Lockdownನಲ್ಲಿ ಲಂಡನ್ ನಲ್ಲಿ ಸಿಲುಕಿಕೊಂಡ Radhika Apte ಈ ಲುಕ್ ನೋಡಿ ನೀವು ನಿಬ್ಬೇರಗಾಗುವಿರಿ
ತನ್ನ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರೀಸ್ ವಿಭಾಗದಲ್ಲಿ ಖ್ಯಾತ ಬಾಲಿವುಡ್ ನಟಿ ರಾಧಿಕಾ ಆಪ್ಟೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋ ರಾಧಿಕಾ ತನ್ನ ಬೆಡ್ ಮೇಲೆ ಮಲಗಿ ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ.
ನವದೆಹಲಿ: ಖ್ಯಾತ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಲಾಕ್ ಡೌನ್ ಕಾರಣ ಲಂಡನ್ ನಲ್ಲಿ ಸಿಲುಕಿಕೊಂಡಿದ್ದಾಳೆ. ಇದೇ ವೇಳೆ ವ್ಯಾಯಾಮ ಮಾಡುವುದಕ್ಕೆ ಸಂಬಂಧಿಸಿದಂತೆ ಸ್ವಾರಸ್ಯಕರ ಪ್ರತಿಕ್ರಿಯೆ ನೀಡಿದ್ದಾಳೆ. ಹೌದು, ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಾಧಿಕಾ ಬೂಮ್ ರಾಂಗ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ತನ್ನ ಬೆಡ್ ಮೇಲೆ ಮಲಗಿರುವ ರಾಧಿಕಾ ವಿಚಿತ್ರ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ ಈ ಕುರಿತಾದ ಭಾವಚಿತ್ರದ ಮೇಲೆ ಎಕ್ಸರ್ಸೈಸ್? ಎಲ್ಲಿ? ಯಾವಾಗ? ಎಂದು ಬರೆದುಕೊಂಡಿದ್ದಾಳೆ.
'ಪ್ಯಾಡ್ ಮ್ಯಾನ್' ಚಿತ್ರದ ಈ ನಟಿ ಇದಕ್ಕೂ ಮೊದಲು ಪೋಸ್ಟ್ ವೊಂದನ್ನು ಹಂಚಿಕೊಂಡು ಮಧ್ಯಾಹ್ನದ ಊಟದಲ್ಲಿ ಏನನ್ನು ತಯಾರಿಸಿದ್ದಳು ಎಂದು ಹೇಳಿಕೊಂಡಿದ್ದಳು. ಈ ಕುರಿತು ಬರೆದುಕೊಂಡಿದ್ದ ನಟಿ, "ಲಂಚ್ ಗಾಗಿ ಮಸಲ್ಸ್. .. ಲಾಕ್ ಡೌನ್ ನಲ್ಲಿ ಲಂಡನ್ ನಲ್ಲಿರುವೆ ಹಾಗೂ ಕುಕ್ಕಿಂಗ್ ಮಾಡುತ್ತಿರುವೆ" ಎಂದು ಹೇಳಿದ್ದಳು.ಸದ್ಯ ರಾಧಿಕಾ ಲಂಡನ್ ನಲ್ಲಿ ತನ್ನ ಪತಿ ಬೆನೆಡಿಕ್ಟ್ ಟೈಲರ್ ಜೊತೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾಳೆ.
'ಪ್ಯಾಡ್ ಮ್ಯಾನ್' ಹಾಗೂ 'ಅಂಧಾಧುನ್' ಚಿತ್ರದಲ್ಲಿ ರಾಧಿಕಾ ನಿರ್ವಹಿಸಿದ ಪಾತ್ರಗಳಿಗೆ ಅಪಾರ ಮನ್ನಣೆ ದೊರೆತಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ರಾಧಿಕಾ ಅಪಾರ ಹಿಂಬಾಲಕರನ್ನು ಹೊಂದಿದ್ದಾಳೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಾಧಿಕಾ 32 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾಳೆ.