ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಘೋಷಣೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂತಹ ಕಾರ್ಯಕ್ರಮದ ನಡುವೆಯೂ ಚೀನಾದ ಉತ್ಪನ್ನಗಳು ಎಲ್ಲೆಡೆ ಇವೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ತಮಿಳುನಾಡಿನ ಸೇಲಂನಲ್ಲಿನ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ಮೋದಿ ಯುವಜನರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿಲ್ಲ ಬದಲಾಗಿ ಅವರು ಶ್ರೀಮಂತರಿಗೆ ಹೆಚ್ಚಿನ ಪ್ರಮಾಣದ ಹಣವನ್ನು ನೀಡಿದ್ದಾರೆ ಎಂದು ಅವರು ಹೇಳಿದರು."ಮೇಕ್ ಇನ್ ಇಂಡಿಯಾ ಎಂಬ ಖಾಲಿ ಘೋಷಣೆಯನ್ನು ನಿಮಗೆ ಅವರು ನೀಡಿದ್ದಾರೆ.  ಆದರೆ ನಾವು ನೋಡಿದ ಕಡೆಯೆಲ್ಲಾ ಚೀನಾದ ಉತ್ಪನ್ನಗಳೆ ಇವೆ, " ಎಂದು ಅವರು ಹೇಳಿದರು.


 ಒಬ್ಬ ಯುವ ಉದ್ಯಮಿ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಅವರು ವಿವಿಧ ಸರಕಾರಿ ಕಚೇರಿಗಳ ಬಾಗಿಲನ್ನು ತಳ್ಳಬೇಕಾಗಿತ್ತು, ಹಾಗಾಗಿ  ಈಗ ಕಾಂಗ್ರೆಸ್ ಉದ್ಯಮಿಗಳಿಗೆ  ತನ್ನ  ಪ್ರಣಾಳಿಕೆಯಲ್ಲಿ ಹೊಸ ಕಲ್ಪನೆಯನ್ನು ಹೊರತಂದಿದೆ. ನೀವು ಹೊಸ ಉದ್ಯಮವನ್ನು ಪ್ರಾರಂಭಿಸಬೇಕೆಂದರೆ  ನೀವು ಮೂರು ವರ್ಷಗಳ ಕಾಲ ಸರ್ಕಾರದ ಯಾವುದೇ ಇಲಾಖೆಯಿಂದ ಅನುಮತಿ ಪಡೆದುಕೊಳ್ಳುವ ಅವಶ್ಯಕತೆ ಇಲ್ಲವೆಂದು ರಾಹುಲ್ ಗಾಂಧಿ ತಿಳಿಸಿದರು. 


ಪ್ರಧಾನಿ ಮೋದಿ ಎಲ್ಲ ಭ್ರಷ್ಟ ಉದ್ಯಮಿಗಳಾದ ನಿರಾವ್ ಮೋದಿ, ಮೆಹುಲ್ ಚೋಕ್ಸಿ ಮತ್ತು ವಿಜಯ್ ಮಲ್ಯರೊಂದಿಗೆ ಕಾಣಿಸಿಕೊಂಡಿದ್ದಾರೆ, ಆದರೆ ಎಂದಿಗೂ ಬಡ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿಲ್ಲವೆಂದು  ಹೇಳಿದರು.