Who Is Hindu?: `ಹಿಂದೂಗಳ ಆಡಳಿತ ವಾಪಸ್ ಬರಬೇಕಿದೆ, ನಾನೂ ಹಿಂದೂ`, `ಹಿಂದೂ` ಶಬ್ದದ ರಾಹುಲ್ ಡೆಫಿನೆಶನ್ ಇಲ್ಲಿದೆ
Rahul Gandhi On Hindu: ಭಾರತ ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಭಾನುವಾರ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಅವರ ಮೂರ್ನಾಲ್ಕು ಸ್ನೇಹಿತರು ಸೇರಿ 7 ವರ್ಷಗಳಲ್ಲಿ ದೇಶವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜೈಪುರ: Rahul Gandhi In Jaipur Rally - ಭಾರತ ಹಿಂದೂಗಳ ದೇಶವೇ ಹೊರತು ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಅವರ ಮೂರ್ನಾಲ್ಕು ಸ್ನೇಹಿತರು ಸೇರಿ 7 ವರ್ಷಗಳಲ್ಲಿ ದೇಶವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಎರಡು ಪದಗಳ ಅರ್ಥ ವಿವರಿಸಿದ ರಾಹುಲ್
‘ನಾನು ಹಿಂದುತ್ವವಾದಿ ಅಲ್ಲ, ಹಿಂದೂ’ ಎಂದು ಗಾಂಧಿ ಹೇಳಿದ್ದಾರೆ. 'ಹಣದುಬ್ಬರ ತೊಲಗಿಸಿ' ರ‍್ಯಾಲಿ (Rahul Gandhi Rally) ಉದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, ದೇಶದಲ್ಲಿ ಹಣದುಬ್ಬರವಿದೆ ಮತ್ತು ನೋವು ಇದೆ ಎಂದರೆ ಈ ಕೆಲಸ ಹಿಂದುತ್ವವಾದಿಗಳು ಮಾಡಿದ್ದಾರೆ. ಹಿಂದುತ್ವವಾದಿಗಳು ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರವನ್ನು ಬಯಸುತ್ತಾರೆ' ಎಂದು ಅವರು ಹೇಳಿದ್ದಾರೆ. ಹಿಂದೂ ಹಾಗೂ ಹಿಂದುತ್ವವಾದ ಎರಡು ವಿಭಿನ್ನ ಪದಗಳು ಎಂದು ಬಣ್ಣಿಸಿದ ರಾಹುಲ್ (Rahul Gandhi), ಎರಡು ಆತ್ಮಗಳು ಒಂದೇ ಆತ್ಮವನ್ನು ಹೊಂದಲು ಸಾಧ್ಯವಿಲ್ಲ, ಎರಡು ಪದಗಳು ಒಂದೇ ಅರ್ಥವನ್ನು ಹೊಂದಲು ಸಾಧ್ಯವಿಲ್ಲ ಏಕೆಂದರೆ ಪ್ರತಿಯೊಂದು ಪದಕ್ಕೂ ವಿಭಿನ್ನ ಅರ್ಥವಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-Awantipora encounter: ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರನ ಹತ್ಯೆ
'ಹಿಂದೂಗಳ ಆಡಳಿತವನ್ನು ಮರಳಿ ತರಬೇಕು'
ಈ ಸಂದರ್ಭದಲ್ಲಿ ಮಾತನಾಡಿರುವ ರಾಹುಲ್ 'ಯಾರಿಗೂ ಹೆದರದೆ, ಎಲ್ಲರನ್ನು ತಬ್ಬಿಕೊಳ್ಳುವವ ವ್ಯಕ್ತಿ ಹಿಂದೂ ಆಗಿದ್ದಾನೆ. ದೇಶದಿಂದ ಹಿಂದುತ್ವವಾದಿಗಳನ್ನು ತೊಲಗಿಸಬೇಕಿದೆ ಮತ್ತು ಹಿಂದೂಗಳ ಆಡಳಿತ ಮರಳಿ ತರಬೇಕಿದೆ'. ಈ ದೇಶದ ಜನರು ದೇಶವನ್ನು ನಡೆಸುತ್ತಿಲ್ಲ, ಕೇವಲ 3-4 ಬಂಡವಾಳಶಾಹಿಗಳು ದೇಶವನ್ನು ಮುನ್ನಡೆಸುತ್ತಿದ್ದಾರೆ ಹಾಗೂ ಪ್ರಧಾನಿಗಳು ಅವರ ಕೆಲಸ ಮಾಡುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ-ದೆಹಲಿಯಲ್ಲಿ ಕನಿಷ್ಠ 6.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
ಹಿಂದೂ ಎಂದರೆ ಯಾರು?
'ಪ್ರತಿಯೊಬ್ಬರನ್ನು ಅಪ್ಪಿಕೊಳ್ಳುವ, ಯಾರಿಗೂ ಹೆದರದ ಮತ್ತು ಪ್ರತಿಯೊಂದು ಧರ್ಮವನ್ನು ಗೌರವಿಸುವವನೇ ನಿಜವಾದ ಹಿಂದೂ' ಎಂದು ರಾಹುಲ್ ಗಾಂಧಿ ಭಾಷಣದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ-ಅನ್ನದಾತರ ಸಮಸ್ಯೆಗೆ ಕೂಗಾದ ಮಾಜಿ ಪ್ರಧಾನಿ, ಭತ್ತದ ತಳಿಗೆ 'ದೇವೇಗೌಡ'ರ ಹೆಸರಿಟ್ಟ ಪಂಜಾಬ್ ರೈತರು.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.