ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ 49ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಶುಭ ಹಾರಿಸಿದ್ದು, ಆ ದೇವರು ಉತ್ತಮ ಆರೋಗ್ಯ ಮತ್ತು ದೀರ್ಘಾಯಸ್ಸು ನೀಡಲೆಂದು ಹಾರೈಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲೆಂದು ಹಾರೈಸುತ್ತೇನೆ" ಎಂದಿದ್ದಾರೆ.




ಕಾಂಗ್ರೆಸ್ ಸಹ ರಾಹುಲ್ ಗಾಂಧಿಗೆ ಶುಭಾಶಯ ಕೋರಿದ್ದು, ಈ ಸಂದರ್ಭದಲ್ಲಿ ಒಂದು ವೀಡಿಯೋವನ್ನು ಟ್ವೀಟ್ ಮಾಡಿದ್ದು, "ರಾಹುಲ್ ಗಾಂಧಿ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ಎಲ್ಲೆಡೆ ಭಾರತೀಯರಿಗೆ ಸ್ಫೂರ್ತಿ ನೀಡಿದ ಐದು ಕ್ಷಣಗಳನ್ನು ನೋಡೋಣ" ಎಂದಿದೆ.  ಇದರಲ್ಲಿ ರಾಹುಲ್ ಸಂಸತ್ತಿನಲ್ಲಿ ಮಾತನಾಡಿರುವ ಐದು ಭಾಷಣಗಳಿವೆ. ಪ್ರೀತಿಯ ಮೂಲಕ ದ್ವೇಷವನ್ನು ಸೋಲಿಸುವ ಬಗ್ಗೆ, ಏಕೀಕೃತ ಭಾರತ,  ಭಾರತವನ್ನು ಹೇಗೆ ಪರಿವರ್ತಿಸುವುದು ಎಂಬುದರ ಕುರಿತು ಅವರ ಆಲೋಚನೆಗಳು, ಮಹಿಳಾ ಸಬಲೀಕರಣ,  ಕಾಂಗ್ರೆಸ್ ಹಿಂದಿನ ಕಲ್ಪನೆಯ ಕುರಿತು ರಾಹುಲ್ ಭಾಷಣಗಳ ವೀಡಿಯೋ ತುಣುಕುಗಳ ಸಂಕಲನವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. 



ಅಷ್ಯೇ ಅಲ್ಲದೆ, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ, ಕೇರಳ ಮುಖ್ಯಮಂತ್ರಿ ಒಮನ್ ಚಾಂಡಿ ಸೇರಿದಂತೆ ಅನೇಕ ನಾಯಕರು ಶುಭ ಹಾರೈಸಿದ್ದಾರೆ.