Heavy Rain: ಉತ್ತರ ಭಾರತದಾದ್ಯಂತ ವರುಣನ ಆರ್ಭಟ; ಹಲವೆಡೆ ಕೆರೆಯಂತಾದ ರಸ್ತೆಗಳು
Heavy Rain: ದೇಶದ ರಾಷ್ಟ್ರೀಯ ರಾಜಧಾನಿ ದೆಹಲಿ ಸೇರಿದಂತೆ ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಅವಾಂತರವನ್ನುಂಟು ಮಾಡಿದೆ. ಭಾನುವಾರ ಬೆಳಗ್ಗೆಯಿಂದ ಈ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ರಾಜಧಾನಿಯ ಹಲವು ರಸ್ತೆಗಳು ಮಳೆಯಿಂದಾಗಿ ಮುಳುಗಿವೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇಡೀ ಉತ್ತರ ಭಾರತದಲ್ಲಿ ಭಾನುವಾರ ಮುಂಜಾನೆಯಿಂದ ನಿರಂತರ ಮಳೆ ಆಗುತ್ತಿದ್ದು, ಜನಜೀವನ ಅಸ್ಥವ್ಯಸ್ಥವಾಗಿದೆ. ಭಾನುವಾರ ಬೆಳಗ್ಗೆಯಿಂದ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಬಿಹಾರದಲ್ಲಿ ಮಳೆಯಾಗುತ್ತಿದೆ. ಮಳೆಯಿಂದಾಗಿ ಹಲವು ರಸ್ತೆಗಳು ಮುಳುಗಡೆಯಾಗಿವೆ. ಇದರಿಂದಾಗಿ ಜನರು ಹೊರಹೋಗಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಮಳೆಯಿಂದಾಗಿ ತಾಪಮಾನ ಕುಸಿತ:
ಮಳೆಯಿಂದಾಗಿ (Rain) ತಾಪಮಾನ ಕೂಡ ಕುಸಿದಿದೆ. ಮಳೆಯ ನಂತರ ವಾತಾವರಣವು ತಿರುಗುತ್ತದೆ ಮತ್ತು ಶೀತ ಪ್ರಾರಂಭವಾಗುತ್ತದೆ ಎಂದು ಕೂಡ ನಂಬಲಾಗಿದೆ.
Assam Intel Report: ISI ದೊಡ್ಡ ಪಿತೂರಿ ಬಯಲು, ಸೇನೆಯ ಪ್ರದೇಶಗಳು, RSS ನಾಯಕರೇ ಗುರಿ
ಹವಾಮಾನ ಇಲಾಖೆ ಭವಿಷ್ಯ:
ಭಾರತೀಯ ಹವಾಮಾನ (IMD) ಇಲಾಖೆಯು, ದೆಹಲಿ ಮತ್ತು ಹರಿಯಾಣದ ಗುರುಗ್ರಾಮ್, ಔರಂಗಾಬಾದ್, ಪಲ್ವಾಲ್, ಫರಿದಾಬಾದ್, ಬಲ್ಲಭಘರ್, ಪಾಣಿಪತ್, ಸೋಹ್ನಾ, ಮಾನೇಸರ್, ಭಿವಾನಿ, ನುಹ್, ರೇವಾರಿ, ನಾರ್ನಾಲ್, ಕರ್ನಾಲ್, ರೋಹ್ಟಕ್ ಮತ್ತು ಮಹೇಂದ್ರಗಢದಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಅಂದಾಜಿಸಿದೆ.
ಉತ್ತರ ಪ್ರದೇಶದಲ್ಲೂ ವರುಣನ ಅಬ್ಬರ:
ಹವಾಮಾನ ಇಲಾಖೆಯ ಪ್ರಕಾರ, ಉತ್ತರ ಪ್ರದೇಶದ ಬುಲಂದ್ ಶಹರ್, ನೋಯ್ಡಾ, ಗಾಜಿಯಾಬಾದ್, ಗ್ರೇಟರ್ ನೋಯ್ಡಾ, ಶಾಮ್ಲಿ, ಅಟ್ರೌಲಿ, ದೇವಬಂದ್, ನಜಿಬಾಬಾದ್, ಮುಜಫರ್ ನಗರ, ಬಿಜ್ನೋರ್, ಚಾಂದ್ ಪುರ್, ಬಾರೌತ್, ಮೀರತ್, ಮೊದಿನಗರ, ಹಪುರ್, ಗರ್ಮುಕ್ತೇಶ್ವರ, ಪಿಲ್ಖುಜಾ, ಸಿಕಂದರಾಬಾದ್, ಖಂಡರಾಬಾದ್, ಖಂಡರಾಬಾದ್ , ಮಥುರಾ, ಅಲಿಗಢ, ಹತ್ರಾಸ್, ಆಗ್ರಾ ಮತ್ತು ಹಸ್ತಿನಾಪುರದಲ್ಲಿ ಕೂಡ ಮುಂದಿನ ಕೆಲವು ಗಂಟೆಗಳ ಕಾಲ ಮಳೆ ಮುಂದುವರಿಯುವ ನಿರೀಕ್ಷೆಯಿದೆ.
ಇದನ್ನೂ ಓದಿ- ಮೊದಲ ಬಾರಿಗೆ ಶೂನ್ಯ ಕೋವಿಡ್ -19 ಸಾವನ್ನು ದಾಖಲಿಸಿದ ಮುಂಬೈ
ಇದಲ್ಲದೇ, ರಾಜಸ್ಥಾನದ ಅಲ್ವಾರ್, ರಾಜಗಢ, ಭರತ್‌ಪುರ ಮತ್ತು ಬಿರತ್‌ನಗರದಲ್ಲಿ ಮುಂದಿನ ಕೆಲವು ಗಂಟೆಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಇದಲ್ಲದೆ, ಭಾನುವಾರದಿಂದ ಮಧ್ಯಪ್ರದೇಶ ಮತ್ತು ಬಿಹಾರದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ