Rajya Sabha Election 2024: ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯುತ್ತಿದೆ. ರಾಜ್ಯಸಭೆಯ ತೆರವಾಗಿರುವ 56 ಸ್ಥಾನಗಳಿಗೆ ಈ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯು ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಏಕೆಂದರೆ ಇಲ್ಲಿ ಜನರು ನೇರವಾಗಿ ಮತ ಚಲಾಯಿಸುವುದಿಲ್ಲ. ಅಂದರೆ ಈ ಚುನಾವಣೆಗೂ, ಜನಸಾಮಾನ್ಯರಿಗೂ ನೇರ ಸಂಬಂಧವಿರುವುದಿಲ್ಲ. .


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೋಟ್ಯಂತರ ರೈತರ ಖಾತೆಗೆ ಈ ದಿನದಂದು ಬರಲಿದೆ ರೂ.2000


ಪ್ರಶ್ನೆ - ರಾಜ್ಯಸಭಾ ಚುನಾವಣೆಯಲ್ಲಿ ಯಾರು ಮತ ಹಾಕಬಹುದು?


ಉತ್ತರ - ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯ ವಿಧಾನಸಭೆಯ ಸದಸ್ಯರು ಅಂದರೆ ಶಾಸಕರು ಮತ ಚಲಾಯಿಸುತ್ತಾರೆ.


ಪ್ರಶ್ನೆ: ರಾಜ್ಯಸಭಾ ಸದಸ್ಯರಾಗಲು ವಯಸ್ಸು ಎಷ್ಟಿರಬೇಕು?


ಉತ್ತರ - ರಾಜ್ಯಸಭೆಯ ಸದಸ್ಯರಾಗಲು, ಭಾರತೀಯ ಪ್ರಜೆಯಾಗಿರುವುದು ಮೊದಲ ಆದ್ಯತೆ. ಇದರೊಂದಿಗೆ ಅವರ ವಯಸ್ಸು ಕನಿಷ್ಠ 30 ವರ್ಷಗಳು.


ಪ್ರಶ್ನೆ: ಯಾವುದೇ ರಾಜ್ಯಸಭಾ ಸದಸ್ಯರ ನಾಮನಿರ್ದೇಶನಕ್ಕೆ ಎಷ್ಟು ಪ್ರಪೋಸರ್‌’ಗಳ ಅಗತ್ಯವಿದೆ?


ಉತ್ತರ - ನಿಯಮಗಳ ಪ್ರಕಾರ, ಒಟ್ಟು ಸಂಖ್ಯೆಯ ಶೇಕಡಾ 10 ರಷ್ಟು ಅಥವಾ ಸದನದ ಕನಿಷ್ಠ 10 ಸದಸ್ಯರನ್ನು ಅಭ್ಯರ್ಥಿಗಳ ನಾಮನಿರ್ದೇಶನ ಪತ್ರಗಳಲ್ಲಿ ಪ್ರಸ್ತಾವಕರಾಗಿ ಪ್ರಸ್ತಾಪಿಸಬೇಕು.


ಪ್ರಶ್ನೆ: ಯಾರು ಮತ ಹಾಕಬಹುದು?


ಉತ್ತರ: ಲೋಕಸಭೆಯ ಸಂಸದರ ಚುನಾವಣೆ ನಾಗರಿಕ ಆಧಾರಿತವಾಗಿದ್ದರೂ, ರಾಜ್ಯಸಭೆ ಸದಸ್ಯತ್ವ ವಿಭಿನ್ನವಾಗಿರುತ್ತದೆ. ಅಂದರೆ ಲೋಕಸಭೆಯ ಸಂಸದರು ಜನರಿಂದಲೇ ಆಯ್ಕೆಯಾದರೆ, ರಾಜ್ಯಸಭೆಯಲ್ಲಿ ಸಾರ್ವಜನಿಕರಿಂದ ಚುನಾಯಿತರಾದ ಸಾರ್ವಜನಿಕ ಪ್ರತಿನಿಧಿಗಳು (ಎಂಎಲ್‌’ಎ) ಭಾಗವಹಿಸುತ್ತಾರೆ. ಅವರು ಮಾತ್ರ ಮತ ಚಲಾಯಿಸುತ್ತಾರೆ. ಯಾವ ಪಕ್ಷವು ಹೆಚ್ಚು ಶಾಸಕರನ್ನು ಹೊಂದಿರುತ್ತೋ, ಆ ರಾಜ್ಯದಲ್ಲಿ ಅದೇ ಪಕ್ಷವು ರಾಜ್ಯಸಭಾ ಸದಸ್ಯರಾಗುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತದೆ.


ಪ್ರಶ್ನೆ - ಯಾವಾಗ ಮತ್ತು ಎಷ್ಟು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ?


ಉತ್ತರ - ಫೆಬ್ರವರಿ 27 ರಂದು ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ 15 ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಮಂಗಳವಾರ ಸಂಜೆ 5 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ.


ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರನ್ನು ಶ್ರೀಮಂತರನ್ನಾಗಿಸಲಿದೆ ಬಿಸಿಸಿಐ! ವೇತನ ಹೆಚ್ಚಳದೊಂದಿಗೆ ಬೋನಸ್?   


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.