ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಪಕ್ಷದ ನಾಯಕತ್ವದ ಬಗ್ಗೆ ಅಸಮಧಾನಗೊಂಡಿರುವ ಬೆನ್ನಲ್ಲೇ ಇಂದು ನಡೆದ ಭಿನ್ನಮತೀಯರ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಪಕ್ಷದ ಪರವಾಗಿ ಕೆಲಸ ಮಾಡಲು ಸಿದ್ಧರಿರುವುದಾಗಿ ಹೇಳಿದರು.ಆ ಮೂಲಕ ನೂತನ ವರ್ಷಕ್ಕೆ ಹೊಸ ಅಧ್ಯಕ್ಷರ ನೇಮಕದ ಸಿದ್ದತೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸಾರಥ್ಯ ವಹಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ರಾಹುಲ್ ಗಾಂಧಿ ಪ್ರಕಾರ ಬಿಜೆಪಿಯಲ್ಲಿ ಈ ವ್ಯಕ್ತಿ ಅತಿ ಪ್ರಾಮಾಣಿಕನಂತೆ...!


10 ಜನಪಥ್ ಮನೆಯ ಹುಲ್ಲುಹಾಸಿನ ಮೇಲೆ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಹಿರಿಯ ಭಿನ್ನಮತೀಯರು ನಡುವೆ ನಡೆದ ಐದು ಗಂಟೆಗಳ ಸಭೆಯಲ್ಲಿ ಮೊದಲ ಬಾರಿಗೆ ತಿಂಗಳುಗಳ ಕಾಲ ದ್ವೇಷ, ದಂಗೆ ಮತ್ತು ರಾಜೀನಾಮೆಗಳ ನಂತರ ಸಾಮರಸ್ಯದತ್ತ ಮೊದಲ ಹೆಜ್ಜೆಯಾಗಿದೆ.


ಈ ಧರ್ಮಾಂಧರು ದ್ವೇಷದಿಂದ ಕುರುಡರಾಗಿದ್ದಾರೆ, ಆದ್ದರಿಂದ ವೃತ್ತಿಪರತೆ ಬಗ್ಗೆ ತಿಳಿಸುವುದು ಕಷ್ಟ- ರಾಹುಲ್ ಗಾಂಧಿ


'ನಿಮ್ಮೆಲ್ಲರ ಅಪೇಕ್ಷೆಯಂತೆ ನಾನು ಪಕ್ಷಕ್ಕಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆಂದು ಕಾಂಗ್ರೆಸ್ ಹಿರಿಯ ಮುಖಂಡ ಪವನ್ ಬನ್ಸಾಲ್ ಸಭೆಯ ನಂತರ ಹೇಳಿದರು.ರಾಹುಲ್ ಗಾಂಧಿ ಉತ್ತಮ ಸಂವಹನ ಅಗತ್ಯವಿದೆ ಮತ್ತು ಪಕ್ಷವು ಬೂತ್ ಮಟ್ಟದಲ್ಲಿ ತನ್ನನ್ನು ಬಲಪಡಿಸುವ ಅಗತ್ಯವಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.