ಮುಂಬೈ: TRP Scam - ಟೆಲಿವಿಷನ್ ರೇಟಿಂಗ್ ಪಾಯಿಂಟ್ (TRP) ಪ್ರಕರಣದಲ್ಲಿ ಮುಂಬೈ ಪೊಲೀಸರು ಗಂಭೀರ ಕ್ರಮ ಕೈಗೊಂಡಿದ್ದು, ಮುಂಬೈ ಪೋಲೀಸರ ಅಪರಾಧ ಶಾಖೆ ರಿಪಬ್ಲಿಕ್ ಟಿವಿಯ CEO ವಿಕಾಸ್ ಖಾಂಚಂದಾನಿಯನ್ನು ಬಂಧಿಸಿದ್ದಾರೆ. ನಕಲಿ ಟಿಆರ್‌ಪಿ ಪ್ರಕರಣದಲ್ಲಿ ವಿಕಾಸ್ ಖಾನ್ ಚಂದಾನಿಯನ್ನು ಮುಂಬೈ ಪೊಲೀಸರು ಹಲವು ಬಾರಿ ಪ್ರಶ್ನಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
ಏನಿದು TRP ಹಗರಣ
ಈ ವರ್ಷದ ಅಕ್ಟೋಬರ್‌ನಲ್ಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ (TRP) ಹಗರಣ ಬೆಳಕಿಗೆ ಬಂದಿತ್ತು. ರೇಟಿಂಗ್ ಏಜೆನ್ಸಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಹನ್ಸಾ ರಿಸರ್ಚ್ ಗ್ರೂಪ್ (Hansa Research Group) ಮೂಲಕ ದೂರೊಂದನ್ನು ದಾಖಲಿಸಿತ್ತು. ಇದರಲ್ಲಿ ಕೆಲವು ಟೆಲಿವಿಷನ್ ಚಾನೆಲ್‌ಗಳು ಟಿಆರ್‌ಪಿ ಡೇಟಾವನ್ನು ಕುಶಲತೆಯಿಂದ ನಿರ್ವಹಿಸುತ್ತಿವೆ ಎಂದು ಆರೋಪಿಸಲಾಗಿತ್ತು. ಈ ಸಂದರ್ಭದಲ್ಲಿ, ರಿಪಬ್ಲಿಕ್ ಟಿವಿ ಮತ್ತು ಇತರ ಕೆಲವು ಚಾನೆಲ್‌ಗಳನ್ನು ವೀಕ್ಷಿಸಲು ಲಂಚ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದರು. ಆದರೆ ರಿಪಬ್ಲಿಕ್ ಟಿವಿ ಈ ಕುರಿತಾದ ಆರೋಪಗಳನ್ನು ತಳ್ಳಿಹಾಕಿತ್ತು.
ಇದನ್ನು ಓದಿ- ಟಿಆರ್‌ಪಿ ರೇಟಿಂಗ್ ತಿರುಚುವ ದಂಧೆ ಭೇದಿಸಿದ ಮುಂಬೈ ಪೋಲಿಸ್
ಈ ಕುರಿತು ಆರೋಪ ಮಾಡಿದ್ದ ಹನ್ಸಾ ಏಜೆನ್ಸಿ, ತನ್ನ ಹಳೆಯ ಉದ್ಯೋಗಿಗಳಲ್ಲಿ ಕೆಲವರು ಕಂಪನಿಯ ಡೇಟಾವನ್ನುಕದ್ದು ತನ್ಮೂಲಕ ಕೆಲವು ಚಾನೆಲ್‌ಗಳಿಗೆ ಟಿಆರ್‌ಪಿ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಹೇಳಿತ್ತು. ಕದ್ದ ಮಾಹಿತಿಯ ಮೂಲಕ, TRP ಮೀಟರ್ ಹೊಂದಿರುವ ಮನೆಗಳಲ್ಲಿ ಲಂಚವನ್ನು ನೀಡಿ ಚಾನೆಲ್ ವೀಕ್ಷಿಸಲು ಅವರನ್ನು ಕೋರಲಾಗಿತ್ತು, ಇದರಿಂದ ಆ ಚಾನಲ್‌ನ ಟಿಆರ್‌ಪಿ ಹೆಚ್ಚಾಗುತ್ತದೆ.
ಇದನ್ನು ಓದಿ-ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂ ನಿಂದ ಮಧ್ಯಂತರ ಜಾಮೀನು
ಇದುವರೆಗೆ 12 ಜನರ ಬಂಧನ
TRP ಹಗರಣದಲ್ಲಿ ಮುಂಬೈ ಪೋಲೀಸರ ಕ್ರೈಂ ಬ್ರಾಂಚ್ ಇದುವರೆಗೆ ವಿಕಾಸ್ ಖಾನ್ ಚಂದಾನಿ ಸೇರಿದಂತೆ ಒಟ್ಟು 12 ಜನರನ್ನು ಬಂಧಿಸಿದೆ. ಇದಕ್ಕೂ ಮೊದಲು ರಿಪಬ್ಲಿಕ್ ಟಿವಿಯ ಪಶ್ಚಿಮ ವಲಯದ ಡಿಸ್ಟ್ರಿಬ್ಯೂಶನ್ ಮುಖ್ಯಸ್ಥ ಘನಶ್ಯಾಮ್ ಸಿಂಗ್ ಅವರನ್ನು ಕೂಡ ಕಳೆದ ತಿಂಗಳು ಬಂಧನಕ್ಕೆ ಒಳಪಡಿಸಲಾಗಿದೆ. ಅವರಿಗೆ ಈ ತಿಂಗಳಿನಲ್ಲಿ ಜಾಮೀನು ದೊರೆತಿದೆ.