ನಾಗ್ಪುರ: ಕಾಂಗ್ರೆಸ್ ಅದ್ಯಕ್ಷ ರಾಹುಲ್ ಗಾಂಧಿ ಅವರು ರಾಜಕೀಯ ಲಾಭಕ್ಕಾಗಿ ಪ್ರಧಾನಿ ನರೆಂದರ ಮೋದಿ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶದ 20% ಬಡವರಿಗೆ ಪ್ರತಿ ವರ್ಷ 72,000 ರೂ.ಗಳನ್ನು ನೀಡುವ ರಾಹುಲ್ ಗಾಂಧಿಯ ಕನಿಷ್ಟ ಆದಾಯದ ಯೋಜನೆಯನ್ನು ಟೀಕಿಸಿದ ಗಡ್ಕರಿ, ಇದು ಬಡವರ ಮತಗಳನ್ನು ಪಡೆಯಲು "ಜನಪ್ರಿಯವಾದ ಘೋಷಣೆ" ಮತ್ತು "ರಾಜಕೀಯ ತಂತ್ರ" ಎಂದು ಲೇವಡಿ ಮಾಡಿದ್ದಾರೆ.


ಬಿಜೆಪಿ ಪಕ್ಷವು ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಮುಂತಾದ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದೆ ಎಂಬ ಆರೋಪವನ್ನು ತಿರಸ್ಕರಿಸಿದ ಅವರು, ಪಕ್ಷವು ಅವರಿಗೆ ಹೆಚ್ಚು ಗೌರವವನ್ನು ನೀಡಿದ್ದು, ಅವರಿಂದ ಮಾರ್ಗದರ್ಶನ ಮತ್ತು ಸ್ಪೂರ್ತಿಯನ್ನು ಪಡೆದಿದೆ ಎಂದಿದ್ದಾರೆ. 


ಇದೇ ವೇಳೆ ಬಿಜೆಪಿ ಪಕ್ಷವನ್ನು ದೇಶವಿರೋಧಿ ಎಂದು ಹೇಳುವುದು ಸರಿಯಲ್ಲ. ಪ್ರಧಾನಿ ಮೋದಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವುದು ಸರಿಯಲ್ಲ. ಅವರು ಪ್ರಧಾನಿ ಬಗ್ಗೆ ಮಾತನಾಡುವ ವಿಧಾನವು ಸರಿಯಿಲ್ಲ. ಪ್ರಧಾನಿ ಕೇವಲ ಒಂದು ಪಕ್ಷಕ್ಕೆ ಸೇರಿದವರಲ್ಲ, ದೇಶಕ್ಕೆ ಸೇರಿದವರು ಮತ್ತು ಪ್ರಧಾನ ಮಂತ್ರಿಯಾಗಿ ಅವರನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವೂ ಹೌದು. ಆದಾಗ್ಯೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂಥ ಕೆಟ್ಟ ಪದಗಳನ್ನು ಬಳಸುತ್ತಿದ್ದಾರೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.


ರಾಹುಲ್ ಗಾಂಧಿ ಭರವಸೆ ನೀಡಿರುವ 'ನ್ಯಾಯ್ ಯೋಜನೆ'ಯನ್ನು ಟೀಕಿಸಿದ ನಿತಿನ್ ಗಡ್ಕರಿ, "ಅಷ್ಟಕ್ಕೂ ಆ ಯೋಜನೆಗಾಗಿ 3,50,000 ಕೋಟಿ ರೂ.ಗಳನ್ನು ಎಲ್ಲಿಂದ ತರುತ್ತಾರೆ? ಇಷ್ಟೊಂದು ಹಣವನ್ನು ಈ ಯೋಜನೆಗೆ ವಿನಿಯೋಗಿಸಿದರೆ ಇತರ ಕ್ಷೇತ್ರಗಳಿಗೆ ಹೇಗೆ ಬಜೆಟ್ ಹೊಂದಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.