ರೈತರ ಪ್ರತಿಭಟನೆಗೆ ಬೆಂಬಲಸಿ ರಾಜೀನಾಮೆ ಸಲ್ಲಿಸಿದ ಪಂಜಾಬ್ DIG!
ಪಂಜಾಬ್ ಡಿಐಜಿ ಲಖ್ಮಿಂದರ್ ಸಿಂಗ್ ಜಖರ್ ಅವರು ರಾಜೀನಾಮೆ ಪತ್ರವನ್ನು ಪಂಜಾಬ್ ಸರ್ಕಾರಕ್ಕೆ ಸಲ್ಲಿಸಿದ್ದು, `ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ನನ್ನ ರೈತ ಸಹೋದರರೊಂದಿಗೆ ನಿಲ್ಲುವ ನನ್ನ ನಿರ್ಧಾರ`
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ, ರೈತರಿಗೆ ಬೆಂಬಲವಾಗಿ ಪಂಜಾಬ್ ಡಿಐಜಿ ಲಖ್ಮಿಂದರ್ ಸಿಂಗ್ ಜಖರ್ ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದಾರೆ.
ಪಂಜಾಬ್ ಡಿಐಜಿ ಲಖ್ಮಿಂದರ್ ಸಿಂಗ್ ಜಖರ್ ಅವರು ರಾಜೀನಾಮೆ(Resigns) ಪತ್ರವನ್ನು ಪಂಜಾಬ್ ಸರ್ಕಾರಕ್ಕೆ ಸಲ್ಲಿಸಿದ್ದು, 'ಕೃಷಿ ಕಾನೂನುಗಳ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ನನ್ನ ರೈತ ಸಹೋದರರೊಂದಿಗೆ ನಿಲ್ಲುವ ನನ್ನ ನಿರ್ಧಾರ' ಎಂದು ತಿಳಿಸಿದ್ದಾರೆ.
ಡಿ.14 ರಂದು ರೈತರ ಹೋರಾಟ ಬೆಂಬಲಿಸಿ ಆಮ್ ಆದ್ಮಿ ಪಕ್ಷದಿಂದ ಉಪವಾಸ ಸತ್ಯಾಗ್ರಹ
ದೆಹಲಿ ಗಡಿ ಭಾಗದಲ್ಲಿ ಕಳೆದ 18 ದಿನಗಳಿಂದ ಪಂಜಾಬ್, ಹರ್ಯಾಣ ಮತ್ತು ಇತರ ರಾಜ್ಯಗಳ ರೈತರು ಹೋರಾಟ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ತಮ್ಮ ಪದ್ಯವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದರು. ಎಸ್‌ಎಡಿ ಮುಖಂಡ ಸುಖ್ ದೇವ್ ಸಿಂಗ್ ಕೂಡ ರೈತ ಹೋರಾಟ ಬೆಂಬಲಿಸಿ ಪದ್ಮ ಭೂಷಣ ಪ್ರಶಸ್ತಿ ಹಿಂದಿರುಗಿಸುವುದಾಗಿ ಘೋಷಿಸಿದ್ದರು.
ಕೊರೊನಾ ಲಸಿಕೆಗೆ ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ
ಮಾತ್ರವಲ್ಲದೆ ಪಂಜಾಬ್ ನ ಹಲವು ಅಂತರಾಷ್ಟ್ರೀಯ ಕ್ರೀಡಾಪಟುಗಳು ರೈತರಿಗೆ ಬೆಂಬಲ ಸೂಚಿಸಿ ತಮಗೆ ಸಿಕ್ಕಿರುವ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ.
TRP Scam: Republic Media Network CEO ಬಂಧನ, ಏನಿತ್ತು ಆರೋಪ?