ಭಾರೀ ಮಳೆ, ಗಾಳಿಗೆ ದೆಹಲಿ-NCR ತತ್ತರ!
ಬೆಳಿಗ್ಗೆಯಿಂದ ದೆಹಲಿ- NCR ನ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಗಾಳಿಯಿಂದಾಗಿ ಕತ್ತಲೆ ಆವರಿಸಿದೆ. ಬೆಳಿಗ್ಗೆ ಪ್ರಾರಂಭವಾದ ಮಳೆಯಿಂದಾಗಿ ಜನರ ಸಂಚಾರ ವ್ಯವಸ್ತೆಗೆ ತೊಂದರೆಯುಂಟಾಗಿದೆ.
ನವದೆಹಲಿ: ಬೆಳಿಗ್ಗೆಯಿಂದ ದೆಹಲಿ- NCR ನ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಗಾಳಿಯಿಂದಾಗಿ ಕತ್ತಲೆ ಆವರಿಸಿದೆ. ಮಂಗಳವಾರ ಬೆಳಿಗ್ಗೆ 6.30 ರಿಂದ ದೆಹಲಿ ಮತ್ತು ನೋಯ್ಡಾದ ಹಲವು ಪ್ರದೇಶಗಳಲ್ಲಿ ತೀವ್ರವಾಗಿ ಮಳೆ ಬೀಳುತ್ತಿದ್ದು, ಮಳೆಯಿಂದಾಗಿ ಜನರ ಸಂಚಾರ ವ್ಯವಸ್ತೆಗೆ ತೊಂದರೆಯುಂಟಾಗಿದೆ.
ಶಾಲಾ ಮಕ್ಕಳೊಂದಿಗೆ ಕಚೇರಿಗೆ ಹೋಗುವ ಜನರು ಸಹ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಜಾಮ್ ಹೆಚ್ಚಾಗಿದೆ.
ದೆಹಲಿಯ ಸುಭಾಷ್ ನಗರ ಪ್ರದೇಶದ ಬೆಳಗಿನ ದೃಶ್ಯ