ನವದೆಹಲಿ: ಮಹಾರಾಷ್ಟ್ರದಲ್ಲಿ ನಡೆದ ತಕ್ಷಣದ ರಾಜಕೀಯ ಬೆಳವಣಿಗೆಗಳು ಪ್ರೊಫೆಸರ್ ಆರೋಗ್ಯದ ಮೇಲೆ ಪರಿಣಾಮ ಬೀರಿ ಅವರು ರಜೆಗೆ ಅರ್ಜಿ ಹಾಕಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಚಂದ್ರಪುರ ನಗರದಿಂದ 43 ಕಿ.ಮೀ ದೂರದಲ್ಲಿರುವ ಗಡ್ಚಂದೂರಿನ ಕಾಲೇಜಿನಲ್ಲಿ ಇಂಗ್ಲಿಷ್ ಕಲಿಸುವ ಜಹೀರ್ ಸೈಯದ್, 'ರಾಜ್ಯದಲ್ಲಿನ ರಾಜಕೀಯ ನಾಟಕದ ಸುದ್ದಿ ನೋಡಿದ ನಂತರ ನಾನು ಅಸ್ವಸ್ಥನಾಗಿದ್ದೆ. ತದನಂತರ ನಾನು ರಜೆಗಾಗಿ ಅರ್ಜಿಯನ್ನು ಸಲ್ಲಿಸಿದ್ದೆ, ಆದರೆ ಅದನ್ನು ಕಾಲೇಜು ಪ್ರಾಂಶುಪಾಲರು ತಿರಸ್ಕರಿಸಿದ್ದಾರೆ' ಎಂದು ಹೇಳಿದರು.ಈಗ ಪ್ರಾಧ್ಯಾಪಕರ ಉದ್ದೇಶಿತ ರಜೆ ಅರ್ಜಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಶನಿವಾರದಂದು ನಡೆದ ಮಹತ್ತರ ರಾಜಕೀಯ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಎನ್‌ಸಿಪಿಯ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.


ರಾಷ್ಟ್ರಪತಿಗಳ ಆಡಳಿತದಲ್ಲಿದ್ದ  ಮಹಾರಾಷ್ಟ್ರದಲ್ಲಿ ಎನ್‌ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ರಾಜ್ಯದಲ್ಲಿ ಒಕ್ಕೂಟವನ್ನು ರಚಿಸುವ ವ್ಯವಸ್ಥೆಯನ್ನು ಬಹುತೇಕ ಅಂತಿಮಗೊಳಿಸಿದ ಒಂದು ದಿನದ ನಂತರ ಈ ರಾಜಕೀಯ ಬೆಳವಣಿಗೆ ಉಂಟಾಯಿತು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಅಜಿತ್ ಅವರ ನಿರ್ಧಾರ ಅವರ ವೈಯಕ್ತಿಕ ಮತ್ತು ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.