ನವದೆಹಲಿ : ಇಲ್ಲಿನ ಲೇಡಿ ಶ್ರೀ ರಾಮ್‌ ಕಾಲೇಜ್‌ ಮತ್ತು ದೆಹಲಿ ವಿಶ್ವವಿದ್ಯಾನಿಲಯದ ವಿವಿಗೆ ಸಂಯೋಜಿತವಾಗಿರುವ ಇತರ ಕೆಲವು ಕಾಲೇಜುಗಳ ವಿದ್ಯಾರ್ಥಿನಿಗಳ ಮೇಲೆ ವೀರ್ಯ ತುಂಬಿದ ಬಲೂನ್‌ಗಳನ್ನು ಎಸೆದ ಘಟನೆಯನ್ನು ವಿರೋಧಿಸಿ ದೆಹಲಿಯ ಪ್ರತಿಷ್ಠಿತ ಜೀಸಸ್‌ ಆ್ಯಂಡ್‌ ಮೇರಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದೆಹಲಿ ಪೊಲೀಸ್‌ ಪ್ರಧಾನ ಕಾರ್ಯಾಲಯದ ಎದುರು ಭಾರೀ ಪ್ರತಿಭಟನೆ ನಡೆಸಿದರು. 


COMMERCIAL BREAK
SCROLL TO CONTINUE READING

ವಿದ್ಯಾರ್ಥಿನಿಯರಿಗೆ ತಮ್ಮ ಕಾಲೇಜುಗಳ ಒಳಗೆ ಮತ್ತು ಹೊರಗೆ ರಕ್ಷಣೆ ನೀಡಬೇಕು ಎಂದು ಫಲಕಗಳನ್ನು ಹಿಡಿದು ಪ್ರತಿಭಟನಕಾರರು ಘೋಷಣೆ ಕೂಗಿದರು. ಆ ಫಲಕಗಳಲ್ಲಿ "ವೀರ್ಯ ತುಂಬಿದ ಬಲೂನುಗಳ ದಾಳಿಗೆ ವಿದ್ಯಾರ್ಥಿನಿಯರು ಗುರಿಯಾಗುವುದನ್ನು ನಾವು ತಡೆಯೋಣ; ನಮ್ಮ ಸಿಟ್ಟಿನ, ಧ್ವನಿಯನ್ನು ನಾವು ಏರಿಸೋಣ" ಎಂಬ ಬರಹಗಳಿದ್ದವು.


ಹೋಳಿ ಹಬ್ಬದ ಸಂದರ್ಭದಲ್ಲಿ ಬಣ್ಣದ ನೀರನ್ನು ಎರಚುವ ಬದಲು ದುಷ್ಕರ್ಮಿಗಳು ಹುಡುಗಿಯರ ಮೇಲೆ ವೀರ್ಯ ತುಂಬಿದ ಬಲೂನುಗಳನ್ನು ಎಸೆದಿದ್ದನ್ನು ವಿರೋಧಿಸಿ ಎಲ್‌ಎಸ್‌ಆರ್‌ ನ ಕೆಲವರು ಪ್ರತಿಭಟನೆಗೆ ಕರೆ ನೀಡಿದ್ದರು. 


ದಕ್ಷಿಣ ದೆಹಲಿಯ ಕಾಲೇಜೊಂದರ ವಿದ್ಯಾರ್ಥಿನಿಯು ತನ್ನ ಮೇಲೆ ದುಷ್ಕರ್ಮಿಗಳು ಯಾವುದೋ ಬಿಳಿ ದ್ರವವನ್ನು ತುಂಬಿದ ಬಲೂನ್‌ ಎಸೆಡಿದ್ದು, ಆ ಬಳುನಿನಲ್ಲಿದ್ದ ದ್ರವ ಆಕೆಯ ಕಪ್ಪು ಬಣ್ಣದ ಲೆಗ್ಗಿಂಗ್‌ ಮೇಲೆ ಚೆಲ್ಲಿದಾಗ ಅದು ಬಿಳಿ ಬಣ್ಣದ ಕಲೆಗೆ ತಿರುಗಿತ್ತು. ನಂತರ ಆಕೆಯ ಸ್ನೇಹಿತೆ, "ಬಲೂನಿನಲ್ಲಿ ನೀರಿನ ಬದಲು ವೀರ್ಯ ತುಂಬಿ ಎಸೆಯಲಾಗಿದ್ದುದೇ ಇದಕ್ಕೆ ಕಾರಣ" ಎಂದು ತಿಳಿಸಿದ್ದಳು. 


ಈ ಘಟನೆಯ ತರುವಾಯ, ಕಾಲೇಜಿನ ಮಹಿಳಾ ಅಭಿವೃದ್ಧಿ ಘಟಕವು ಕನಿಷ್ಠ 40 ವಿದ್ಯಾರ್ಥಿಗಳೊಂದಿಗೆ ತುರ್ತು ಸಭೆ ನಡೆಸಿದರು. ಆಗ ಅಲ್ಲಿ ಬೆಳಕಿಗೆ ಬಂದ ಅಂಶವೆಂದರೆ, ಇದೇ ರೀತಿ ಇತರ 3 ವಿದ್ಯಾರ್ಥಿನಿಯರ ಮೇಲೆ ಎಸೆಯಲಾಗಿದೆ ಎಂಬುದು. ಆ ಕೂಡಲೇ ಕಾಲೇಜಿನ ವತಿಯಿಂದ  ಸಾರ್ವಜನಿಕ ಪ್ರತಿಭಟನೆ ಮಾಡಲು ತೀರ್ಮಾನಿಸಲಾಯಿತು ಎನ್ನಲಾಗಿದೆ. 


ಈ ಘಟನೆ ಸಂಬಂಧ ಪೋಲಿಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಆದರೆ, ಇಂತಹ ಘಟನೆ ಮರುಕಳಿಸಿದರೆ ಕೂಡಲೇ ದೂರು ನೀಡುವಂತೆ ವಿದ್ಯಾರ್ಥಿನಿಯರಿಗೆ ಪೋಲಿಸ್ ಅಧಿಕಾರಿಗಳು ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದಾರೆ ಎನ್ನಲಾಗಿದೆ.