Republic day 2023 : ಇನ್ನು ಎರಡು ದಿನ ಕಳೆದರೆ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಈ ಬಾರಿಯ ಗಣರಾಜ್ಯೋತ್ಸವ ಬಹಳ ವಿಶೇಷವಾಗಿರಲಿದೆ. ಈ ಸಮಾರಂಭದಲ್ಲಿ ಒಟ್ಟು 50 ಯುದ್ದ ವಿಮಾನಗಳು ಭಾಗವಹಿಸಲಿವೆ ಎಂದು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಾರಿ ನೌಕಾಪಡೆಯ ಐಎಲ್ 38 ಕೂಡಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದೆ. ಐಎಲ್ 38 ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದೆ. ಐಎಲ್ 38 ಭಾರತೀಯ ನೌಕಾಪಡೆಯ ಕಡಲ ವಿಚಕ್ಷಣ ವಿಮಾನವಾಗಿದೆ. ಕಳೆದ 42 ವರ್ಷಗಳಿಂದ ಇದು ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ.
ಇದೇ ಕೊನೆಯ ಬಾರಿಗೆ ಈ ಯುದ್ದ ವಿಮಾನದ ಪ್ರದರ್ಶನ :
ಐಎಲ್ 38 ಅನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಮತ್ತು ಬಹುಶಃ ಕೊನೆಯ ಬಾರಿಗೆ ಪ್ರದರ್ಶಿಸಲಾಗುವುದು ಎಂದು ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಟ್ಟು 50 ಯುದ್ದ ವಿಮಾನಗಳು ಈ ಬಾರಿ ಭಾಗಿಯಾಗಲಿವೆ.
Once the backbone of Maritime Reconnaissance, the IL 38 SD (Sea Dragon) ac would be phased out of #IndianNavy in 2023. The 'Winged Stallions' kept our waters safe since 1977 & are getting a Salute worth its weight in Gold on #RepublicDay as they flypast Kartavya path @indiannavy pic.twitter.com/QPKMEy1djQ
— Captain DK Sharma (@CaptDKS) January 20, 2023
ಇದನ್ನೂ ಓದಿ : ಪರಾಕ್ರಮ ದಿನದಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಮರಣೆ
ಐಎಎಫ್‌ನ ಟ್ಯಾಬ್ಲೋದ ಮಾದರಿಯೂ ಇರಲಿದೆ ಎಂದು ಭಾರತೀಯ ವಾಯುಸೇನೆ ತಿಳಿಸಿದೆ. ಇದನ್ನು ಜನವರಿ 26 ರಂದು ಪರೇಡ್ ನಲ್ಲಿ ಪ್ರದರ್ಶಿಸಲಾಗುವುದು.
Republic day 2023 Flypast Rehearsal 🇮🇳 #IndianAirForce #IndianArmy #RepublicDay pic.twitter.com/ON4NKuKOC5
— Udit arya, CSS (@Uditary55233664) January 21, 2023
ಭಾಗಿಯಾಗಲಿದೆ ಈಜಿಪ್ಟ್ ಸೇನಾ ತಂಡ :
ಈ ಸಮಾರಂಭದಲ್ಲಿ ಈಜಿಪ್ಟ್ ಸೇನಾ ತುಕಡಿಯೂ ಭಾಗವಹಿಸಲಿದೆ. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್ ಸಿಸಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿರಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನವೆಂಬರ್‌ನಲ್ಲಿ ತಿಳಿಸಿತ್ತು. ಗಣರಾಜ್ಯೋತ್ಸವದಂದು ಅರಬ್ ರಿಪಬ್ಲಿಕ್ ಆಫ್ ಈಜಿಪ್ಟ್‌ನ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದು ಇದೇ ಮೊದಲು.
ಇದನ್ನೂ ಓದಿ : PM Kisan: ಜ.28ರಂದು ಈ ಜನರ ಖಾತೆಗೆ ಬೀಳಲಿದೆ 2000 ರೂ: ಆದರೆ ಹಣ ಸಿಗೋದು ಈ ನಿಯಮ ಪಾಲಿಸಿದ್ದರೆ ಮಾತ್ರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ