Rahul Gandhi Marriage : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮದುವೆ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ವಿವಾಹ ಯಾವಾಗ ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿಯವರು ಸಹ ಸರಿಯಾದ ಉತ್ತರ ಇದುವರೆಗೂ ನೀಡಿಲ್ಲ. ಇದೀಗ ತಾವು ಮದುವೆ ವಿರೋಧಿ ಅಲ್ಲ, ಸರಿಯಾದ ಬಾಳ ಸಂಗಾತಿ ಸಿಕ್ಕರೆ ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ತಿಳಿಸಿದ್ದಾರೆ. ಈ ಕುರಿತ ವಿಡಿಯೋ ಸೋಷಿಯಲ್‌ ಒಂದು ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಯೂಟ್ಯೂಬ್‌ ಚಾನೆಲ್‌ ಒಂದು ರಾಹುಲ್‌ ಗಾಂಧಿಯವರನ್ನು ಸಂದರ್ಶನ ನಡೆಸಿತ್ತು. ಅದರಲ್ಲಿ ರಾಗಾ ಅವರು, ತಮ್ಮ ಆಹಾರ ಕ್ರಮ ಹಾಗೂ ವ್ಯಾಯಾಮ ಸೇರಿದಂತೆ ಹಲವಾರು ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ, ವೈಯಕ್ತಿಕ ವಿಚಾರಗಳ ಕುರಿತು ರಾಹುಲ್‌ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ನಿರೂಪಕಿ ಕೇಳಿದ ಮದುವೆ ಪ್ರಶ್ನೆಗೆ ಕಾಂಗ್ರೆಸ್‌ ನಾಯಕ ನಗುತ್ತಲೇ ಉತ್ತರ ನೀಡಿದ್ದಾರೆ.


ರಸ್ತೆ ಮಧ್ಯ ಕಾರ್‌ ನಿಲ್ಲಿಸಿ ರಿಲ್ಸ್‌ ಮಾಡಿದ ಬ್ಯೂಟಿಗೆ 17 ಸಾವಿರ ರೂ. ದಂಡ..!


ʼಮದುವೆಗೆ ನನ್ನ ವಿರೋಧ ಇಲ್ಲ. ಸರಿಯಾದ ಹುಡುಗಿ ಸಿಕ್ಕರೆ ನಾನು ಮದುವೆಯಾಗುತ್ತೇನೆʼ ಎಂದಿದ್ದಾರೆ. ಅಲ್ಲದೆ, ಯಾವ ರೀತಿಯ ಹುಡುಗಿಯನ್ನು ಮದುವೆಯಾಗಲು ಇಷ್ಟ ಪಡ್ತೀರಾ ಅಂತ ಕೇಳಿದ ಪ್ರಶ್ನೆಗೆ, ʼಅತಿಯಾಗಿ ಪ್ರೀತಿಸುವ ಮತ್ತು ಬುದ್ದಿವಂತೆʼ ಇದ್ರೆ ಸಾಕು ಅಂತ ರಾಹುಲ್‌ ಗಾಂಧಿ ಒಪನ್‌ ಅಪ್‌ ಆಗಿ ತಮ್ಮ ಬಾಳ ಸಂಗಾತಿಗೆ ಇರಬೇಕಾದ ಅರ್ಹತೆ ಕುರಿತು ಮಾತನಾಡಿದ್ದಾರೆ.


ಈ ವಿಡಿಯೋವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಷ್ಟ್ರೀಯ ಸಂಯೋಜಕರಾದ ನಿತಿನ್ ಅಗರ್ವಾಲ್ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ, 129 ದಿನಗಳಲ್ಲಿ 12 ರಾಜ್ಯಗಳ ಮೂಲಕ ಭಾರತ್ ಜೋಡೋ ಪಾದಯಾತ್ರೆ ನಡೆಸಿದ ಕಾಂಗ್ರೆಸ್ ನಾಯಕ ಇದೀಗ ಜಮ್ಮುವಿನಲ್ಲಿದ್ದಾರೆ. ಜನವರಿ 30 ರಂದು ಶ್ರೀನಗರದ ತಮ್ಮ ಪಕ್ಷದ ಪ್ರಧಾನ ಕಚೇರಿಯಲ್ಲಿ ಮೆಗಾ ರ್ಯಾಲಿ ನಡೆಸಿ ರಾಷ್ಟ್ರಧ್ವಜವನ್ನು ಹಾರಿಸುವುದರೊಂದಿಗೆ ಯಾತ್ರೆಯನ್ನು ಕೊನೆಗೊಳಿಸಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.