Punjab Election Result: ಪಂಜಾಬ್ ನಲ್ಲಿ ಕಾಂಗ್ರೆಸ್ ಸೋಲಿನ ನಂತರ ಸಿದ್ದು ನೀಡಿದ ಮೊದಲ ಹೇಳಿಕೆ ಏನು ?
ಕಾಂಗ್ರೆಸ್‌ನ ಪಂಜಾಬ್ ಚುನಾವಣಾ ಉಸ್ತುವಾರಿ ಹರೀಶ್ ಚೌಧರಿ ಸೋಲಿನ ಹೊಣೆ ಹೊತ್ತುಕೊಂಡಿದ್ದಾರೆ. ಪಂಜಾಬ್ ಜನರ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದ್ದಾರೆ.
ನವದೆಹಲಿ : ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ (Punjab Assembly election) ಆಮ್ ಆದ್ಮಿ ಪಕ್ಷ ಭಾರೀ ಬಹುಮತದೊಂದಿಗೆ ಜಯಭೇರಿ ಬಾರಿಸುತ್ತಿದೆ. ಅಂಕಿಅಂಶಗಳ ಪ್ರಕಾರ, AAP ಪಂಜಾಬ್‌ನಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಬಹುದು. ಆದರೆ ಕಾಂಗ್ರೆಸ್ (Congress) ಎರಡನೇ ಸ್ಥಾನದಲ್ಲಿದೆ. ಆಮ್ ಆದ್ಮಿ ಪಕ್ಷದ ಗೆಲುವಿಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು (Navjot singh sidhu) ಅಭಿನಂದನೆ ಸಲ್ಲಿಸಿದ್ದಾರೆ.
ಎಎಪಿ ಗೆಲುವಿಗಾಗಿ ಸಿಧು ಅಭಿನಂದನೆ :
ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು (Navjot singh sidhu) ಟ್ವೀಟ್ ಮಾಡುವ ಮೂಲಕ ಆಪ್ (AAP)ಅನ್ನು ಅಭಿನಂದಿಸಿದ್ದಾರೆ. ಜನರ ಧ್ವನಿ ದೇವರ ಧ್ವನಿಯಾಗಿದೆ ಎಂದು ಅವರು ಹೇಳಿದ್ದಾರೆ. ಪಂಜಾಬ್ ಜನತೆಯ ಆದೇಶವನ್ನು ನಮ್ರತೆಯಿಂದ ಸ್ವೀಕರಿಸುವುದಾಗಿ ಹೇಳಿದ್ದಾರೆ.
Punjab Result 2022 : ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಗೆ ಸೋಲು!n
ಸೋಲಿನ ಹೊಣೆ ಹೊತ್ತ ಹರೀಶ್ ಚೌಧರಿ :
ಕಾಂಗ್ರೆಸ್‌ನ (Congress) ಪಂಜಾಬ್ ಚುನಾವಣಾ ಉಸ್ತುವಾರಿ ಹರೀಶ್ ಚೌಧರಿ ಸೋಲಿನ ಹೊಣೆ ಹೊತ್ತುಕೊಂಡಿದ್ದಾರೆ. ಪಂಜಾಬ್ ಜನರ ನಿರ್ಧಾರವನ್ನು ಗೌರವಿಸುವುದಾಗಿ ಹೇಳಿದ್ದಾರೆ. ಸಂಸದ ಜಸ್ಬೀರ್ ಗಿಲ್ ಆರೋಪದ ಮೇಲೆ ಉತ್ತರಿಸಿದ ಚೌಧರಿ (Harish Chowdhary), 'ಈ ಚುನಾವಣೆಯಲ್ಲಿ ಗಿಲ್ ಎಲ್ಲಿದ್ದರು? ಅವರು ಅಕಾಲಿಗಳೊಂದಿಗೆ ಸೇರಿಕೊಂಡಿದ್ದರು ಎಂದು ಹೇಳಿದ್ದಾರೆ. ಇನ್ನು ರಾಜೀನಾಮೆ ಎನ್ನುವುದು ಪಕ್ಷದ ಆಂತರಿಕ ವಿಚಾರ ಎಂಡಿ ಅವರು ಹೇಳಿದ್ದಾರೆ. ಇದೇ ವೇಳೆ, ಸಿದ್ದು ರಾಜೀನಾಮೆ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹರೀಶ್ ಚೌಧರಿ ಸ್ಪಷ್ಟಪಡಿಸಿದ್ದಾರೆ.
ಪಂಜಾಬ್‌ನಲ್ಲಿ ಮುಂಚೂಣಿಯಲ್ಲಿರುವ ಆಪ್ :
ಪಂಜಾಬ್ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ 91 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Congress) 17 ಸ್ಥಾನಗಳಲ್ಲಿ, ಅಕಾಲಿದಳ (Akali dal) 6 ಸ್ಥಾನಗಳಲ್ಲಿ ಮತ್ತು ಇತರರು 3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಅಂಕಿ ಅಂಶಗಳ ಪ್ರಕಾರ ಪಂಜಾಬ್‌ನಲ್ಲಿ ಎಎಪಿ ಮೂರನೇ ಎರಡರಷ್ಟು ಬಹುಮತ ಪಡೆಯುತ್ತಿದೆ.
Goa Result 2022: ಬಹುಮತದತ್ತ ಬಿಜೆಪಿ ದಾಪುಗಾಲು.. ಮುನ್ನಡೆ ಕಾಯ್ದುಕೊಂಡ ಪ್ರಮೋದ್ ಸಾವಂತ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.