ಈ ಧರ್ಮಾಂಧರು ದ್ವೇಷದಿಂದ ಕುರುಡರಾಗಿದ್ದಾರೆ, ಆದ್ದರಿಂದ ವೃತ್ತಿಪರತೆ ಬಗ್ಗೆ ತಿಳಿಸುವುದು ಕಷ್ಟ- ರಾಹುಲ್ ಗಾಂಧಿ

ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರನ್ನು ಎಡಪಂಥೀಯ ಎಂದು ಹೇಳಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Last Updated : Oct 20, 2019, 04:08 PM IST
ಈ ಧರ್ಮಾಂಧರು ದ್ವೇಷದಿಂದ ಕುರುಡರಾಗಿದ್ದಾರೆ, ಆದ್ದರಿಂದ ವೃತ್ತಿಪರತೆ ಬಗ್ಗೆ ತಿಳಿಸುವುದು ಕಷ್ಟ- ರಾಹುಲ್ ಗಾಂಧಿ  title=
file photo

ನವದೆಹಲಿ: ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಅವರನ್ನು ಎಡಪಂಥೀಯ ಎಂದು ಹೇಳಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಧರ್ಮಾಂಧರು ದ್ವೇಷದಿಂದ ಕುರುಡರಾಗಿದ್ದಾರೆ, ಆದ್ದರಿಂದ ಅವರಿಗೆ ವೃತ್ತಿಪರತೆ ಏನು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ 'ಪ್ರಿಯ ಶ್ರೀ ಬ್ಯಾನರ್ಜಿ, ಈ ಧರ್ಮಾಂಧರು  ದ್ವೇಷದಿಂದ ಕುರುಡಾಗಿದ್ದಾರೆ ಮತ್ತು ವೃತ್ತಿಪರರೇನು ಎಂಬುದರ ಬಗ್ಗೆ ಅವರಿಗೆ ತಿಳಿದಿಲ್ಲ. ನೀವು ಒಂದು ದಶಕದಿಂದ ಪ್ರಯತ್ನಿಸಿದರೂ ಅದನ್ನು ಅವರಿಗೆ ವಿವರಿಸಲು ಸಾಧ್ಯವಿಲ್ಲ" ಎಂದು ರಾಹುಲ್ ಗಾಂಧಿಯವರು ಟ್ವೀಟ್ ನಲ್ಲಿ ಗೋಯಲ್ ಅವರ ಪ್ರತಿಕ್ರಿಯೆಗೆ ಬ್ಯಾನರ್ಜಿ ಅವರ ಪ್ರತಿಕ್ರಿಯೆಯ ಕುರಿತ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿದ್ದಾರೆ. 

ಕೇಂದ್ರ ಸಚಿವ ಪಿಯುಶ್ ಗೋಯಲ್ ಅವರು ಪುಣೆಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜೀ ಎಡಪಂಥೀಯ ವಿಚಾರವುಳ್ಳವರು ಎಂದು ಕರೆದಿದ್ದರು, ಅಲ್ಲದೆ ಅವರು ಕಾಂಗ್ರೆಸ್ ಪಕ್ಷದ ನ್ಯಾಯ ಯೋಜನೆಯನ್ನು ಅವರು ರೂಪಿಸಿದಂತವರು ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಭಿಜಿತ್ ಬ್ಯಾನರ್ಜಿ ಅವರು ' ಪಿಯುಶ್ ಗೋಯಲ್ ಅವರು ನನ್ನ ವೃತ್ತಿ ಪರತೆಯನ್ನು ಪ್ರಶ್ನಿಸಿದ್ದಾರೆ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಈಗ ಬ್ಯಾನರ್ಜೀ ಅವರಿಗೆ ಬೆಂಬಲ ವ್ಯಕ್ತಪಡಿಸಿ ಧರ್ಮಾಂಧರಿಗೆ ದಶಕಗಳ ಕಾಲ ವಿವರಿಸಿದರೂ ಕೂಡ ವೃತ್ತಿ ಪರತೆ ಬಗ್ಗೆ ತಿಳಿಸಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಬಿಜೆಪಿ ನಾಯಕರನ್ನು ವ್ಯಂಗ್ಯವಾಡಿದ್ದಾರೆ.
 

Trending News