Rajsthan Cabinet Reshuffle: ಇಂದು ಅಂದರೆ ನವೆಂಬರ್ 21 ರಂದು ರಾಜಸ್ಥಾನದಲ್ಲಿ ಸಚಿವ ಸಂಪುಟ ಪುನರ್ರಚನೆ ನಡೆದಿದೆ. ಒಟ್ಟು 15 ಶಾಸಕ-ಶಾಸಕಿಯರು ರಾಜಸ್ಥಾನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸರ್ಕಾರದ (Gehlot Government) ಎಲ್ಲಾ ಸಚಿವರು ಶನಿವಾರ ಸಂಜೆ ಪಕ್ಷದ ಹೈಕಮಾಂಡ್‌ಗೆ ರಾಜೀನಾಮೆ ಸಲ್ಲಿಸಿದ್ದರು. ನಂತರ 15 ಶಾಸಕ-ಶಾಸಕಿಯರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ 11 ಮಂದಿ ಕ್ಯಾಬಿನೆಟ್ ಸಚಿವರಾಗಿದ್ದರೆ, 4 ಮಂದಿ ರಾಜ್ಯ ಸಚಿವರಾಗಿದ್ದಾರೆ. ಈ 15 ಶಾಸಕ-ಶಾಸಕೀಯರಲ್ಲಿ ಮೂವರು ಮಹಿಳೆಯರಿಗೂ (Women In Rajasthan Cabinet) ಕೂಡ ಸ್ಥಾನ ಲಭಿಸಿದೆ. ಇದೇ ವೇಳೆ ಈ ಹೊಸ ಗೆಹ್ಲೋಟ್ ಕ್ಯಾಬಿನೆಟ್‌ನಲ್ಲಿ (Gehlot Cabinet) ಸಚಿನ್ ಪೈಲಟ್ ಬನದ ನಾಲ್ವರು ಶಾಸಕರನ್ನು ಸಹ ಸೇರಿಸಲಾಗಿದೆ.


ಸಾವಿರ ಅರ್ಥ ಹೇಳುವ ಮೋದಿ-ಯೋಗಿಯ ಎರಡು ಫೋಟೊ ಮತ್ತೊಂದು ಕವಿತೆ..!


COMMERCIAL BREAK
SCROLL TO CONTINUE READING

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ರಾಜೇಂದ್ರ ಸಿಂಗ್ ಗೂಢಾ ಕೂಡ ಸಚಿವರಾಗಿದ್ದರು
ಗೆಹ್ಲೋಟ್ ಅವರ ಆಪ್ತ ಎನಿಸಿಕೊಂಡಿರುವ ರಾಜೇಂದ್ರ ಗೂಢಾ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ. ಬಿಎಸ್‌ಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಗೂಢಾ ಅವರು ರಾಜಕೀಯ ಬಿಕ್ಕಟ್ಟಿನಲ್ಲಿ ಸರ್ಕಾರದಲ್ಲಿಯೇ ಇದ್ದರು, ಆದರೆ ಕಳೆದ ಕೆಲವು ತಿಂಗಳುಗಳಿಂದ ಸರ್ಕಾರ ಮತ್ತು ಪಕ್ಷದ ವಿರುದ್ಧ ಮುನಿಸಿಕೊಂಡಿದ್ದರು. ರಾಜೇಂದ್ರ ಗೂಢಾ ಅವರ ಸೋದರ ಮಾವ ಭನ್ವರ್ ಸಿಂಗ್ ಭಾಟಿ ಅವರು ಈಗಾಗಲೇ ಉನ್ನತ ಶಿಕ್ಷಣ ಸಚಿವರಾಗಿ ಸಂಪುಟದಲ್ಲಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ಓದಿ-Farm Laws Withdrawn: MSP Guarantee ಸಿಗುವವರೆಗೆ ಹೋರಾಟ ಮುಂದುವರೆಯಲಿದೆ, ಸಿಂಘು ಬಾರ್ಡರ್ ನಿಂದ ರೈತರ ಘೋಷಣೆ


ಜಾಹಿದಾ ಖಾನ್ ಮುಸ್ಲಿಂ ಕೋಟಾದಲ್ಲಿ ಸಚಿವರಾದರು
ಭರತಪುರ್ ಕಾಮಾ ಪ್ರದೇಶದಿಂದ ಬಂದಿರುವ ಮುಸ್ಲಿಂ ಅಭ್ಯರ್ಥಿ ಜಾಹಿದಾ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಜಾಹಿದಾ ಅವರನ್ನು ಪಕ್ಷಕ್ಕೆ ಪ್ರಮುಖ ಫ್ಯಾಕ್ಟರ್ ಎಂದು ನೋಡಲಾಗುತ್ತದೆ. ಇದೇ ವೇಳೆ ಬಹುಕಾಲದಿಂದ ಮುಸ್ಲಿಂ ಅಭ್ಯರ್ಥಿಗಳಿಗೆ ಸಚಿವ ಸ್ಥಾನ ನೀಡದಿರುವ ಚರ್ಚೆಗೂ ಕೂಡ ಇದೀಗ ಬ್ರೇಕ್ ಬಿದ್ದಂತಾಗಿದೆ. 


ಇದನ್ನೂ ಓದಿ-750 ಮೃತ ರೈತರ ಕುಟುಂಬಗಳಿಗೆ 3 ಲಕ್ಷ ರೂ.ಪರಿಹಾರ ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.