Rajasthan Political Crisis: ಸೋನಿಯಾ ಗಾಂಧಿಗೆ ವರದಿ ಸಲ್ಲಿಸಿದ ಖರ್ಗೆ-ಮಾಕನ್, ವರದಿಯಲ್ಲೇನಿದೆ?
Rajasthan Political Crisis: ರಾಜಸ್ಥಾನದ ರಾಜಕೀಯ ಬೆಳವಣಿಗೆಗಳ ಕುರಿತು ಲಿಖಿತ ವರದಿ ಸಲ್ಲಿಸುವಂತೆ ಉಸ್ತುವಾರಿ ಅಜಯ್ ಮಾಕನ್ ಹಾಗೂ ಪರಿವೀಕ್ಷಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ್ದರು.
Rajasthan Political Crisis: ರಾಜಸ್ಥಾನದ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕನ್ ಮತ್ತು ಪರಿವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ (ಸೆಪ್ಟೆಂಬರ್ 27) ರಾಜಸ್ಥಾನದ ಬೆಳವಣಿಗೆಗಳ ಕುರಿತು ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಿದ್ದಾರೆ. ಮೂಲಗಳ ವರದಿಯ ಪ್ರಕಾರ ಅಶಿಸ್ತಿನ ಪ್ರಕರಣ ಇದಾಗಿದ್ದು, ಸಚಿವ ಶಾಂತಿ ಧರಿವಾಲ್ ಮತ್ತು ತಮ್ಮ ಮನೆಯಲ್ಲಿ ಶಾಸಕರ ಸಭೆ ಕರೆದ ಸಚಿವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಜಯ್ ಮಾಕನ್ ಮತ್ತು ಪರಿವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಜೈಪುರದಿಂದ ಹಿಂದಿರುಗಿದ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಕಾಂಗ್ರೆಸ್ ಅಧ್ಯಕ್ಷೆ ಇಬ್ಬರೂ ನಾಯಕರಿಂದ ಲಿಖಿತ ವರದಿ ಕೇಳಿದ್ದರು.
ಮೂಲಗಳ ಪ್ರಕಾರ, ಕಾಂಗ್ರೆಸ್ ಪರಿವೀಕ್ಷಕರ ವರದಿಯು ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕ ಮಹೇಶ್ ಜೋಶಿ ಸೇರಿದಂತೆ ಮೂವರು ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ. ಕಾಂಗ್ರೆಸ್ ವೀಕ್ಷಕರ ವರದಿ ಸಮಾನಾಂತರ ಸಭೆಗಳನ್ನು ಆಯೋಜಿಸಿದ ರಾಜಸ್ಥಾನದ ಶಾಸಕರ ವತಿಯಿಂದ ನಡೆದ "ತೀವ್ರ ಅಶಿಸ್ತನ್ನು" ಸೂಚಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ-Congress President Election: ಸೆಪ್ಟೆಂಬರ್ 30ರಂದು ಶಶಿ ತರೂರ್ ನಾಮಪತ್ರ ಸಲ್ಲಿಕೆ, ಫಾರ್ಮ್ ಪಡೆದ ಪವನ್ ಬನ್ಸಲ್
ಅಶೋಕ್ ಗೆಹ್ಲೋಟ್ ವಿರುದ್ಧ ನೇರ ಆರೋಪಗಳಿಲ್ಲ
ಮೂಲಗಳ ಪ್ರಕಾರ, ಒಂಬತ್ತು ಪುಟಗಳ ಈ ವರದಿಯಲ್ಲಿ ಅಶೋಕ್ ಗೆಹ್ಲೋಟ್ ವಿರುದ್ಧ ಯಾವುದೇ ನೇರ ಆರೋಪ ಮಾಡಲಾಗಿಲ್ಲ, ಆದರೆ ಗೆಹ್ಲೋಟ್ ಅವರ ನಿಕಟವರ್ತಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ವಾಸ್ತವದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ, ರಾಜಸ್ಥಾನದಲ್ಲಿ ಸಿಎಂ ಬದಲಾವಣೆಯ ಬಗ್ಗೆ ಊಹಾಪೋಹಗಳು ಪಸರಿಸಿದ್ದವು. ಈ ವಿಚಾರವಾಗಿ ಭಾನುವಾರ ಮುಖ್ಯಮಂತ್ರಿ ನಿವಾಸದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನೂ ಸಹ ಕರೆಯಲಾಗಿತ್ತು.
ಇದನ್ನೂ ಓದಿ-SC: ಅಸಲಿ ಶಿವಸೇನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಧವ್ ಬಣಕ್ಕೆ ಭಾರಿ ಹಿನ್ನಡೆ, ಸುಪ್ರೀಂ ಹೇಳಿದ್ದೇನು?
ಸಮಾನಾಂತರ ಸಭೆ ನಡೆಸಿದ ಗೆಹ್ಲೋಟ್ ಅವರ ನಿಕಟವರ್ತಿ ಶಾಂತಿ ಧರಿವಾಲ್
ಈ ಸಭೆಗಾಗಿ ಕಾಂಗ್ರೆಸ್ ರಾಜಸ್ಥಾನ ಉಸ್ತುವಾರಿ ಅಜಯ್ ಮಾಕನ್ ಮತ್ತು ಪರಿವೀಕ್ಷಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜೈಪುರಕ್ಕೆ ಕಳುಹಿಸಿತ್ತು. ಶಾಸಕಾಂಗ ಪಕ್ಷದ ಸಭೆಗೂ ಮುನ್ನವೇ ಗೆಹ್ಲೋಟ್ ಅವರ ಆಪ್ತರಾಗಿದ್ದ ಶಾಂತಿ ಧರಿವಾಲ್ ಅವರ ಮನೆಯಲ್ಲಿ ಶಾಸಕರ ಸಭೆ ನಡೆಸಲಾಗಿದೆ. ಈ ಸಭೆಯ ನಂತರ, ಗೆಹ್ಲೋಟ್ ಅವರನ್ನು ಬೆಂಬಲಿಸುವ ಅನೇಕ ಶಾಸಕರು ರಾಜೀನಾಮೆ ನೀಡಲು ಸ್ಪೀಕರ್ ಸಿಪಿ ಜೋಶಿ ಅವರ ನಿವಾಸಕ್ಕೆ ತೆರಳಿದ್ದಾರೆ. ಸಚಿವ ಶಾಂತಿ ಧರಿವಾಲ್ ಅವರ ಮನೆಯಲ್ಲಿ ನಡೆದ ಈ ಸಭೆಯಿಂದಾಗಿ ಶಾಸಕಾಂಗ ಪಕ್ಷದ ಸಭೆ ರದ್ದಾಗಿದೆ. ಇದಾದ ನಂತರ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್ ಕೂಡ ದೆಹಲಿಗೆ ವಾಪಸ್ಸಾಗಿದ್ದರು.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ