ಭಾರತೀಯ ರೈಲು ಇಲಾಖೆಯಲ್ಲಿ ಬಂಪರ್ ಭರ್ತಿ ಕಾರ್ಯಕ್ರಮ, ಡಿಸೆಂಬರ್ ನಲ್ಲಿ ಮೊದಲ ಹಂತದ ಪರೀಕ್ಷೆ
ಕರೋನಾ ಕಾಲದಲ್ಲಿ ಭಾರತೀಯ ರೈಲು ಇಲಾಖೆ ತನ್ನ ಪರೀಕ್ಷೆಗಳನ್ನು ಮುಂದೂಡಿತ್ತು. ಆದರೆ ಇದೀಗ ರೈಲ್ವೆ ವಿಭಾಗ ಒಟ್ಟು ಮೂರು ಹಂತಗಳಲ್ಲಿ ಪರೀಕ್ಷೆಯನ್ನು ನಡೆಸಲಿದೆ ಎಂಬುದು ಅಭ್ಯರ್ಥಿಗಳ ಪಾಲಿಗೆ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ.
ನವದೆಹಲಿ: ಭಾರತೀಯ ರೈಲು (Indian Railway) ಇಲಾಖೆಯಲ್ಲಿ ವ್ಯಾಪಕ ಸಂಖ್ಯೆಯಲ್ಲಿ ನೇಮಕಾತಿ ನಡೆಯಲಿದೆ. ಇದರ ಅಡಿಯಲ್ಲಿ ಒಟ್ಟು ಮೂರು ಹಂತಗಳಲ್ಲಿ ಸುಮಾರು 1.40 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಡಿಸೆಂಬರ್ 15 ರಿಂದ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು (ಸಿಬಿಟಿ) ಆಯೋಜಿಸಲಾಗುತ್ತಿದೆ. ರೈಲ್ವೆ ಮಂಡಳಿಯ ಅಧ್ಯಕ್ಷರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹುದ್ದೆಗಳಿಗೆ ರೈಲ್ವೆ ಇಲಾಖೆ ಜಾಹೀರಾತು ನೀಡಿದೆ. ಈ ಪರೀಕ್ಷೆಗಳಿಗಾಗಿ ಒಟ್ಟು 2.40 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ ಕರೋನಾ ಸಾಂಕ್ರಾಮಿಕ ರೋಗ ಪ್ರಕೋಪದ ಹಿನ್ನೆಲೆ ಈ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
ಕೇಂದ್ರ ರೇಲ್ವೆ ಸಚಿವರಿಂದ ಟ್ವೀಟ್
RRBಯ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ (RRB-NTPC)ಗಳಿಗೆ ಮೊದಲ ಹಂತದ ಪರೀಕ್ಷೆಗಳು ಡಿಸೆಂಬರ್ 15, 2020ಕ್ಕೆ ಆರಂಭವಾಗಲಿವೆ ಎಂದು ರೇಲ್ವೆ ಇಲಾಖೆ ಘೋಷಿಸಿದೆ. ಈ ಪರೀಕ್ಷೆಯನ್ನು ಕಂಪ್ಯೂಟರ್ ಮೋಡ್ ಮೂಲಕ ತೆಗೆದುಕೊಳ್ಳಲಾಗುವುದು. ಕೇಂದ್ರ ರೇಲ್ವೆ ಸಚಿವ ಪಿಯುಶ್ ಗೋಯಲ್ ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ನಾಲ್ಕು ಲಕ್ಷ ಅಭ್ಯರ್ಥಿಗಳ ಅರ್ಜಿ ತಿರಸ್ಕೃತ
ಫೋಟೋ ಹೊಂದಾಣಿಕೆ ಸೇರಿದಂತೆ ಇತರೆ ಕಾರಣಗಳಿಗಾಗಿ ನಾಲ್ಕು ಲಕ್ಷ ಅಭ್ಯರ್ಥಿಗಳ ಅರ್ಜಿಗಳನ್ನು ರೈಲ್ವೆ ನೇಮಕಾತಿ ಮಂಡಳಿ ತಿರಸ್ಕರಿಸಿದೆ. ಇದೇ ವೇಳೆ ಇಲಾಖೆಯ ಇತರೆ ನೇಮಕಾತಿ ಪರೀಕ್ಷೆಗಳಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳ ಫೋಟೋ ಮತ್ತು ಸಹಿಯನ್ನು ಇದೀಗ ಕಾನೂನುಬಾಹಿರ ಎಂದು ಹೇಳಿ ತಿರಸ್ಕರಿಸಲಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಮಂಡಳಿಗೆ ಸುಧಾರಣೆಗೆ ಅವಕಾಶ ನೀಡಬೇಕು, ಇಲ್ಲದಿದ್ದರೆ ಕೊನೆಯ ಅವಕಾಶವಿರುವ ಅಭ್ಯರ್ಥಿಗಳು ಇದರಿಂದ ತೊಂದರೆ ಅನುಭವಿಸಲಿದ್ದಾರೆ ಎನ್ನಲಾಗಿದೆ.