ಟೀಂ ಇಂಡಿಯಾ ಆಟಗಾರರನ್ನು ಶ್ರೀಮಂತರನ್ನಾಗಿಸಲಿದೆ ಬಿಸಿಸಿಐ! ವೇತನ ಹೆಚ್ಚಳದೊಂದಿಗೆ ಬೋನಸ್?

Indian Cricket Players Salary: ಟೀಂ ಇಂಡಿಯಾ ಆಟಗಾರರ ವೇತನ ಶೀಘ್ರದಲ್ಲೇ ಹೆಚ್ಚಾಗುವ ನಿರೀಕ್ಷೆಯಿದ್ದು... ಸದ್ಯ ಟೆಸ್ಟ್ ಸರಣಿ ಆಡುವ ಆಟಗಾರರಿಗೆ ಬೋನಸ್ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ.

Written by - Savita M B | Last Updated : Feb 27, 2024, 11:15 AM IST
  • ಆಟಗಾರರು ದೇಶಿಯ ಪಂದ್ಯಗಳನ್ನು ಹೊರತುಪಡಿಸಿ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ
  • ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೆಸ್ಟ್‌ ಕ್ರಿಕೆಟ್‌ನ್ನು ಪ್ರೋತ್ಸಾಹಿಸಲು ದೊಡ್ಡ ಹೆಜ್ಜೆಯೊಂದನ್ನು ಹಾಕುತ್ತಿದೆ
ಟೀಂ ಇಂಡಿಯಾ ಆಟಗಾರರನ್ನು ಶ್ರೀಮಂತರನ್ನಾಗಿಸಲಿದೆ ಬಿಸಿಸಿಐ! ವೇತನ ಹೆಚ್ಚಳದೊಂದಿಗೆ ಬೋನಸ್?  title=

Team India: ಭಾರತೀಯ ಕ್ರಿಕೆಟ್ ತಂಡದ ಅನೇಕ ಆಟಗಾರರು ದೇಶಿಯ ಪಂದ್ಯಗಳನ್ನು ಹೊರತುಪಡಿಸಿ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ.. ಇದರಿಂದ ಕೆಲವು ಆಟಗಾರರ ವಿರುದ್ಧ ಆರೋಪಗಳೂ ಕೇಳಿಬಂದಿವೆ.. 

ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೆಸ್ಟ್‌ ಕ್ರಿಕೆಟ್‌ನ್ನು ಪ್ರೋತ್ಸಾಹಿಸಲು ದೊಡ್ಡ ಹೆಜ್ಜೆಯೊಂದನ್ನು ಹಾಕುತ್ತಿದ್ದು.. ವರದಿಗಳ ಪ್ರಕಾರ ಬಿಸಿಸಿಐ ಟೆಸ್ಟ್ ಪಂದ್ಯಗಳನ್ನು ಆಡುವ ಆಟಗಾರರ ವೇತನವನ್ನು ಹೆಚ್ಚಿಸಲಿದ್ದು.. ಎಲ್ಲಾ ಸರಣಿಗಳಲ್ಲಿ ಆಡುವ ಆಟಗಾರರಿಗೆ ಬೋನಸ್ ಕೂಡ ನೀಡಲಿದೆ.. ಅಲ್ಲದೇ ಐಪಿಎಲ್ 2024 ರ ನಂತರ ಟೆಸ್ಟ್ ಆಟಗಾರರ ವೇತನ ಹೆಚ್ಚಾಗಲಿದೆ ಎನ್ನಲಾಗಿದೆ.. 

ಇದನ್ನೂ ಓದಿ-Yashasvi jaiswal: 7 ಟೆಸ್ಟ್‌ಗಳ ಅಪೂರ್ವ ದಾಖಲೆಗಳಿಂದ ಕ್ರಿಕೆಟ್ ದಂತಕಥೆಗಳ ಪಟ್ಟಿಯಲ್ಲಿ‌ ಸ್ಥಾನ ಪಡೆದ ಸ್ಟಾರ್ ಬ್ಯಾಟ್ಸ್‌ಮನ್ ಈತ!

ಬಿಸಿಸಿಐ ಮನವಿಯ ಹೊರತಾಗಿಯೂ ಅನೇಕ ಆಟಗಾರು ಐಪಿಎಲ್‌ನಲ್ಲಿ ಫಿಟ್ ಆಗಿರಲು ರಣಜಿ ಟ್ರೋಫಿ ಮತ್ತು ದೇಶೀಯ ಪಂದ್ಯಗಳನ್ನು ತೊರೆದಿದ್ದು.. ಈ ಬದಲಾವಣೆಗೆ ಪ್ರಮುಖ ಕಾರಣವಾಗಿದೆ.. ವರದಿಗಳ ಪ್ರಕಾರ, ಬಿಸಿಸಿಐ ಮನವಿಯ ಹೊರತಾಗಿಯೂ ಇಶಾನ್ ಪಂದ್ಯವನ್ನು ಆಡಲಿಲ್ಲ. ಶ್ರೇಯಸ್ ಅಯ್ಯರ್ ಕೂಡ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯವನ್ನು ತೊರೆದಿದ್ದಾರೆ..

ಪ್ರಸ್ತುತ ಬಿಸಿಸಿಐ ಟೆಸ್ಟ್ ಪಂದ್ಯಕ್ಕಾಗಿ ಆಟಗಾರರಿಗೆ 15 ಲಕ್ಷ ರೂ. ವೇತನದ ಜೊತೆಗೆ ಬೋನಸ್ ನೀಡುವುದಲ್ಲದೇ‌ ಆಟಗಾರರ ಗ್ರೇಡ್‌ಗೆ ಅನುಗುಣವಾಗಿ ವೇತನವನ್ನು ಹೆಚ್ಚಿಸುವ ಚಿಂತನೆ ನಡೆಸಿದೆ.. ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದ್ದು.. ಭಾರತ ಅಜೇಯ 3-1 ಮುನ್ನಡೆ ಸಾಧಿಸಿದೆ.. 

ಇದನ್ನೂ ಓದಿ-Virat Kohli: ಅಕಾಯ್‌ ಜನನದ ನಂತರ ಸೋಷಿಯಲ್‌ ಮಿಡಿಯಾದಲ್ಲಿ ಕೊಹ್ಲಿ ರೆಕಾರ್ಡ್‌! ಏನದು?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News