ನವದೆಹಲಿ: ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೋನವೈರಸ್ ಸಾಂಕ್ರಾಮಿಕ ರೋಗವು ಕಾಣಿಸಿಕೊಂಡ ನಂತರ ಮೊದಲ ಬಾರಿಗೆ ಮುಂಬಯಿ ಕೋವಿಡ್ -19 ನಿಂದ ಒಂದೇ ಒಂದು ಸಾವನ್ನು ಸಹ ವರದಿ ಮಾಡಿಲ್ಲ.
ಮುಂಬೈ ಪೌರಾಯುಕ್ತ ಇಕ್ಬಾಲ್ ಸಿಂಗ್ ಚಹಲ್ ಪ್ರಕಾರ, ನಗರವು ಮಾರ್ಚ್ 26, 2020 ರ ನಂತರ ಮೊದಲ ಬಾರಿಗೆ ಹಗಲಿನಲ್ಲಿ ವೈರಸ್‌ನಿಂದ ಶೂನ್ಯ ಸಾವನ್ನು ವರದಿ ಮಾಡಿದೆ."ಮುಂಬೈನಲ್ಲಿರುವ ನಮ್ಮೆಲ್ಲರಿಗೂ ಇದು ಒಳ್ಳೆಯ ಸುದ್ದಿ" ಎಂದು ಉನ್ನತ ಅಧಿಕಾರಿ ಹೇಳಿದರು.ಮಹಾನಗರವು ತನ್ನ ಮೊದಲ ಕರೋನವೈರಸ್ ಪಾಸಿಟಿವ್ ಪ್ರಕರಣವನ್ನು ಮಾರ್ಚ್ 11, 2020 ರಂದು ವರದಿ ಮಾಡಿತ್ತು ಮತ್ತು ಆರು ದಿನಗಳ ನಂತರ ಆ ವರ್ಷದ ಮಾರ್ಚ್ 17 ರಂದು ತನ್ನ ಮೊದಲ ಸಾವನ್ನು ವರದಿ ಮಾಡಿತು.
ಇದನ್ನೂ ಓದಿ: Covaxin ಗೆ ಹೆಚ್ಚಿನ ದರ ವಿಧಿಸಲು ಕೇಂದ್ರಕ್ಕೆ Bharat Biotech ಆಗ್ರಹ
"ಮುನ್ಸಿಪಲ್ ಕಮೀಶನರ್ ಆಗಿ,ಗ್ರೇಟರ್ ಮುಂಬೈಯ ಮುನ್ಸಿಪಲ್ ಕಾರ್ಪೊರೇಷನ್ ತಂಡವನ್ನು ಅವರ ಅದ್ಭುತ ಪ್ರದರ್ಶನಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ" ಎಂದು ಅವರು ಹೇಳಿದರು.
ಹೆಚ್ಚುವರಿಯಾಗಿ, ಮುಂಬೈ ಭಾನುವಾರ 367 ಸಕಾರಾತ್ಮಕ ಪ್ರಕರಣಗಳನ್ನು ದಾಖಲಿಸಿದ್ದು, ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 7,50,808 ಕ್ಕೆ ತಲುಪಿದರೆ ಮತ್ತು ಸಾವಿನ ಸಂಖ್ಯೆ 16,180 ಕ್ಕೆ ತಲುಪಿದೆ.ಮುಂಬೈನಲ್ಲಿ ಪ್ರಸ್ತುತ 5,030 ಸಕ್ರಿಯ COVID -19 ಪ್ರಕರಣಗಳಿವೆ. ಅದರ ಚೇತರಿಕೆ ದರವು ಶೇಕಡಾ 97 ರಷ್ಟಿದ್ದರೆ, ಪ್ರಕರಣ ದ್ವಿಗುಣಗೊಳಿಸುವ ದರವು 1,214 ದಿನಗಳು ಎನ್ನಲಾಗಿದೆ.ಅಕ್ಟೋಬರ್ 10 ರಿಂದ 16 ರವರೆಗಿನ ಕರೋನವೈರಸ್ ಪ್ರಕರಣಗಳ ಒಟ್ಟಾರೆ ಬೆಳವಣಿಗೆಯ ದರವು ಶೇ 0.06 ರಷ್ಟಿದೆ.
ಏಪ್ರಿಲ್ 4, 2021 ರಂದು ಮುಂಬೈ ಅತಿ ಹೆಚ್ಚು 11,163 ಪ್ರಕರಣಗಳನ್ನು ದಾಖಲಿಸಿದೆ ಮತ್ತು ಈ ವರ್ಷ ಮೇ 1 ರಂದು 90 ಸಾವುಗಳು ಸಂಭವಿಸಿವೆ.ಮುಂಬೈನ ಒಟ್ಟು ಶೇ 97 ರಷ್ಟು ಅರ್ಹ ನಾಗರಿಕರು ತಮ್ಮ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ ಮತ್ತು ಶೇ 55 ರಷ್ಟು ಜನರು ಸಂಪೂರ್ಣವಾಗಿ ಲಸಿಕೆ ಹಾಕಿದ್ದಾರೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ