ಕೇಂದ್ರ ಸರ್ಕಾರದ `ವಿಫಲ ಲಾಕ್ ಡೌನ್` ಕ್ರಮವನ್ನು ಗ್ರಾಫ್ ಮೂಲಕ ತೆರೆದಿಟ್ಟ ರಾಹುಲ್ ಗಾಂಧಿ
ಸುಮಾರು 70 ದಿನಗಳ ಲಾಕ್ ಡೌನ್ ಮಧ್ಯದಲ್ಲಿಯೂ ಭಾರತದಲ್ಲಿ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವುದಕ್ಕೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿಫಲ ಲಾಕ್ ಡೌನ್ ಎಂದು ಕರೆದಿದ್ದಾರೆ.
ನವದೆಹಲಿ: ಸುಮಾರು 70 ದಿನಗಳ ಲಾಕ್ ಡೌನ್ ಮಧ್ಯದಲ್ಲಿಯೂ ಭಾರತದಲ್ಲಿ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವುದಕ್ಕೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿಫಲ ಲಾಕ್ ಡೌನ್ ಎಂದು ಕರೆದಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ರಾಹುಲ್ ಗಾಂಧಿ ಇತರ ದೇಶಗಳಲ್ಲಿನ ಲಾಕ್ ಡೌನ್ ಗಳಿಗೆ ಹೋಲಿಸಿದ ಗ್ರಾಫ್ ವೊಂದನ್ನು ಲಗತ್ತಿಸಿದ್ದಾರೆ.ಇದರಲ್ಲಿ ಯುರೋಪಿಯನ್ ದೇಶಗಳು ಹಾಗೂ ಭಾರತದಲ್ಲಿನ ಪ್ರಕರಣಗಳನ್ನು ಹೋಲಿಕೆ ಮಾಡಲಾಗಿದೆ.ಈ ಹಿಂದೆ ಕೇಂದ್ರ ಸರ್ಕಾರವು ಮಾರ್ಚ್ ನಲ್ಲಿ ವಿಧಿಸಿದ ಲಾಕ್ ಡೌನ್ ಅನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಬಂದಿತು.ಈಗ ಐದನೇ ಹಂತದಲ್ಲಿ ಹಲವಾರು ಮಹತ್ವದ ಸಡಿಲಿಕೆಯೊಂದಿಗೆ ಲಾಕ್ ಡೌನ್ ನನ್ನು ಸರಳಗೊಳಿಸಿದೆ.ಆದಾಗ್ಯೂ ಭಾರತದಲ್ಲಿ ಪ್ರಕರಣಗಳ ಹೆಚ್ಚಳ ತೀವ್ರಗೊಳ್ಳುತ್ತಿರುವುದು ಲಾಕ್ ಡೌನ್ ಕ್ರಮ ಅಕ್ಷರಶಃ ವಿಫಲವಾಗಿರುವುದನ್ನು ರಾಹುಲ್ ಗಾಂಧಿ ಟ್ವೀಟ್ ಮೂಲಕ ತೋರಿಸಿದ್ದಾರೆ. ಆರೋಗ್ಯ ಸಚಿವಾಲಯದ ಮಾಹಿತಿಯು ಇತ್ತೀಚಿನ ದಿನಗಳಲ್ಲಿ COVID-19 ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ನಾಟಕೀಯ ಏರಿಕೆ ತೋರಿಸಿದೆ.
COVID-19 ಸಾಂಕ್ರಾಮಿಕ ರೋಗವನ್ನು ಕೇಂದ್ರ ಸರ್ಕಾರ ನಿರ್ವಹಿಸಿರುವ ಬಗೆ ಲಾಕ್‌ಡೌನ್ ಭಾರತದ ಬಡವರ ಮೇಲೆ ವಿನಾಶಕಾರಿ ಪರಿಣಾಮಗಳನ್ನು ರಾಹುಲ್ ಗಾಂಧಿ ಈ ಹಿಂದೆ ನಿರಂತರವಾಗಿ ಟೀಕಿಸಿದ್ದರು.ಫೆಬ್ರವರಿ ಆರಂಭದಲ್ಲಿ, ಭಾರತವು ತನ್ನ ಮೊದಲ ಕರೋನವೈರಸ್ ಪ್ರಕರಣವನ್ನು ವರದಿ ಮಾಡಿದ ಎರಡು ವಾರಗಳ ನಂತರ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ಭಾರತ ಸಿದ್ದತೆ ನಡೆಸಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರ ಆಡಳಿತವು ಕೊರೊನಾವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದರು
ಕಳೆದ ಕೆಲವು ವಾರಗಳಲ್ಲಿ ನಿರ್ಬಂಧಗಳು ಸಡಿಲಗೊಂಡಿವೆ ಆದರೆ ಭಾರತವು COVID-19 ಪ್ರಕರಣಗಳು ತೀವ್ರ ರೀತಿಯಲ್ಲಿ ಏರಿಕೆ ಕಂಡಿದೆ. 48 ದಿನಗಳಲ್ಲಿ ದೇಶವು ತನ್ನ ಮೊದಲ 1,000 ಕರೋನವೈರಸ್ ಸಾವುಗಳನ್ನು ವರದಿ ಮಾಡಿದ್ದರೆ, ಈಗ ಅದೇ ಸಂಖ್ಯೆ ಸುಮಾರು ನಾಲ್ಕು ದಿನಗಳಲ್ಲಿ ವರದಿಯಾಗಿದೆ. 2.26 ಲಕ್ಷ ಪ್ರಕರಣಗಳು ಮತ್ತು 6,300 ಕ್ಕೂ ಹೆಚ್ಚು ಸಾವುಗಳ ಮೂಲಕ, ಭಾರತವು ಈಗ ಪ್ರಕರಣಗಳ ವಿಷಯದಲ್ಲಿ ಅತಿ ಹೆಚ್ಚು ಹಾನಿಗೊಳಗಾದ 7 ನೇ ಸ್ಥಾನದಲ್ಲಿದೆ ಮತ್ತು ಸಾವುಗಳಲ್ಲಿ 12 ನೇ ಸ್ಥಾನದಲ್ಲಿದೆ.