MP Subhash Chandra Visits Tirumala: ರಾಜ್ಯಸಭಾ ಸದಸ್ಯರು ಹಾಗೂ ಜೀ ಗ್ರೂಪ್ ಸಂಸ್ಥಾಪಕರೂ ಆದ ಡಾ. ಸುಭಾಷ್ ಚಂದ್ರ ಅವರು ಗುರುವಾರ ಬೆಳಗ್ಗೆ ತಿರುಮಲದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ಇಂದು ಬೆಳಿಗ್ಗೆ ವಿಐಪಿ ವಿಶೇಷ ದರ್ಶನದಲ್ಲಿ ಡಾ. ಸುಭಾಷ್ ಚಂದ್ರ ಅವರು ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿದರು. 


COMMERCIAL BREAK
SCROLL TO CONTINUE READING

ಸುಪ್ರಸಿದ್ದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ್ದ ರಾಜ್ಯಸಭಾ ಸಂಸದರು ಹಾಗೂ ಜೀ ಗ್ರೂಪ್ ಸಂಸ್ಥಾಪಕರೂ ಆದ ಡಾ. ಸುಭಾಷ್ ಚಂದ್ರ (Rajya sabha MP Dr. Subhash Chandra) ಅವರನ್ನು ತಿರುಮಲೈ ತಿರುಪತಿ ದೇವಸ್ಥಾನದ ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮರೆಡ್ಡಿ ಸೇರಿದಂತೆ ಇತರೆ ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿದರು.


ಇದನ್ನೂ ಓದಿ- Tirumala Tirupati Temple: ತಿರುಪತಿಗೆ ಹೋಗಲು ಯೋಜಿಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ


ತಿರುಪತಿ ತಿಮ್ಮಪ್ಪನ (Tirupati Timmappa) ದರ್ಶನದ ನಂತರ ಅವರಿಗೆ ರಂಗನಾಯಕುಲ ಮಂಟಪದಲ್ಲಿ ವೇದ ಪಂಡಿತರಿಂದ ವೇದಶೀರ್ವಚನ ನೀಡಲಾಯಿತು. ಹೆಚ್ಚುವರಿ ಇಒ ಅವರು ಡಾ. ಸುಭಾಷ್ ಚಂದ್ರ ಅವರಿಗೆ ತೀರ್ಥ ಪ್ರಸಾದಗಳು ಮತ್ತು 2022 ರ ಟಿಟಿಡಿ ಡೈರಿ ಮತ್ತು ಬಾಲಾಜಿಯ ಕ್ಯಾಲೆಂಡರ್ ಅನ್ನು ನೀಡಿದರು. 


[[{"fid":"227512","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


(ದೇವಸ್ಥಾನದ ಒಳಗೆ ಡಾ. ಸುಭಾಷ್ ಚಂದ್ರ ಅವರಿಗೆ ತೀರ್ಥ ಪ್ರಸಾದ ಮತ್ತು ಪಂಡಿತರು ಆಶೀರ್ವಾದ ನೀಡುತ್ತಿರುವ ದೃಶ್ಯ ಚಿತ್ರ: ಟಿಟಿಡಿ) 


ಇದನ್ನೂ ಓದಿ- ಇನ್ನು ಮುಂದೆ ಬೆಂಗಳೂರು, ಚೆನ್ನೈ, ಹೈದರಾಬಾದಿನಲ್ಲೇ ಸಿಗುತ್ತೆ ತಿರುಪತಿ ಲಡ್ಡು, ಅದೂ ಸಬ್ಸಿಡಿ ದರದಲ್ಲಿ...


[[{"fid":"227514","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


ಈ ಸಂದರ್ಭದಲ್ಲಿ ದೇವಸ್ಥಾನದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ಡಾ. ಸುಭಾಷ್ ಚಂದ್ರ ಅವರು ಹಿಂದೂ ಧರ್ಮ ಪ್ರಚಾರಕ್ಕಾಗಿ ಟಿಟಿಡಿಯ ಕಾರ್ಯವನ್ನು ಶ್ಲಾಘಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.