ನವದೆಹಲಿ: ರಫೇಲ್ ಒಪ್ಪಂದದ ವಿಚಾರವಾಗಿ ಪ್ರಧಾನಿ ಕಚೇರಿಯ ಪ್ರಗತಿ ಮೇಲ್ವಿಚಾರಣೆಯನ್ನು ಹಸ್ತಕ್ಷೇಪ ಅಥವಾ ಪ್ರತ್ಯೇಕ ಮಾತುಕತೆ ಎಂದು ಪರಿಗಣಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.


COMMERCIAL BREAK
SCROLL TO CONTINUE READING

ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಕೇಂದ್ರ ಸರಕಾರವು ಪ್ರಧಾನಿ ಕಚೇರಿಯೂ ಒಪ್ಪಂದದಲ್ಲಿನ ಬೆಳವಣಿಗೆ ಬಗೆಗಿನ ಮೇಲ್ವಿಚಾರಣೆಯನ್ನು ಮಧ್ಯಪ್ರವೇಶ ಅಥವಾ ಸಮಾನಾಂತರ ಸಮಾಲೋಚನೆ ಎಂದು ಪರಿಗಣಿಸುವಹಾಗಿಲ್ಲ ಎಂದು ಹೇಳಿದೆ."ಆಗಿನ ಗೌರವಾನ್ವಿತ ರಕ್ಷಣಾ ಮಂತ್ರಿ ಕಡತದಲ್ಲಿ ದಾಖಲಾಗಿದೆ...'ಪ್ರಧಾನಿ ಕಚೇರಿ ಮತ್ತು ಫ್ರೆಂಚ್ ಅಧ್ಯಕ್ಷರ ಕಚೇರಿಯು ಶೃಂಗಸಭೆಯ ಸಭೆಯ ಫಲಿತಾಂಶದ ಸಮಸ್ಯೆಗಳ ಪ್ರಗತಿಯನ್ನು ಗಮನಿಸುತ್ತಿವೆ' ಎಂದು ಅಫಿದಾವಿಟ್ ನಲ್ಲಿ ತಿಳಿಸಲಾಗಿದೆ. 


ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೊಯ್ ನೇತೃತ್ವದ ಪೀಠವು ಡಿಸೆಂಬರ್ 14, 2018 ರಂದು ರಫೆಲ್ ಯುದ್ಧ ವಿಮಾನದ  ಒಪ್ಪಂದದ ವಿಚಾರವಾಗಿ ನೀಡಿದ್ದ ಆದೇಶವನ್ನು ಮರು ಪರಿಶೀಲಿಸಲು ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈಗ ಪ್ರತಿಕ್ರಿಯೆ ನೀಡಿದೆ. 


ಕಳೆದ ಡಿಸೆಂಬರ್ 14 ರಂದು, ರಫೆಲ್ ಖರೀದಿಯ ಬಗ್ಗೆ ನ್ಯಾಯಾಲಯ-ಮೇಲ್ವಿಚಾರಣೆ ತನಿಖೆಗಾಗಿ ಆಗ್ರಹಿಸಿದ್ದ  ನಾಲ್ಕು ಅರ್ಜಿಗಳನ್ನು ಪೀಠವು ತಿರಸ್ಕರಿಸಿತ್ತು .ಇದರ ತರುವಾಯ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಯಿತು. ದಿ ಹಿಂದೂ ಪತ್ರಿಕೆ ಪ್ರಕಟಿಸಿದ ಕೆಲವೊಂದು ದಾಖಲೆಗಳ ಸ್ವೀಕಾರದ ವಿಚಾರವಾಗಿ ಸರ್ಕಾರ ಆಕ್ಷೇಪಣೆ ವ್ಯಕ್ತಪಡಿಸಿದೆ. ಆದರೆ ಏಪ್ರಿಲ್ 10 ರಂದು ಸರ್ವೋಚ್ಚ ನ್ಯಾಯಾಲಯವು ಸರ್ಕಾರದ ಆಕ್ಷೇಪಗಳನ್ನು ತಿರಸ್ಕರಿಸಿತು.