ಹಣ title=
PM Kisan Samman Nidhi (File Photo)

PM Kisan Sammaan Nidhi - ನವದೆಹಲಿ:  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿ ಸುಮಾರು 20.48 ಲಕ್ಷ ಅನರ್ಹ ಲಾಭಾರ್ಥಿಗಳಿಗೆ ಸುಮಾರು 1364 ಕೋಟಿ ರೂ.ಹಣ ವರ್ಗಾಯಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯ ಅಡಿ ಕೇಳಲಾಗಿರುವ ಪ್ರಶ್ನೆಗೆ ಕೇಂದ್ರ ಕೃಷಿ ಸಚಿವಾಲಯ ಈ ಉತ್ತರ ನೀಡಿದೆ.

2019ರಲ್ಲಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಆರಂಭಿಸಿತ್ತು ಹಾಗೂ ಅದರ ಅಡಿ ಸಣ್ಣ ಹಿಡುವಳಿದಾರರಾಗಿರುವ ರೈತರು ಅಥವಾ ಎರಡು ಹೆಕ್ಟೇರ್ ಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರ ಖಾತೆಗೆ ಸರ್ಕಾರ ವರ್ಷವೊಂದರಲ್ಲಿ ಮೂರು ಸಮನಾದ ಕಂತುಗಳಲ್ಲಿ ಒಟ್ಟು 6000 ರೂ. ಸಹಾಯಧನ ವರ್ಗಾಯಿಸುತ್ತದೆ.

ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ, ಕೇಂದ್ರ ಕೃಷಿ ಸಚಿವಾಲಯವು ಎರಡು ವರ್ಗದ ಅನರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದೆ.  ಇದರಲ್ಲಿ 'ಅರ್ಹತೆ ಪಡೆಯದ ರೈತರು' ಮೊದಲ ವರ್ಗಕ್ಕೆ ಸೇರಿದ್ದರೆ, 'ಆದಾಯ ತೆರಿಗೆ ಪಾವತಿಸುವ ರೈತರು' ಎರಡನೆಯ ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಇದನ್ನು ಓದಿ- 'ಮನ್ ಕಿ ಬಾತ್' ಕಾರ್ಯಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದೆ ಕೋಟಿ, ಕೋಟಿ ಹಣ

ಕಾಮನ್ವೆಲ್ತ್ ಮಾನವ ಹಕ್ಕುಗಳ ಉಪಕ್ರಮ (CHRI) ಅಂಗಸಂಸ್ಥೆ ಹೊಂದಿರುವ ಆರ್‌ಟಿಐ ಅರ್ಜಿದಾರ ವೆಂಕಟೇಶ್ ನಾಯಕ್ ಈ ಅಂಕಿಅಂಶಗಳನ್ನು ಸರ್ಕಾರದಿಂದ ಪಡೆದಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, "ಅರ್ಹವಲ್ಲದ ಫಲಾನುಭವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು   (ಅಂದರೆ ಶೇ. 55.58 ) ಜನರು 'ಆದಾಯ ತೆರಿಗೆ ಪಾವತಿದಾರರ' ವಿಭಾಗದಲ್ಲಿದ್ದಾರೆ ಎಂದು ಹೇಳಿದ್ದಾರೆ.

"ಉಳಿದ ಶೇ. 44.41 ರಷ್ಟು ಜನರು ಯೋಜನೆಯ ಅರ್ಹತೆಯನ್ನು ಪೂರೈಸದ ರೈತರಾಗಿದ್ದಾರೆ" ಎಂದು ನಾಯಕ್ ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅನರ್ಹ ಫಲಾನುಭವಿಗಳಿಗೆ ಪಾವತಿಸಿದ ಮೊತ್ತವನ್ನು ವಸೂಲಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

ಇದನ್ನು ಓದಿ- ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಸಿಜೆಐ ಕಚೇರಿ, ಸುಪ್ರೀಂ ಮಹತ್ವದ ತೀರ್ಪು

ಮಾಹಿತಿ ಹಕ್ಕು ಕಾಯ್ದೆ -2005 (RTI ACT 2005) ರ ಅಡಿಯಲ್ಲಿ ಪಡೆಯಲಾಗಿರುವ ಮಾಹಿತಿಯು 2019 ರಲ್ಲಿ ಪ್ರಾರಂಭವಾದ ಪಿಎಂ-ಕಿಸಾನ್ ಯೋಜನೆಯಡಿ, 2020 ರ ಜುಲೈ ವರೆಗೆ ಅನರ್ಹ ಫಲಾನುಭವಿಗಳಿಗೆ 1,364 ಕೋಟಿ ರೂ. ಹಣ ವರ್ಗಾಯಿಸಲಾಗಿದೆ ಎಂದು ತೋರಿಸಿವೆ. "ಸರ್ಕಾರದ ಖುದ್ದು ಸರ್ಕಾರದ ಅಂಕಿ-ಅಂಶಗಳೇ ಈ ಹಣ ಅನರ್ಹ ಖಾತೆ ಸೇರಿವೆ ಎಂಬುದನ್ನು ಸೂಚಿಸುತ್ತಿವೆ " ಎಂದು ನಾಯಕ್ ಹೇಳಿದ್ದಾರೆ.

ಅಂಕಿ-ಅಂಶಗಳ ಪ್ರಕಾರ ಹೆಚ್ಚಿನ ಸಂಖ್ಯೆಯ ಅನರ್ಹ ಲಾಭಾರ್ಥಿಗಳು ಐದು ರಾಜ್ಯಗಳಾದ ಪಂಜಾಬ್, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದಾರೆ. 

ಮಾಹಿತಿಗಳ ಪ್ರಕಾರ "ಪಂಜಾಬ್ ಇದರಲ್ಲಿ ಮೊದಲ ಸ್ಥಾನದಲ್ಲಿದ್ದು, ಶೇ.23.6 ರಷ್ಟು (ಅಂದರೆ 4.74 ಲಕ್ಷ ) ಲಾಭಾರ್ಥಿಗಳು ಪಂಜಾಬ್ ನಿವಾಸಿಗಳಾಗಿದ್ದಾರೆ. ಸುಮಾರು ಶೇ.16.8 ರಷ್ಟು (ಅಂದರೆ 3.45 ಲಕ್ಷ ) ಅನರ್ಹ ಲಾಭಾರ್ಥಿಗಳ ಮೂಲಕ ಅಸ್ಸಾಂ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಶೇ.13.99 (ಅಂದರೆ 2.86 ಲಕ್ಷ) ಅನರ್ಹ ಲಾಭಾರ್ಥಿಗಳ ಮೂಲಕ ಮೂರನೇ ಸ್ಥಾನದಲ್ಲಿದೆ. ಅಂದರೆ ಯೋಜನೆಯ ಲಾಭ ಪಡೆದ ಅನರ್ಹ ಲಾಭಾರ್ಥಿಗಳ ಸಂಖ್ಯೆ ಈ ಮೂರು ರಾಜ್ಯಗಳಲ್ಲಿ ಅರ್ಧಕ್ಕಿಂತ (ಅಂದರೆ ಶೇ.54.03ರಷ್ಟು ) ಹೆಚ್ಚಾಗಿದೆ ಎಂದು ಅರ್ಜಿದಾರರು ತಿಳಿದಿದ್ದಾರೆ. 

ಇದನ್ನು ಓದಿ-ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ Public Sector Bankಗಳಲ್ಲಿ 19,964 ಕೋಟಿ ರೂ.ಗಳ ವಂಚನೆ

ಗುಜರಾತ್ ಹಾಗೂ ಉತ್ತರ ಪ್ರದೇಶ ಕ್ರಮೇಣ 4 ಮತ್ತು 5 ನೇ ಸ್ಥಾನದಲ್ಲಿವೆ ಎಂದು ನಾಯಕ್ ಹೇಳಿದ್ದಾರೆ. ಗುಜರಾತ್ ನಲ್ಲಿ ಶೇ.8.05 ರಷ್ಟು (ಅಂದರೆ 1.64  ಲಕ್ಷ ) ಅನರ್ಹ ಲಾಭಾರ್ಥಿಗಳಿದ್ದರೆ, ಉತ್ತರ ಪ್ರದೇಶದಲ್ಲಿ ಶೇ.8.01ರಷ್ಟು (ಅಂದರೆ 1.64 ಲಕ್ಷ ) ಅನರ್ಹ ಲಾಭಾರ್ಥಿಗಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News