ರಾಜನ ತೆರಿಗೆ ವಿರೋಧಿಸಿ ತಮ್ಮ ಸ್ತನವನ್ನೇ ಕತ್ತರಿಸಿದ್ದ ನಂಗೇಲಿ ಮಹಿಳೆಯ ಬಗ್ಗೆ ನಿಮಗೆಷ್ಟು ಗೊತ್ತು?

ಇಂತಹ ಪಿತೃಪ್ರಧಾನ ವ್ಯವಸ್ಥೆಯು ಈ ಹಿಂದೆ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಸ್ತನ ತೆರಿಗೆಯನ್ನು ವಿಧಿಸುತ್ತಿತ್ತು ಎಂದರೆ ನೀವು ನಂಬುತ್ತೀರಾ? ಹೌದು, ಇದನ್ನು ನೀವು ನಂಬಲೇಬೇಕು ಅಚ್ಚರಿ ಎಂದರೆ ಈ ಹಿಂದೆ ಕೆಳ ಜಾತಿಯ ಮಹಿಳೆಯರು ತಮ್ಮ ಸ್ತನಗಳ ಗಾತ್ರದ ಆಧಾರದ ಮೇಲೆ ತೆರಿಗೆಯನ್ನು ವಿಧಿಸಬೇಕಾಗಿತ್ತು.ಇಂತಹ ಸಂದರ್ಭದಲ್ಲಿ ಇಂತಹ ಅನಿಷ್ಟ ಆಚರಣೆಯ ವಿರುದ್ಧ ಸಿಡಿದೆದ್ದ ಧಿಟ್ಟ ಮಹಿಳೆ ಹೋರಾಟದ ಕಥನವನ್ನು ನಾವು ಈಗ ಇಲ್ಲಿ ಹೇಳಲು ಹೊರಟಿದ್ದೇವೆ.

Written by - Zee Kannada News Desk | Last Updated : Feb 11, 2023, 08:30 PM IST
  • ಸ್ಥಳೀಯ ಗ್ರಾಮಸ್ಥರ ಪ್ರಕಾರ ನಂಗೇಲಿ ಅತಿಯಾದ ರಕ್ತ ಸೋರಿಕೆಯಿಂದ ಸಾವನ್ನಪ್ಪುತ್ತಾರೆ.
  • ಇದನ್ನು ನೋಡಿದ ತಕ್ಷಣ ಪತಿ ಮನನೊಂದ ಪತಿಯೂ ಕೂಡ ಆಕೆಯ ಅಂತ್ಯಕ್ರಿಯೆಗೆ ಹಾರಿ ಆತ್ಮಹತ್ಯೆಗೆ ಶರಣಾಗುತ್ತಾರೆ.
  • ನಂಗೇಲಿಯ ಸಾವಿನ ನಂತರ, ತಿರುವಾಂಕೂರಿನಲ್ಲಿ ಸ್ತನ ತೆರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಲಾಯಿತು.
ರಾಜನ ತೆರಿಗೆ ವಿರೋಧಿಸಿ ತಮ್ಮ ಸ್ತನವನ್ನೇ ಕತ್ತರಿಸಿದ್ದ ನಂಗೇಲಿ ಮಹಿಳೆಯ ಬಗ್ಗೆ ನಿಮಗೆಷ್ಟು ಗೊತ್ತು? title=
Photo Courtsey: Twitter

ನವದೆಹಲಿ: ಪಿತೃಪ್ರಧಾನ ಜಗತ್ತಿನಲ್ಲಿ ಮಹಿಳಾ ಕೇಂದ್ರಿತ ಕಟ್ಟಪ್ಪಣೆಗಳನ್ನು ಇಂದಿಗೂ ಕೂಡ ನಾವು ನೋಡಬಹುದಾಗಿದೆ.ಆ ಮೂಲಕ ಮಹಿಳೆಯು ಇಂದಿಗೂ ಕೂಡ ಧಾರ್ಮಿಕ ಕಟ್ಟುಪಾಡುಗಳಿಗೆ ಅನಿವಾರ್ಯವಾಗಿ ಒಳಗಾಗುತ್ತಿದ್ದಾಳೆ.

ಇಂತಹ ಪಿತೃಪ್ರಧಾನ ವ್ಯವಸ್ಥೆಯು ಈ ಹಿಂದೆ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಸ್ತನ ತೆರಿಗೆಯನ್ನು ವಿಧಿಸುತ್ತಿತ್ತು ಎಂದರೆ ನೀವು ನಂಬುತ್ತೀರಾ? ಹೌದು, ಇದನ್ನು ನೀವು ನಂಬಲೇಬೇಕು ಅಚ್ಚರಿ ಎಂದರೆ ಈ ಹಿಂದೆ ಕೆಳ ಜಾತಿಯ ಮಹಿಳೆಯರು ತಮ್ಮ ಸ್ತನಗಳ ಗಾತ್ರದ ಆಧಾರದ ಮೇಲೆ ತೆರಿಗೆಯನ್ನು ವಿಧಿಸಬೇಕಾಗಿತ್ತು.ಇಂತಹ ಸಂದರ್ಭದಲ್ಲಿ ಇಂತಹ ಅನಿಷ್ಟ ಆಚರಣೆಯ ವಿರುದ್ಧ ಸಿಡಿದೆದ್ದ ಧಿಟ್ಟ ಮಹಿಳೆ ಹೋರಾಟದ ಕಥನವನ್ನು ನಾವು ಈಗ ಇಲ್ಲಿ ಹೇಳಲು ಹೊರಟಿದ್ದೇವೆ.

ಸಾಮಾನ್ಯವಾಗಿ ಸಮಾಜದಲ್ಲಿ ಕೆಲವು ಆಚರಣೆಗಳನ್ನು ಮಹಿಳೆಯರು ಅನಿವಾರ್ಯವಾಗಿ ಒಪ್ಪಿಕೊಳ್ಳುತ್ತಾ ಅವುಗಳಿಗೆ ಸಹಮತವನ್ನು ನೀಡುತ್ತಾ ಬಂದಿರುತ್ತಾರೆ, ಆದರೆ ಕೆಲವೇ ಕೆಲವು ಮಹಿಳೆಯರು ಮಾತ್ರ ಇಂತಹ ಆಚರಣೆಗಳ ವಿರುದ್ಧ ನಿಲ್ಲುವಷ್ಟು ಧೈರ್ಯವನ್ನು ತೋರುತ್ತಾರೆ.ಅಂತಹ ಮಹಿಳೆಯರಲ್ಲಿ ನಂಗೇಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ .ಕೇರಳದ ಚೇರ್ತಲಾಕ್ಕೆ ಸೇರಿದ ನಂಗೇಲಿ, 1800 ರ ದಶಕದಲ್ಲಿ ರಾಜ್ಯದಲ್ಲಿ ಕೆಳವರ್ಗದವರಿಗೆ ವಿಧಿಸಲಾಗುತ್ತಿದ್ದ ಸ್ತನ ತೆರಿಗೆ ಅಥವಾ ಮುಲಕ್ಕರಂ ವಿರುದ್ಧ ಪ್ರತಿಭಟಿಸಿದರು.ಮೂಲತಃ ಕೇರಳದ ಈಜವ ಜಾತಿಗೆ ಸೇರಿದ ನಂಗೇಲಿ, ಸ್ತನ ತೆರಿಗೆ ವಿರೋಧಿಸಲಿಕ್ಕಾಗಿ ಅವರು ತಮ್ಮ ಜೀವವನ್ನೇ ತ್ಯಾಗ ಮಾಡಿದರು .ಸಾಂಪ್ರದಾಯಿಕ ಕ್ರೂರ ವ್ಯವಸ್ಥೆಯನ್ನು ನಂಗೇಲಿ ಒಪ್ಪಿಕೊಳ್ಳದೆ ಅಂತಿಮವಾಗಿ ತೆರಿಗೆ ಪದ್ಧತಿ ವಿರುದ್ಧ ಸ್ತನಗಳನ್ನು ಕತ್ತರಿಸುವ ಮೂಲಕ ಬಂಡಾಯವೆದ್ದರು.

ಸ್ಥಳೀಯ ಗ್ರಾಮಸ್ಥರ ಪ್ರಕಾರ ನಂಗೇಲಿ ಅತಿಯಾದ ರಕ್ತ ಸೋರಿಕೆಯಿಂದ ಸಾವನ್ನಪ್ಪುತ್ತಾರೆ, ಇದನ್ನು ನೋಡಿದ ತಕ್ಷಣ ಪತಿ ಮನನೊಂದು ಆಕೆಯ ಅಂತ್ಯಕ್ರಿಯೆಗೆ ಹಾರಿ ಆತ್ಮಹತ್ಯೆಗೆ ಶರಣಾಗುತ್ತಾನೆ.ನಂಗೇಲಿಯ ಸಾವಿನ ನಂತರ, ತಿರುವಾಂಕೂರಿನಲ್ಲಿ ಸ್ತನ ತೆರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಲಾಯಿತು. ಆದರೆ ದುರದೃಷ್ಟವಶಾತ್,ಕೇರಳದ ಇತಿಹಾಸದಲ್ಲಿ ಇಂತಹ ಧಿಟ್ಟ ಮಹಿಳೆಯ ಹೋರಾಟವನ್ನು ಉಲ್ಲೇಖಿಸದಿರುವುದು ನಿಜಕ್ಕೂ ಅಚ್ಚರಿ ಸಂಗತಿ ಎಂದೇ ಹೇಳಬಹುದು.

ಅಷ್ಟಕ್ಕೂ ಸ್ತನ ತೆರಿಗೆ ವ್ಯವಸ್ಥೆ ಜಾರಿಯಲ್ಲಿದ್ದಿದ್ದೇಕೆ?

ಸ್ತನ ತೆರಿಗೆ ಎಂದರೆ ಮಹಿಳೆಯು ಸರ್ಕಾರಕ್ಕೆ ಶುಲ್ಕವನ್ನು ಪಾವತಿಸಿದರೆ ಮಾತ್ರ ಅವಳ ಸ್ತನಗಳನ್ನು ಮುಚ್ಚುವ ಹಕ್ಕನ್ನು ನೀಡಲಾಯಿತು. 1803 ರಲ್ಲಿ ಬ್ರಿಟಿಷರ ಆಳ್ವಿಕೆಯ ಭಾರತದಲ್ಲಿ ಅಸ್ತಿತ್ವದಲ್ಲಿದ್ದ 550 ರಾಜಪ್ರಭುತ್ವದ ರಾಜ್ಯಗಳಲ್ಲಿ ಒಂದಾಗಿದ್ದ ತಿರುವಾಂಕೂರ್ ದ ರಾಜನಿಂದ ಈ ತೆರಿಗೆಯನ್ನು ವಿಧಿಸಲಾಯಿತು.ರಾಜಮನೆತನದ ಅಧಿಕಾರಿಗಳು ಮನೆ ಮನೆಗೆ ತೆರಳಿ ಕೆಳಜಾತಿಯ ಮಹಿಳೆಯರಿಂದ ಈ ಸ್ತನ ತೆರಿಗೆಯನ್ನು ಸಂಗ್ರಹಿಸುತ್ತಿದ್ದರು.ಅಚ್ಚರಿ ಎಂದರೆ ಮಹಿಳೆಯರ ಸ್ತನದ ಗ್ರಾತ್ರದ ಆಧಾರದ ಮೇಲೆ ತೆರಿಗೆಯ ಮೊತ್ತವನ್ನು ನಿಗಧಿಪಡಿಸಲಾಗುತ್ತಿತ್ತು.ಸ್ತನ ತೆರಿಗೆ ಮೂಲ ಉದ್ದೇಶವು ಜಾತಿ ರಚನೆಯನ್ನು ಕಾಪಾಡಿಕೊಳ್ಳುವುದಾಗಿತ್ತು.ಹಾಗಾಗಿ ಆಗ ಜನರು ಧರಿಸುವ ಉಡುಗೆಯ ಆಧಾರ ಮೇಲೆ ಸಾಮಾಜಿಕ ಸ್ಥಾನಮಾನ ಮತ್ತು ವ್ಯಕ್ತಿಯ ಜಾತಿಯನ್ನು ಅಳೆಯಬಹುದಾಗಿತ್ತು.

ಆಗ ಪಿತೃಪ್ರಭುತ್ವವು ನಿಜಕ್ಕೂ ಹಿಂಸಾತ್ಮಕವಾಗಿತ್ತು.ತಿರುವಾಂಕೂರು ಸಾಮ್ರಾಜ್ಯದ ಅವಧಿಯಲ್ಲಿ, ಹಿಂದುಳಿದ ಮತ್ತು ದಲಿತ ಮಹಿಳೆಯರು ತೆರಿಗೆ ಪಾವತಿಸದ ಹೊರತು ತಮ್ಮ ಸ್ತನಗಳನ್ನು ಮುಚ್ಚಿಕೊಳ್ಳಲು ಅವಕಾಶವಿರಲಿಲ್ಲ ಮತ್ತು ಶುಲ್ಕವನ್ನು ಅವರ ಸ್ತನಗಳ ಗಾತ್ರದಿಂದ ನಿರ್ಧರಿಸಲಾಗುತ್ತಿತ್ತು.ಕೆಳ ಜಾತಿಯ ಮಹಿಳೆಯರನ್ನು ಅವಮಾನಿಸಲು ಮತ್ತು ಅವರ ಕೀಳು ಸ್ಥಿತಿಯನ್ನು ನೆನಪಿಸಲು ಈ ಪದ್ದತಿಯನ್ನು ಆಚರಣೆಯಲ್ಲಿ ಇಡಲಾಗಿತ್ತು ಎನ್ನುವುದನ್ನು ನಾವು ಇತಿಹಾಸದ ಪಾಠಗಳಿಂದ ತಿಳಿಯಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

 

 

Trending News