BJP-RSS ಮೇಲೆ ರಾಹುಲ್ ಗಾಂಧಿ ವಾಗ್ದಾಳಿ, 'ಹಿಂದೂ ಧರ್ಮ-ಹಿಂದುತ್ವದಲ್ಲಿದೆ ವ್ಯತ್ಯಾಸ ಇದೆ' ಎಂದ ರಾಹುಲ್

Rahul Gandhi On Hinduism & Hindutva - ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತದಲ್ಲಿ ಒಟ್ಟು ಎರಡು ಸಿದ್ಧಾಂತಗಳಿವೆ. ಕಾಂಗ್ರೆಸ್‌ನ ಒಂದು ಸಿದ್ಧಾಂತ ಮತ್ತು ಆರ್‌ಎಸ್‌ಎಸ್‌ನ ಒಂದು ಸಿದ್ಧಾಂತ. ಆರೆಸ್ಸೆಸ್‌ನ ಸಿದ್ಧಾಂತವೆಂದರೆ ದ್ವೇಷವನ್ನು ಹರದುವುದ್ದಾಗಿದ್ದರೆ,  ಕಾಂಗ್ರೆಸ್‌ನದ್ದು ಪ್ರೀತಿಯ ಸಿದ್ಧಾಂತವಾಗಿದೆ.

Written by - Nitin Tabib | Last Updated : Nov 12, 2021, 05:31 PM IST
  • RSS ಗುರಿಯಾಗಿಸಿದ ರಾಹುಲ್ ಗಾಂಧಿ
  • ಭ್ರಾತೃತ್ವ ಇದು ಕಾಂಗ್ರೆಸ್ ವಿಚಾರಧಾರೆ.
  • 'ಹಿಂದೂ ಧರ್ಮ ಮತ್ತು ಹಿಂದುತ್ವದಲ್ಲಿ ವ್ಯತ್ಯಾಸ ಇದೆ' ಎಂದ ರಾಹುಲ್ ಗಾಂಧಿ
BJP-RSS ಮೇಲೆ ರಾಹುಲ್ ಗಾಂಧಿ ವಾಗ್ದಾಳಿ, 'ಹಿಂದೂ ಧರ್ಮ-ಹಿಂದುತ್ವದಲ್ಲಿದೆ ವ್ಯತ್ಯಾಸ ಇದೆ' ಎಂದ ರಾಹುಲ್ title=
Rahul Gandhi On Hinduism & Hindutva (File Photo)

ನವದೆಹಲಿ: Rahul Gandhi On Hinduism & Hindutva - ಸಲ್ಮಾನ್ ಖುರ್ಷಿದ್ (Salman Khurshid) ಅವರ ಹೊಸ ಪುಸ್ತಕ 'ಸನ್‌ರೈಸ್ ಓವರ್ ಅಯೋಧ್ಯೆ' (Sunrise Over Ayodhya) ಕುರಿತು ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಡುವೆ ವಾಕ್ ಸಮರ ನಡೆಯುತ್ತಿದೆ. ಪುಸ್ತಕದಲ್ಲಿ ಹಿಂದುತ್ವವನ್ನು ಬೊಕೊ ಹರಾಮ್ ಮತ್ತು ಐಸಿಸ್ ಜೊತೆ ಸಮೀಕರಿಸುವ ವಿವಾದ ಮುಂದುವರಿದಿದೆ. ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಬಿಜೆಪಿ ಮತ್ತು ಸಂಘವನ್ನು ಗುರಿಯಾಗಿಸಿದ್ದಾರೆ. ಈ ಹೊತ್ತಿನಲ್ಲಿ ದೇಶದಲ್ಲಿ ಎರಡು ವಿಚಾರಧಾರೆಗಳಿವೆ ಎಂದು ಅವರು ಹೇಳಿದ್ದಾರೆ. ಒಂದು ಆರೆಸ್ಸೆಸ್ ಮತ್ತು ಇನ್ನೊಂದು ಕಾಂಗ್ರೆಸ್. ದ್ವೇಷ ಹರಡುವುದು ಆರ್‌ಎಸ್‌ಎಸ್‌ನ (RSS) ಸಿದ್ಧಾಂತವಾದರೆ ಕಾಂಗ್ರೆಸ್‌ನ ಸಿದ್ಧಾಂತ ಪ್ರೀತಿ. ಆರ್‌ಎಸ್‌ಎಸ್‌ನ ಐಕಾನ್ ಸಾವರ್ಕರ್ ಮತ್ತು ಕಾಂಗ್ರೆಸ್‌ನ ಐಕಾನ್ ಮಹಾತ್ಮಾ ಗಾಂಧಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಹಿಂದುತ್ವ ಮತ್ತು ಹಿಂದೂ ಧರ್ಮ ಎರಡನ್ನೂ ಪ್ರತ್ಯೇಕವಾಗಿವೆ ಎಂದು ರಾಹುಲ್ ಹೇಳಿದ್ದಾರೆ.

RSS ಅನ್ನು ಗುರಿಯಾಗಿಸಿದ ರಾಹುಲ್ ಗಾಂಧಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತದಲ್ಲಿ ಒಟ್ಟು ಎರಡು ಸಿದ್ಧಾಂತಗಳಿವೆ. ಕಾಂಗ್ರೆಸ್‌ನ ಒಂದು ಸಿದ್ಧಾಂತ ಮತ್ತು ಆರ್‌ಎಸ್‌ಎಸ್‌ನ ಒಂದು ಸಿದ್ಧಾಂತ. ಆರೆಸ್ಸೆಸ್‌ನ ಸಿದ್ಧಾಂತವೆಂದರೆ ದ್ವೇಷವನ್ನು ಹರದುವುದ್ದಾಗಿದ್ದರೆ,  ಕಾಂಗ್ರೆಸ್‌ನದ್ದು ಪ್ರೀತಿಯ ಸಿದ್ಧಾಂತವಾಗಿದೆ. ಈ ವಿಚಾರಧಾರೆಯ ಟ್ರೇನಿಂಗ್ ದೇಶಾದ್ಯಂತ ನಡೆಯಬೇಕು, ನಾವು ನಮ್ಮ ವಿಚಾರಧಾರೆಯನ್ನು ಹರಡೋಣ ಎಂದು ರಾಹುಲ್ ಹೇಳಿದ್ದಾರೆ. 

ಕಾಂಗ್ರೆಸ್ ವಿಚಾರಧಾರ ಭ್ರಾತೃತ್ವದ ವಿಚಾರಧಾರೆ - ರಾಹುಲ್ ಗಾಂಧಿ
ಕಾಂಗ್ರೆಸ್‌ನ ಡಿಜಿಟಲ್ ಅಭಿಯಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 'ಭಾರತದಲ್ಲಿ ಎರಡು ಸಿದ್ಧಾಂತಗಳಿವೆ, ಒಂದು ಕಾಂಗ್ರೆಸ್ ಪಕ್ಷ ಮತ್ತು ಒಂದು ಆರ್‌ಎಸ್‌ಎಸ್. ಇಂದಿನ ಭಾರತದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ದ್ವೇಷವನ್ನು ಹರಡಿವೆ ಮತ್ತು ಕಾಂಗ್ರೆಸ್ ಸಿದ್ಧಾಂತವು ಸಹೋದರತ್ವ ಮತ್ತು ಪ್ರೀತಿಯಾಗಿದೆ ಎಂದಿದ್ದಾರೆ. 

ಈ ವೇಳೆ ಮಾತನಾಡಿರುವ ರಾಹುಲ್,  'ಹಿಂದೂ ಧರ್ಮಕ್ಕೂ (Hinduism) ಹಿಂದುತ್ವಕ್ಕೂ (Hindutva) ವ್ಯತ್ಯಾಸವಿದೆ. ನೀವು ಹಿಂದೂ ಆಗಿದ್ದರೆ ನಿಮಗೆ ಹಿಂದುತ್ವ ಏಕೆ ಬೇಕು. ಕಬೀರ, ಗುರುನಾನಕ್, ಮಹಾತ್ಮ ಗಾಂಧೀಜಿ ಹೀಗೆ ಅನೇಕರು ಇದನ್ನು ಅಳವಡಿಸಿಕೊಂಡು ಪ್ರಚಾರ ಮಾಡಿದ್ದಾರೆ. ದೇಶದ ಮೂಲೆ ಮೂಲೆಗೂ ಕಾಂಗ್ರೆಸ್ ಸಿದ್ಧಾಂತವನ್ನು ಕೊಂಡೊಯ್ಯೋಣ' ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-RBI Schemes: RBIನ ಎರಡು ಯೋಜನೆಗಳನ್ನು ಬಿಡುಗಡೆಗೊಳಿಸಿದ PM ಮೋದಿ, ದೇಶದಲ್ಲಿ ಹೂಡಿಕೆಯ ವ್ಯಾಪ್ತಿ ವಿಸ್ತಾರ ಎಂದ ಪ್ರಧಾನಿ

ವಿಚಾರಧಾರೆಯ ಕುರಿತು ವಾದ ಏಕೆ?
ಇಲ್ಲಿ ಗಮನಾರ್ಹ ಸಂಗತಿಯೆಂದರೆ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸುಪ್ರೀಂ ಕೋರ್ಟ್ ವಕೀಲ ಸಲ್ಮಾನ್ ಖುರ್ಷಿದ್ ಅವರು ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪುಸ್ತಕವನ್ನು ಬರೆದಿದ್ದಾರೆ. ಈ ನಿರ್ಧಾರದ ಕಾರಣ ಮತ್ತು ಉದ್ದೇಶವನ್ನು ದೇಶಕ್ಕೆ ವಿವರಿಸಲು ಬಯಸುವುದಾಗಿ ಖುರ್ಷಿದ್ ಹೇಳುತ್ತಾರೆ.

ಇದನ್ನೂ ಓದಿ-The Lancet, Covaxin, Bharat Biotech, Covid-19 Vaccine, ICMR, WHO,

ಸಲ್ಮಾನ್ ಖುರ್ಷಿದ್ ಬರೆದ ಪುಸ್ತಕದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಗುರುವಾರ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಅವರು ಸಲ್ಮಾನ್ ಖುರ್ಷಿದ್ ಅವರನ್ನು ಗುರಿಯಾಗಿಸಿಕೊಂಡು, 'ಇದು ಹಿಂದುತ್ವದ ವಿರುದ್ಧ ಕಾಂಗ್ರೆಸ್‌ನ ದೊಡ್ಡ ಪಿತೂರಿಯಾಗಿದೆ ಮತ್ತು ಅವರ ಸಿದ್ಧಾಂತವು ಹಿಂದೂಗಳ ವಿರುದ್ಧವಾಗಿದೆ. ಇದು ಕೇವಲ ಹಿಂದೂಗಳ ಭಾವನೆಗಳಿಗೆ ಸಂಬಂಧಿಸಿದ್ದಲ್ಲ, ಆದರೆ ಭಾರತದ ಆತ್ಮವನ್ನು ಆಳವಾಗಿ ನೋಯಿಸುತ್ತದೆ. ಕಾಂಗ್ರೆಸ್ ಪಕ್ಷವು ಜೇಡನಂತೆ ಹಿಂದೂಗಳ ವಿರುದ್ಧ ದ್ವೇಷದ ಜಾಲವನ್ನು ಹೆಣೆಯುತ್ತಿದೆ. ಇದರೊಂದಿಗೆ ಸಲ್ಮಾನ್ ಖುರ್ಷಿದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅವರು ಒತ್ತಾಯಿದ್ದರು.

ಇದನ್ನೂ ಓದಿ-Viral News: ಮುಂದಿನ ವರ್ಷ ಭೂಮಿಯ ಮೇಲೆ ಕಾಣಿಸಿಕೊಳ್ಳಲಿವೆ ಮನುಷ್ಯರ ರೀತಿ ಕಾಣುವ ಮೀನುಗಳು! ಭವಿಷ್ಯವಾಣಿ ಮಾಡಿದ ವ್ಯಕ್ತಿ ಯಾರು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News