ಮುಂಬೈ: 53 ವರ್ಷದ ಇಂಟೀರಿಯರ್ ಡಿಸೈನರ್‌ನನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದ ಮೇಲೆ ರಾಯಗಡ್ ಪೊಲೀಸರು ಬುಧವಾರ ರಿಪಬ್ಲಿಕ್ ಟಿವಿ (Republic TV) ಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ (Arnab Goswami) ಮತ್ತು ಇನ್ನಿಬ್ಬರನ್ನು ಬಂಧಿಸಿದ್ದಾರೆ. ಇದೇ ವರ್ಷದ ಮೇ ತಿಂಗಳಲ್ಲಿ ಈ ಪ್ರಕರಣದಲ್ಲಿ ಸಿಐಡಿ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿತ್ತು. ಈ ಪ್ರಕರಣ 2018ಕ್ಕೆ ಸಂಬಂಧಿಸಿದ್ದಾಗಿದ್ದು, ಪೊಲೀಸರು ಅರ್ನಬ್ ಅವರ ಮನೆಯಲ್ಲೂ ಶೋಧ ನಡೆಸಿದ್ದರು. ಅರ್ನಬ್‌ ಅವರನ್ನು  ಅಲಿಬಾಗ್‌ನ ನ್ಯಾಯಾಲಯದಲ್ಲಿ ಹಾಜರುಪಡಿಸುವ ಸಾಧ್ಯತೆ ಇದೆ. ಅರ್ನಬ್ ಗೋಸ್ವಾಮಿ ಅವರನ್ನು ಹೊರತುಪಡಿಸಿ ಪ್ರಕರಣದಲ್ಲಿ ಪೊಲೀಸರು ಫಿರೋಜ್ ಶೇಖ್ ಮತ್ತು ನಿತೇಶ್ ಶಾರದಾ ಅವರನ್ನೂ ಕೂಡ ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- VIDEO: PM Modi ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿದ Kangana Ranaut ಹೇಳಿದ್ದೇನು?


ಅರ್ನಬ್ ಗೋಸ್ವಾಮಿ, ಫಿರೋಜ್ ಶೇಖ್ ಮತ್ತು ನಿತೇಶ್ ಶಾರದಾ ಅವರು ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಆರೋಪದ ಮೇಲೆ 53 ವರ್ಷದ ಇಂಟೀರಿಯರ್ ಡಿಸೈನರ್ ಮತ್ತು ಅವರ ತಾಯಿಯ ಆತ್ಮಹತ್ಯೆಯ ಪ್ರಕರಣವನ್ನು ಸಿಐಡಿ ಮರುಪರಿಶೀಲಿಸುವಂತೆ ಆದೇಶಿಸಲಾಗಿತ್ತು. ಅನ್ವಯ ನಾಯಕ್ ಬರೆದ ಆತ್ಮಹತ್ಯೆ ಟಿಪ್ಪಣಿಯಲ್ಲಿ ಆರೋಪಿ ತನ್ನ 5.40 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿಲ್ಲ ಆದ್ದರಿಂದ ತಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಇನ್ನೊಂದೆಡೆ ಈ ಆರೋಪಗಳನ್ನು ರಿಪಬ್ಲಿಕ್ ಟಿವಿ ನಿರಾಕರಿಸಿದೆ.


ಇದನ್ನು ಓದಿ- ನಟಿ ಕಂಗನಾ ರನೌತ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ ಜಾವೇದ್ ಅಖ್ತರ್


ಸಿಐಡಿ ತನಿಖೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ರಾಜ್ಯ ಗೃಹ ಸಚಿವ ಅನಿಲ್ ದೇಶ್ಮುಖ್, "ರಾಯ್ಗಡ್ ಜಿಲ್ಲೆಯ ಅಲಿಬಾಗ್ ಪೊಲೀಸರು ಹಣ ಬಾಕಿ ಪಾವತಿಸದ ಕಾರಣ ಪ್ರಕರಣದ ತನಿಖೆ ನಡೆಸಿಲ್ಲ ಎಂದು ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಅವರ ಪುತ್ರಿ ಆಜ್ಞಾ ನಾಯಕ್ ಆರೋಪಿಸಿದ್ದಾರೆ. ಇದೆ ಕಾರಣದಿಂದ ಅನ್ವಯ್ ಹಾಗೂ ಅವರ ತಾಯಿ ಆತ್ಮಹತ್ಯೆಗೆ ಶರಣಾಗುವ ನಿರ್ಣಯ ಕೈಗೊಂಡಿದ್ದಾರೆ' ಎಂದು ಹೇಳಿದ್ದಾರೆ.


ಇದನ್ನು ಓದಿ- ನಟಿ ಕಂಗನಾ ರನೌತ್ ವಿರುದ್ಧ ಎಫ್‌ಐಆರ್ ದಾಖಲಿಸಲು ತುಮಕೂರು ಕೋರ್ಟ್ ಆದೇಶ


ಅರ್ನಬ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್(Kangana Ranaut). "ಇನ್ನೂ ಎಷ್ಟು ಧ್ವನಿಗಳನ್ನು ನೀವು ಹತ್ತಿಕ್ಕಲು ಬಯಸಿರುವಿರಿ ಎಂದು ನಾನು ಮಾಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಲು ಬಯಸುತ್ತೇನೆ. ಆದರೂ ಕೂಡ ಧ್ವನಿಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೂ ಮೊದಲು ಹಲವರು ಹುತಾತ್ಮರಾಗಿದ್ದಾರೆ. ಇಷ್ಟೊಂದು ಕೋಪ ಯಾಕೆ?" ಎಂದು ಕಂಗನಾ ಪ್ರಶ್ನಿಸಿದ್ದಾರೆ.