Pulwama Attack: ಪುಲ್ವಾಮ ಕರಾಳ ದಿನಕ್ಕೆ 4 ವರ್ಷ: ಫೆ.14 ರ ಆ ದಿನ ನಡೆದಿದ್ದಾದರು ಏನು? ವೀರರ ಮರಣಕ್ಕೆ ಭಾರತ ಸೇಡು ತೀರಿಸಿಕೊಂಡಿದ್ದು ಹೇಗೆ?
Pulwama Attack 4 Year Anniversary: ಪುಲ್ವಾಮ ದಾಳಿ ನಡೆದು ಇಂದಿಗೆ ನಾಲ್ಕು ವರ್ಷ ಪೂರ್ಣಗೊಂಡಿದೆ. 2019 ರಲ್ಲಿ ನಡೆದ ಈ ದಾಳಿಯಲ್ಲಿ ಭಾರತಾಂಬೆಯ 40 ವೀರ ಪುತ್ರರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದರು. ಆತ್ಮಹತ್ಯಾ ಬಾಂಬರ್ ಸ್ಫೋಟಕಗಳನ್ನು ತುಂಬಿದ ವಾಹನ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿತ್ತು.
Pulwama Attack 4 Year Anniversary: ಅದು 40 ಮನೆಗಳನ್ನು ಬೆಳಗುತ್ತಿದ್ದ ದೀಪ ಆರಿದ ದಿನ. ದೇಶದ ಕಣ್ಣುಗಳಲ್ಲಿ ಆಕ್ರೋಶ ತುಂಬಿ, ದುಃಖ ಉಮ್ಮಳಿಸಿ ಬಂದ ದಿನ. ರಕ್ತನಾಳಗಳಲ್ಲಿ ಬಿಸಿ ರಕ್ತ ಜಿನುಗುತ್ತಿದ್ದರೂ, 40 ವೀರ ಯೋಧರ ಛಿದ್ರ ಛಿದ್ರ ದೇಹಗಳನ್ನು ಕಂಡಾಗ ಕಣ್ಣೀರು ಧರೆ ಮುಟ್ಟಿದ ದಿನ. ಹೌದು ಅದುವೇ ಪುಲ್ವಾಮ ಕರಾಳ ದಿನ.
ಪುಲ್ವಾಮ ದಾಳಿ ನಡೆದು ಇಂದಿಗೆ ನಾಲ್ಕು ವರ್ಷ ಪೂರ್ಣಗೊಂಡಿದೆ. 2019 ರಲ್ಲಿ ನಡೆದ ಈ ದಾಳಿಯಲ್ಲಿ ಭಾರತಾಂಬೆಯ 40 ವೀರ ಪುತ್ರರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದರು. ಆತ್ಮಹತ್ಯಾ ಬಾಂಬರ್ ಸ್ಫೋಟಕಗಳನ್ನು ತುಂಬಿದ ವಾಹನ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿತ್ತು.
ಇದನ್ನೂ ಓದಿ: ಏರೋ ಇಂಡಿಯಾ ದೇಶದ ಉತ್ಪಾದನಾ ಸಾಮರ್ಥ್ಯ ಪ್ರದರ್ಶಿಸಲಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಟಿವಿ ಪರದೆಗಳು, ಮೊಬೈಲ್ ನೋಟಿಫಿಕೇಶನ್ ಮತ್ತು ಪತ್ರಿಕೆಗಳು ಈ ಕ್ರೂರ ದಾಳಿಯ ಬಗ್ಗೆ ಸುದ್ದಿಯನ್ನು ಬಿತ್ತರಿಸುತ್ತಲೇ ಇದ್ದವು. ಮತ್ತೊಂದೆಡೆ ಸುಟ್ಟ ದೇಹಗಳು, ಸುಟ್ಟ ಟ್ರಕ್‌ಗಳು… ಒಟ್ಟಾರೆ ಹತ್ಯಾಕಾಂಡದ ಹೃದಯ ವಿದ್ರಾವಕ ದೃಶ್ಯಗಳು ಕಣ್ಣಮುಂದೆ ಕಾಡತೊಡಗಿದವು.
ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಸಂಘಟನೆ ಈ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡು ವೀಡಿಯೊವನ್ನು ಬಿಡುಗಡೆ ಮಾಡಿತು. ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾದ 22 ವರ್ಷದ ಆತ್ಮಾಹುತಿ ಬಾಂಬರ್ ಪುಲ್ವಾಮಾ ಜಿಲ್ಲೆಯ ಲೆಥ್ಪೋರಾದಲ್ಲಿ ಬೆಂಗಾವಲು ವಾಹನಕ್ಕೆ ಸ್ಫೋಟಕ ತುಂಬಿದ ತನ್ನ ವಾಹನಗಳನ್ನು ಡಿಕ್ಕಿ ಹೊಡೆದಿದ್ದ. ಈತ ಕಾಶ್ಮೀರದ ನಿವಾಸಿಯಾಗಿದ್ದು, ಕುಟುಂಬದ ಪ್ರಕಾರ 2018 ರಲ್ಲಿ ನಾಪತ್ತೆಯಾಗಿದ್ದನಂತೆ.
2019 ರ ಪುಲ್ವಾಮಾ ದಾಳಿಯ ನಂತರ ಏನಾಯಿತು? ದ್ವೇಷ ಕಾರಿದ ಭಾರತಾಂಬೆ ಮಾಡಿದ್ದೇನು?
ಫೆಬ್ರವರಿ 15, 2019ರಂದು, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ದಾಳಿಗೆ ಪಾಕಿಸ್ತಾನವನ್ನು ಆರೋಪಿಸಿತು. ಆದರೆ ಪಾಕಿಸ್ತಾನವು ದಾಳಿಯನ್ನು ಖಂಡಿಸುವ ಎಲ್ಲಾ ಆರೋಪಗಳನ್ನು ನಿರಾಕರಿಸಿತು. ಸರಣಿ ಸಭೆಗಳ ನಂತರ ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಮೋಸ್ಟ್ ಫೇವರ್ಡ್ ನೇಷನ್ (MFN) ಸ್ಥಾನಮಾನವನ್ನು ಹಿಂಪಡೆಯಲು ನಿರ್ಧರಿಸಿತು.
ಅಷ್ಟೇ ಅಲ್ಲ, ತನ್ನ ಸೈನಿಕರ ಸಾವಿಗೆ ಶೋಕಿಸುತ್ತಿದ್ದ ರಾಷ್ಟ್ರವು ಕೋಪ ಮತ್ತು ದುಃಖದಿಂದ ಕೊತ ಕೊತ ಉರಿಯಲಾರಂಭಿಸಿತು. ಹುತಾತ್ಮ ಯೋಧರ ಕುಟುಂಬಕ್ಕೆ 12 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಘೋಷಿಸಲಾಯಿತು. ಭಾರತವು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುವ ಎಲ್ಲಾ ಸರಕುಗಳ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 200 ಕ್ಕೆ ಏರಿಸಿತು. ಇದರ ಜೊತೆಗೆ, ಭಾರತವು ತನ್ನ 'ಕಪ್ಪು ಪಟ್ಟಿಗೆ' ಪಾಕಿಸ್ತಾನವನ್ನು ಸೇರಿಸಲು ಮನಿ ಲಾಂಡರಿಂಗ್ (ಎಫ್‌ಎಟಿಎಫ್) ಮೇಲೆ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಅನ್ನು ಮಾಡಲು ಒತ್ತಾಯಿಸಿತು.
ಫೆಬ್ರವರಿ 18, 2019 ರಂದು ಭಾರತೀಯ ಸೇನೆಯು ಹಗಲಿನ ವೇಳೆಯಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿತು. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದಲ್ಲಿ ತಿಂಗಳಿನಿಂದ ಉದ್ವಿಗ್ನತೆ ಕಂಡುಬಂದಿದ್ದರಿಂದ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿದೆ.
ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್: ಸಾವು-ನೋವಿನ ರುಚಿ ತೋರಿಸಿದ ವೀರ ಯೋಧರು
ಉದ್ವಿಗ್ನತೆಯ ಪ್ರಮುಖ ಉಲ್ಬಣದ ನಡುವೆ ಫೆಬ್ರವರಿ 26, 2019 ರಂದು ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿನ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ನಡೆಸಿತು. ರಕ್ಷಣಾ ಪಡೆಗಳ ಪ್ರಕಾರ ದಾಳಿಯಲ್ಲಿ ಹಲವಾರು ಭಯೋತ್ಪಾದಕರು ಹತರಾಗಿದ್ದರು. ಪ್ರತೀಕಾರವಾಗಿ, ಪಾಕಿಸ್ತಾನವು ಮರುದಿನ ವಾಯುದಾಳಿಗಳನ್ನು ಪ್ರಾರಂಭಿಸಿತು. ಈ ಸಮಯದಲ್ಲಿ MIG-21 ಫೈಟರ್ ಜೆಟ್ ಪೈಲಟ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ PAF ನ F-16 ಅನ್ನು ಹೊಡೆದುರುಳಿಸಿದರು. ಈ ಪ್ರಯತ್ನದಲ್ಲಿ, ವಿಂಗ್ ಕಮಾಂಡರ್ ವರ್ಧಮಾನ್ ಪಾಕಿಸ್ತಾನದ ಭೂಪ್ರದೇಶಕ್ಕೆ ನುಗ್ಗಿದ್ದರು. ತಕ್ಷಣವೇ ಅವರ ವಿಮಾನವನ್ನು ಮತ್ತು ಅವರನ್ನು ಪಾಕಿಸ್ತಾನಿ ಸೇನೆಯು ವಶಕ್ಕೆ ಪಡೆಯಿತು. ಆ ಬಳಿಕ ಭಾರತ ಸರ್ಕಾರದ ಕಠಿಣ ನಿರ್ಧಾರಗಳನ್ನು ಕಂಡ ಪಾಕಿಸ್ತಾನ ಕಮಾಂಡರ್ ಅವರನ್ನು ಮಾರ್ಚ್ 1, 2019 ರ ರಾತ್ರಿ ಬಿಡುಗಡೆ ಮಾಡಿತು. ನಂತರ ಅಭಿನಂದನ್ ವರ್ಧಮಾನ್ ಅವರಿಗೆ ದೇಶದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ವೀರ ಚಕ್ರವನ್ನು ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ: 246 ಕಿಮೀ ರಸ್ತೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಪುಲ್ವಾಮಾ ದಾಳಿಗೆ ನಾಲ್ಕು ವರ್ಷ:
ಇಂದಿಗೆ ಪುಲ್ವಾಮ ದಾಳಿ ನಡೆದು ನಾಲ್ಕು ವರ್ಷ ಪೂರ್ಣಗೊಂಡಿದೆ. ಅಂದು ದಾಳಿಯನ್ನು ಖಂಡಿಸಿ ಹಲವಾರು ಜಾಗರಣೆ, ಕ್ಯಾಂಡಲ್ ಲೈಟ್ ಮೆರವಣಿಗೆಗಳು ಭಾರತದ ಬೀದಿ ಬೀದಿಗಳಲ್ಲಿ ನಡೆದಿದ್ದವು. ವೀರ ಯೋಧರ ಸಾವಿಗೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಂದಾಗಲಿ, ಎಂದಾಗಲಿ… ಪ್ರತಿ ವರ್ಷ ಭಾರತವು ದೇಶ ಕೊಂಡಾಡುವ ಧೈರ್ಯಶಾಲಿಗಳಿಗೆ ಗೌರವ ಸಲ್ಲಿಸುತ್ತದೆ, ಸಲ್ಲಿಸುತ್ತಲೇ ಇರುತ್ತದೆ. ಇದುವೇ ಪ್ರತೀ ಭಾರತೀಯನ ಧ್ಯೇಯ-ಕರ್ತವ್ಯ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.