ನವದೆಹಲಿ: ರಾಜಧಾನಿ ಮತ್ತು ದುರಾಂಟೋ ರೈಲುಗಳಲ್ಲಿ ಆಹಾರದ ಗುಣಮಟ್ಟ ಮತ್ತು ಸೇವೆಯ ವಿಧಾನವು ಎಂದಿಗಿಂತಲೂ ಉತ್ತಮವಾಗಿದೆ ಎಂದು ರೈಲ್ವೆ ಹೇಳಿಕೊಂಡಿದೆ. ಆದರೆ ನಿಮ್ಮ ಪ್ರಯಾಣದ ಸಮಯದಲ್ಲಿ, ನಿಮ್ಮ ಆಹಾರ ತಟ್ಟೆಯ ತೂಕವು ಮೊದಲಿಗಿಂತ ಕಡಿಮೆ ಇದೆ. ಅದೇ ಸಮಯದಲ್ಲಿ, ಪ್ರಯಾನಿಕರಿಗೆ ಆಹಾರದ ಆಯ್ಕೆ ಲಭ್ಯವಿರುತ್ತವೆ.


COMMERCIAL BREAK
SCROLL TO CONTINUE READING

ಆಹಾರದಲ್ಲಿ 150 ಗ್ರಾಂ ಕಡಿತ
ರೈಲ್ವೇ ವತಿಯಿಂದ  ರಾಜಧಾನಿ ಮತ್ತು ದುರಾಂಟೋ ರೈಲುಗಳಲ್ಲಿ ಒದಗಿಸುವ ಆಹಾರ ಸುಮಾರು 900 ಗ್ರಾಂಗಳಷ್ಟು. ಜುಲೈ 15 ರಿಂದ ಅದನ್ನು 750 ಗ್ರಾಂಗೆ ಇಳಿಸಲಾಗಿದೆ. ಆಹಾರದಲ್ಲಿ 30 ಗ್ರಾಂಗಳಷ್ಟು ಬೇಳೆಕಾಳು ಮತ್ತು ತರಕಾರಿಗಳ ಪ್ರಮಾಣವನ್ನು ಕಡಿಮೆ ಮಾಡಲಾಗುವುದು. ಸೂಪ್, ಬೆಣ್ಣೆ ಮತ್ತು ಕೆಲವು ವಸ್ತುಗಳಲ್ಲಿ 90 ಗ್ರಾಂಗಳ ಕಡಿತ ಇರುತ್ತದೆ.


ಉತ್ತಮ ಗುಣಮಟ್ಟದ ಆಹಾರ
ಆಹಾರದ ಗುಣಮಟ್ಟವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಪ್ರಯಾಣಿಕರು ದೂರುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ರೈಲ್ವೇ ಊಟದಲ್ಲಿ ನೀಡಲಾಗುವ ಬೇಳೆಕಾಳುಗಳನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಿದೆ. ಪನ್ನೀರ್ ಸಬ್ಜಿಯಲ್ಲಿ ನೀಡಲಾಗುವ ಗ್ರೇವಿಯನ್ನು ಸ್ವಲ್ಪ ಗಟ್ಟಿಯಾಗಿ ತಯಾರಿಸಲಾಗುತ್ತದೆ. ಸೀಸನ್ ನಲ್ಲಿ ಸಿಗುವಂತಹ ತರಕಾರಿಗಳನ್ನು ಹೆಚ್ಚಾಗಿ ಊಟದಲ್ಲಿ ಒದಗಿಸಲಾಗುವುದು. ಅದೇ ಸಮಯದಲ್ಲಿ ಮಾಂಸಾಹಾರ ಸೇವಿಸುವವರಿಗೆ ಮೂಳೆ ರಹಿತ ಚಿಕನ್ ನೀಡಲು ರೈಲ್ವೇ ನಿರ್ಧರಿಸಿದೆ.


ಎರಡನೇ ಮೀಲ್ ನಲ್ಲಿ ಬದಲಾವಣೆ
ಹಿಂದೆ ಸಸ್ಯಾಹಾರಿ ಆಹಾರ ಆಯ್ಕೆ ಮಾಡುವ ಪ್ರಯಾಣಿಕರಿಗೆ ಕೇವಲ ಪನ್ನೀರ್ ನೀಡಲಾಗುತ್ತಿತ್ತು. ಆದರೆ ಈಗ ರಾಜಧಾನಿ ರೈಲಿನಲ್ಲಿ ದೂರದ ಪ್ರಯಾಣ ಮಾಡುವವರಿಗೆ ಕೊಫ್ತಾ ಅಥವಾ ಕಡೀ ಆಯ್ಕೆಯನ್ನು ಎರಡನೇ ಮೀಲ್ ನಲ್ಲಿ ನೀಡಲಾಗುವುದು.


ರೈಲುಗಳಲ್ಲಿ ಆಹಾರ ಸೇವೆ ಒದಗಿಸುವ ವಿಧಾನದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಆಹಾರ ಸೇವೆ ಮಾಡುವವರಿಗೆ ಶಿಕ್ಷಣ ನೀಡಲಾಗುತ್ತದೆ. ವಿಮಾನಗಳಲ್ಲಿ ನೀಡುವಂತೆ ಆಹಾರವನ್ನು ಟ್ರಾಲಿಯಲ್ಲಿ ನೀಡಲಾಗುತ್ತದೆ. ಆಹಾರ ನಿರ್ವಹಣಾಕಾರರು ಹ್ಯಾಂಡ್ ಸ್ಯಾನಿಟೈಜರ್ ಬಳಸುತ್ತಾರೆ. ಆಹಾರವನ್ನು ಒದಗಿಸುವ ಟ್ರೇ ಜೈವಿಕ ವಿಘಟನೀಯವಾಗಿರುತ್ತದೆ.