ಪಠಾಣ್‌ಕೋಟ್: ಪಂಜಾಬ್‌ನ ಪಠಾಣ್‌ಕೋಟ್‌ನ ಮಿರ್ತಾಲ್ ಗ್ರಾಮದ ದಿನಂಗರ್ ರಸ್ತೆಯಲ್ಲಿ ವಿಶೇಷ ಕಾರ್ಯಪಡೆ ತಂಡ ನಡೆಸಿದ ದಾಳಿಯಲ್ಲಿ 1 ಕೆ.ಜಿ. ಹೆರಾಯಿನ್, ಟಾಟಾ ಕ್ಸೆನಾನ್ ಮತ್ತು 1.2 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಎಸ್‌ಟಿಎಫ್ ಕೈಗೊಂಡ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಬಲ್ವಿಂದರ್ ಸಿಂಗ್ ಅಲಿಯಾಸ್ ಬಿಲ್ಲಾ ಎಂಬ ಮಾದಕ ದ್ರವ್ಯ ವಿತರಣೆ ಮಾಡುವವನನ್ನು ಲುಧಿಯಾನ ಪೊಲೀಸ್ ಪಡೆ ಬಂಧಿಸಿದೆ. ಅವರ ಸಹಚರರಾದ ಜಗಮಂಜಿತ್ ಸಿಂಗ್ ಅಲಿಯಾಸ್ ಭೋಲಾ ಮತ್ತು ಸಹೋದರ ರಂಜೀತ್ ಸಿಂಗ್ ಪರಾರಿಯಾಗಿದ್ದಾರೆ. 


ಕಾರ್ಯಾಚರಣೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್‌ಟಿಎಫ್‌ನ ಎಐಜಿ ಸ್ನೇಹದೀಪ್ ಶರ್ಮಾ, ಬಲ್ವಿಂದರ್ ಮತ್ತು ಆತನ ಕುಟುಂಬದ ಇತರ ಸದಸ್ಯರು ಮಾದಕ ವಸ್ತುಗಳ ಮಾರಾಟದಲ್ಲಿ ಭಾಗಿಯಾಗಿದ್ದಾರೆ. ವಶಪಡಿಸಿಕೊಳ್ಳಲಾದ ಹೆರಾಯಿನ್ ಅನ್ನು ಮತ್ತೋರ್ವ ಡ್ರಗ್ ಮಾರಾಟಗಾರ ರಂಜಿತ್ ರಾಣಾ ಎಂಬಾತ ಬಿಲ್ಲಾನ ಮನೆಯಲ್ಲಿ ಇರಿಸಿದ್ದ ಎನ್ನಲಾಗಿದೆ.


ಈ ಹಿಂದೆ ಜೂನ್ 30ರಂದು ಪಂಜಾಬ್‌ನ ಅಮೃತಸರದ ಅಟಾರಿ ಗಡಿ ಬಳಿ ಕಸ್ಟಮ್ಸ್ ಇಲಾಖೆಯಿಂದ ನಡೆಸಿದ ಮಾದಕ ದ್ರವ್ಯ ದಾಳಿಯಲ್ಲಿ 532 ಕೆ.ಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಆ ಪ್ರಕರಣದ ಆರೋಪಿಗಳಲ್ಲಿ ರಾಣಾ ಸಹ ಒಬ್ಬ ಎನ್ನಲಾಗಿದೆ.