Goa Result 2022: ಬಹುಮತದತ್ತ ಬಿಜೆಪಿ ದಾಪುಗಾಲು.. ಮುನ್ನಡೆ ಕಾಯ್ದುಕೊಂಡ ಪ್ರಮೋದ್ ಸಾವಂತ್

ಬೆಳಗ್ಗೆ 10.30ಕ್ಕೆ ಭಾರತೀಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ರಾಜ್ಯದ ಒಟ್ಟು 40 ವಿಧಾನಸಭಾ (Vidhanasabha) ಸ್ಥಾನಗಳ ಪೈಕಿ 18 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

Written by - Chetana Devarmani | Last Updated : Mar 10, 2022, 12:48 PM IST
  • ಬಹುಮತದತ್ತ ಬಿಜೆಪಿ ದಾಪುಗಾಲು
  • ಮುನ್ನಡೆ ಕಾಯ್ದುಕೊಂಡ ಪ್ರಮೋದ್ ಸಾವಂತ್
  • ಬಿಜೆಪಿ 18 ಅಸೆಂಬ್ಲಿ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ
Goa Result 2022: ಬಹುಮತದತ್ತ ಬಿಜೆಪಿ ದಾಪುಗಾಲು.. ಮುನ್ನಡೆ ಕಾಯ್ದುಕೊಂಡ ಪ್ರಮೋದ್ ಸಾವಂತ್  title=
ಬಿಜೆಪಿ

ಪಣಜಿ (ಗೋವಾ): ಮತ ಎಣಿಕೆಯ ಆರಂಭಿಕ ಟ್ರೆಂಡ್‌ನಲ್ಲಿ ಬಿಜೆಪಿ (Goa Result 2022) 18 ಅಸೆಂಬ್ಲಿ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಗೋವಾದಲ್ಲಿ ಭಾರತೀಯ ಜನತಾ ಪಕ್ಷವು ಬಹುಮತದತ್ತ ದಾಪುಗಾಲು ಹಾಕುತ್ತಿದೆ. 

ಇದನ್ನೂ ಓದಿ: Election Results: ಪಂಚರಾಜ್ಯಗಳ ಫಲಿತಾಂಶದ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಬೆಳಗ್ಗೆ 10.30ಕ್ಕೆ ಭಾರತೀಯ ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ರಾಜ್ಯದ ಒಟ್ಟು 40 ವಿಧಾನಸಭಾ (Vidhanasabha) ಸ್ಥಾನಗಳ ಪೈಕಿ 18 ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಬಿಜೆಪಿ 18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ (Congress) 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಹಾಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Savant) ಅವರು ಸಾಂಕ್ವೆಲಿಮ್ ಅಸೆಂಬ್ಲಿ ಕ್ಷೇತ್ರದಲ್ಲಿ ಇದುವರೆಗೆ 300 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ ಎಂದು ಬೆಳಿಗ್ಗೆ 10:30 ಕ್ಕೆ ಅಧಿಕೃತ ಮಾಹಿತಿ ತಿಳಿಸಿದೆ. ರಾಜ್ಯದಲ್ಲಿ ಬಹುಮತಕ್ಕೆ 21 ವಿಧಾನಸಭಾ ಸ್ಥಾನಗಳಲ್ಲಿ ಗೆಲ್ಲಬೇಕಾಗುತ್ತದೆ. 

ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷವು ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಸಿಐ ಅಂಕಿಅಂಶಗಳು ತೋರಿಸಿದರೆ ಆಮ್ ಆದ್ಮಿ ಪಕ್ಷ (AAP) ಸಹ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: ಆಮ್ ಆದ್ಮಿ ಪಕ್ಷ ಪಂಜಾಬ್ ನಲ್ಲಿ ಕ್ಲೀನ್ ಸ್ವೀಪ್ ಮಾಡಿದ್ರೆ, ಸವಾಲುಗಳು ಏನಿರಲಿವೆ?

ಮತ ಹಂಚಿಕೆಗೆ ಸಂಬಂಧಿಸಿದಂತೆ, ಬಿಜೆಪಿ 33.74 ರಷ್ಟು ಮುನ್ನಡೆ ಸಾಧಿಸಿದೆ ಮತ್ತು ಕಾಂಗ್ರೆಸ್ 23.77 ರಷ್ಟು ಮತಗಳನ್ನು ಗಳಿಸಿದೆ. ಗೋವಾ ಫಾರ್ವರ್ಡ್ ಪಾರ್ಟಿ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.

ಬಿಜೆಪಿಯು (BJP) ರಾಜ್ಯದ ಎಲ್ಲಾ 40 ಸ್ಥಾನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಕಾಂಗ್ರೆಸ್‌ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತು. ಟಿಎಂಸಿ (TMC) ಚುನಾವಣೆಗಾಗಿ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಿತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News