Rahul Gandhi Video : ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಪುಟ್ಟ ಬಾಲಕಿಯ ವಿಡಿಯೋವೊಂದು ಎಲ್ಲೆಡೆ ವೈರಲ್‌ ಆಗಿದೆ. ಮಹಾರಾಷ್ಟ್ರದಲ್ಲಿನ ಭಾರತ್‌ ಜೋಡೋ ಯಾತ್ರೆಯ ಸಮಯದಲ್ಲಿ ಸೆರೆಯಾದ ಈ ದೃಶ್ಯ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. ಈ ಹೃದಯಸ್ಪರ್ಶಿ ಸಂಭಾಷಣೆಯ ವಿಡಿಯೋವನ್ನು ಕಾಂಗ್ರೆಸ್ ಗುರುವಾರ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಸುಮಾರು ಮೂರು ನಿಮಿಷಗಳ ಸುದೀರ್ಘ ವಿಡಿಯೋ ನೆಟ್ಟಿಗರ ಮನಗೆಲ್ಲುತ್ತಿದೆ. 


COMMERCIAL BREAK
SCROLL TO CONTINUE READING

ಇದನ್ನೂಓದಿ : Ramya - Rashmika Mandanna: ರಶ್ಮಿಕಾ ಬೆಂಬಲಕ್ಕೆ ನಿಂತ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ


ಪೂರ್ಣ ಸಂಭಾಷಣೆಯನ್ನು ಇಲ್ಲಿ ವೀಕ್ಷಿಸಿ: 


 


ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರಾ ಶುಕ್ರವಾರ 65 ನೇ ದಿನಕ್ಕೆ ಕಾಲಿಟ್ಟಿದೆ. ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪುಟ್ಟ ಬಾಲಕಿಯ ಪಕ್ಕದಲ್ಲಿ ಕುಳಿತು ಮಾತನಾಡುವ ವಿಡಿಯೋ ನೆಟ್ಟಿಗರ ಮನಗೆಲ್ಲುತ್ತಿದೆ. ಅವರು ವಿಡಿಯೋದಲ್ಲಿ ಪುಟ್ಟ ಹುಡುಗಿಯ ಜೀವನದ ಗುರಿಗಳ ಬಗ್ಗೆ ವಿಚಾರಿಸಿದರು. ಪೊಲೀಸ್ ಅಧಿಕಾರಿಯಾಗುವುದು ತನ್ನ ಗುರಿಯಾಗಿದೆ ಎಂದು ಹುಡುಗಿ ಪ್ರತಿಕ್ರಿಯಿಸಿದಳು.


2023 ರ ಆರಂಭಿಕ ತಿಂಗಳುಗಳಲ್ಲಿ ಕಾಂಗ್ರೆಸ್ ಸಾಮೂಹಿಕ ಸಂಪರ್ಕ ಅಭಿಯಾನವಾದ ಭಾರತ್ ಜೋಡೋ ಯಾತ್ರೆ ಶ್ರೀನಗರವನ್ನು ತಲುಪುವ ಮೊದಲು 3,750 ಕಿಲೋಮೀಟರ್ ಪ್ರಯಾಣಿಸಲಿದೆ. 


ಇದನ್ನೂಓದಿ : ಭಾರತ್ ಜೋಡೋ ಯಾತ್ರೆ ಮಧ್ಯೆ ಬಂಬೂ ಚಿಕನ್ ತಯಾರಿಸಿದ ರಾಹುಲ್ ಗಾಂಧಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.