Farm Laws Withdrawn: MSP Guarantee ಸಿಗುವವರೆಗೆ ಹೋರಾಟ ಮುಂದುವರೆಯಲಿದೆ, ಸಿಂಘು ಬಾರ್ಡರ್ ನಿಂದ ರೈತರ ಘೋಷಣೆ

Farm Laws Withdrawn: ಈಗಾಗಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಆದರೆ, ಸದ್ಯಕ್ಕೆ ಧರಣಿ ಮುಂದುವರಿಸುತ್ತೇವೆ ಎನ್ನುತ್ತಾರೆ ರೈತ ಮುಖಂಡರು.

Written by - Nitin Tabib | Last Updated : Nov 21, 2021, 04:22 PM IST
  • ರೈತರ ಆಂದೋಲನ ಜಾರಿಯಲ್ಲಿರಲಿದೆ.
  • ಇನ್ನು ಎಲ್ಲಾ ಬೇಡಿಕೆಗಳು ಪೂರ್ಣಗೊಂಡಿಲ್ಲ -SKM
  • ಉಳಿದ ಬೇಡಿಕೆಗಳನ್ನು ಕೂಡ ಈಡೇರಿಸಬೇಕು -SKM
Farm Laws Withdrawn: MSP Guarantee ಸಿಗುವವರೆಗೆ ಹೋರಾಟ ಮುಂದುವರೆಯಲಿದೆ, ಸಿಂಘು ಬಾರ್ಡರ್ ನಿಂದ ರೈತರ ಘೋಷಣೆ  title=
Farm Laws Withdrawn (File Photo)

ನವದೆಹಲಿ: Farm Laws Repeal - ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಆದರೆ, ಸಂಸತ್ತಿನಲ್ಲಿ ಕಾನೂನು ಹಿಂಪಡೆಯುವವರೆಗೂ ಹೋರಾಟ ಮುಂದುವರಿಸುವುದಾಗಿ ರೈತ ಮುಖಂಡರು ಹೇಳಿದ್ದಾರೆ. ಈ ಎಲ್ಲದರ ಬಗ್ಗೆ ಮಾಹಿತಿ ನೀಡಿರುವ ಯುನೈಟೆಡ್ ಕಿಸಾನ್ ಮೋರ್ಚಾದ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ಅವರು, "ನವೆಂಬರ್ 27 ರಂದು ಯುನೈಟೆಡ್ ಕಿಸಾನ್ ಮೋರ್ಚಾದ (SKM) ಮತ್ತೊಂದು ಸಭೆ ನಡೆಯಲಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು, ಅಲ್ಲಿಯವರೆಗೆ ಪರಿಸ್ಥಿತಿಯ ಆಧಾರದ ಮೇಲೆ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ. 

"ಕೃಷಿ ಕಾಯಿದೆಗಳ ರದ್ದತಿ ಕುರಿತು ಚರ್ಚಿಸಿದ್ದೇವೆ. ಬಳಿಕ ಕೆಲ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಸಂಯುಕ್ತ ಕಿಸಾನ್ ಮೋರ್ಚಾದ ಪೂರ್ವನಿರ್ಧರಿತ ಕಾರ್ಯಕ್ರಮಗಳು ಮುಂದುವರಿಯಲಿವೆ. ನ.22ರಂದು ಲಖನೌದಲ್ಲಿ ಕಿಸಾನ್ ಪಂಚಾಯತ್, ನ.26ರಂದು ಎಲ್ಲ ಗಡಿಗಳಲ್ಲಿ ಸಭೆ ಹಾಗೂ ನ. 29 ಸಂಸತ್ತಿನವರೆಗೆ ಮೆರವಣಿಗೆಗಳು ನಡೆಯಲಿವೆ" ಎಂದು ಅವರು ಸಭೆಯ ಕುರಿತು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ-750 ಮೃತ ರೈತರ ಕುಟುಂಬಗಳಿಗೆ 3 ಲಕ್ಷ ರೂ.ಪರಿಹಾರ ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್

ಈ ಸಂದರ್ಭದಲ್ಲಿ ಬಾಕಿ ಉಳಿದಿರುವ ಬೇಡಿಕೆಗಳನ್ನು ಪ್ರಸ್ತಾಪಿಸಿರುವ ರಾಜೆವಾಲ್ "ನಾವು ಪ್ರಧಾನಿಗೆ ಬಹಿರಂಗ ಪತ್ರ ಬರೆಯುತ್ತೇವೆ ಮತ್ತು ಅದರಲ್ಲಿ ಎಂಎಸ್‌ಪಿ ಸಮಿತಿಯ ಬೇಡಿಕೆಗಳು, ಅದರ ಅಧಿಕಾರಗಳು, ಅದರ ಕಾಲಮಿತಿ, ಅದರ ಕರ್ತವ್ಯಗಳು, ವಿದ್ಯುತ್ ಮಸೂದೆ 2022,  ಪ್ರಕರಣಗಳನ್ನು ಹಿಂಪಡೆಯುವಿಕೆಯಂತಹ ಬೇಡಿಕೆಗಳು ಇರಲಿವೆ. ಜೊತೆಗೆ ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಅಜಯ್ ಮಿಶ್ರಾ  ಟೆನಿ ಅವರನ್ನು ವಜಾಗೊಳಿಸುವಂತೆ ಪ್ರಧಾನಿಗೆ ಪತ್ರ ಬರೆಯಲಾಗುವುದು" ಎಂದಿದ್ದಾರೆ. ಇದೇ ವೇಳೆ ಕೃಷಿ ಕಾಯ್ದೆಯನ್ನು ರದ್ದುಗೊಳಿಸುವ ನಿರ್ಧಾರವನ್ನು ಸ್ವಾಗತಿಸಿರುವ ಅವರು "ಇದೊಂದು ಒಳ್ಳೆಯ ಹೆಜ್ಜೆ, ಸ್ವಾಗತಿಸುತ್ತೇವೆ, ಆದರೆ ಇನ್ನೂ ಮಾಡಬೇಕಾದದ್ದು ಬಹಳಷ್ಟಿದೆ" ಎಂದರು.

ಇದನ್ನೂ ಓದಿ-ಯಾವಾಗ ರೈತರ ಖಾತೆಗೆ ಕ್ರೆಡಿಟ್ ಆಗಲಿದೆ ಪಿಎಂ ಕಿಸಾನ್ 10ನೇ ಕಂತಿಕನ ಹಣ? ಇಲ್ಲಿದೆ ಮಾಹಿತಿ

ಅದೇ ಸಮಯದಲ್ಲಿ, ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಮೋದಿ ಸಂಪುಟವು ನವೆಂಬರ್ 24 ರಂದು ಮೂರು ವಿವಾದಿತ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ತನ್ನ ಅನುಮೋದನೆಯನ್ನು ನೀಡಲಿದೆ. ಇದಾದ ಬಳಿಕ ನವೆಂಬರ್ 29 ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದಲ್ಲಿ ಕಾನೂನನ್ನು ಹಿಂಪಡೆಯುವ ಸಾಂವಿಧಾನಿಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಸಂಸದೀಯ ನಿಯಮಗಳ ಪ್ರಕಾರ, ಹಳೆಯ ಕಾನೂನನ್ನು ಹಿಂಪಡೆಯುವ ಪ್ರಕ್ರಿಯೆಯು ಹೊಸ ಕಾನೂನನ್ನು ಮಾಡುವಂತೆಯೇ ಇರಲಿದೆ.

ಇದನ್ನೂ ಓದಿ-Yogi Adityanath: ಕೃಷಿ ಕಾಯ್ದೆ ಹಿಂಪಡೆಯುವ ವಿಚಾರ; ಬಿಜೆಪಿ ಎಲ್ಲರ ಧ್ವನಿಗೂ ಕಿವಿಗೊಡುತ್ತದೆ ಎಂದ ಸಿಎಂ ಯೋಗಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News