ಚಂಡೀಗಢ: ಇಸ್ಕೆಮಿಯಾ ಪಾರ್ಶ್ವವಾಯುಗೆ ತುತ್ತಾಗಿ ಸುಮಾರು ಒಂದು ತಿಂಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಪಂಜಾಬ್‌ನ ಬರ್ನಾಲಾ ಜಿಲ್ಲೆಯ 22 ವರ್ಷದ ವಿದ್ಯಾರ್ಥಿಯೊಬ್ಬ ಯುದ್ಧ ಪೀಡಿತ ಉಕ್ರೇನ್‌ (Ukraine) ನಲ್ಲಿ ಬುಧವಾರ ಮೃತಪಟ್ಟಿದ್ದಾನೆ.


COMMERCIAL BREAK
SCROLL TO CONTINUE READING

ಚಂದನ್ ಜಿಂದಾಲ್ ಅವರನ್ನು ಉಕ್ರೇನ್‌ನ ವಿನ್ನಿಟ್ಸಿಯಾ ತುರ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ. 


ಇದನ್ನೂ ಓದಿ: 'ಭಾರತದ ಹೆಚ್ಚುತ್ತಿರುವ ಶಕ್ತಿಯಿಂದಾಗಿ ಸ್ಥಳಾಂತರಿಸುವಿಕೆ ಸಾಧ್ಯವಾಗಿದೆ'- ಪ್ರಧಾನಿ ಮೋದಿ


ಈಗ ಅವರ ಪಾರ್ಥಿವ ಶರೀರವನ್ನು ವಾಪಸ್ ತರುವಂತೆ ಅವರ ಕುಟುಂಬ ಸರ್ಕಾರಕ್ಕೆ ಮನವಿ ಮಾಡಿದೆ.ಜಿಂದಾಲ್ ವಿನ್ನಿಟ್ಸಿಯಾ ನ್ಯಾಷನಲ್ ಪಿರೋಗೋವ್ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿ, ವಿನ್ನಿಟ್ಸಿಯಾದಲ್ಲಿ ಓದುತ್ತಿದ್ದರು ಎನ್ನಲಾಗಿದೆ.ಜಿಂದಾಲ್ ಅವರ ಚಿಕ್ಕಪ್ಪ ಕ್ರಿಶನ್ ಗೋಪಾಲ್ ಬರ್ನಾಲಾದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಫೆಬ್ರವರಿ 3 ರಂದು ಅವರ ಆರೋಗ್ಯದ ಬಗ್ಗೆ ಮಾಹಿತಿ ಸಿಕ್ಕಿತು ಮತ್ತು ಉಕ್ರೇನ್‌ (Russia Ukraine War)ನ ಅಧಿಕಾರಿಗಳು ಆಪರೇಷನ್ ಮಾಡಲು ಕುಟುಂಬದ ಅನುಮೋದನೆಯನ್ನು ಕೋರಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ: ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಯ ಸಾವಿನ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ ರಷ್ಯಾ


ಇನ್ನೊಂದೆಡೆಗೆ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವು ನೀಡುವಂತೆ ಬರ್ನಾಲಾ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಅವರು ಗೃಹ ಇಲಾಖೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.ಪತ್ರದ ಪ್ರಕಾರ, ತುರ್ತು ನಿಗಾಘಟಕದಲ್ಲಿ ದಾಖಲಾಗಿದ್ದ ಅವರು ಮೆದುಳಿನಲ್ಲಿ ರಕ್ತದ ಪೂರೈಕೆ ಕಡಿಮೆಯಾಗುತ್ತಿತ್ತು, ಇಂದು ಅವರು ಕೊನೆಯುಸಿರೆಳೆದಿದ್ದಾರೆ'ಎಂದು ಅವರು ಉಲ್ಲೇಖಿಸಿದ್ದಾರೆ.


ರೊಮೇನಿಯಾದ ಸಿರೆಟ್ ಗಡಿಯಿಂದ ಏರ್ ಆಂಬುಲೆನ್ಸ್ ಮೂಲಕ ತನ್ನ ಮಗನ ಮೃತದೇಹವನ್ನು ಭಾರತಕ್ಕೆ ತರಲು ಚಂದನ್ ತಂದೆ ಸರ್ಕಾರದ ಸಹಾಯವನ್ನು ಕೋರಿದ್ದಾರೆ.ಸೋಮವಾರದಂದು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನಲ್ಲಿ ರಷ್ಯಾದ ಶೆಲ್ ದಾಳಿಗೆ ಭಾರತೀಯ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.