Tirumala Tirupati Temple: ತಿರುಪತಿಗೆ ಹೋಗಲು ಯೋಜಿಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ

Tirumala Tirupati Temple Sarva Darshan Tickets: ಸಾಮಾನ್ಯ ಯಾತ್ರಿಕರಿಗೆ ಪ್ರಮುಖ ಪರಿಹಾರವಾಗಿ, ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಬುಧವಾರ ಸೆಪ್ಟೆಂಬರ್ 26 ರಿಂದ ವಿಶೇಷ ಪ್ರವೇಶ ದರ್ಶನ (ಎಸ್‌ಇಡಿ) ಟೋಕನ್‌ಗಳಿಗೆ ಸಮನಾಗಿ ದಿನಕ್ಕೆ 8,000 ಸ್ಲಾಟ್ ಸರ್ವ ದರ್ಶನ (ಎಸ್‌ಎಸ್‌ಡಿ) ಟೋಕನ್‌ಗಳನ್ನು ನೀಡಲು ನಿರ್ಧರಿಸಿದೆ.

Written by - Yashaswini V | Last Updated : Sep 23, 2021, 11:55 AM IST
  • ಸರ್ವ ದರ್ಶನ ತಿರುಪತಿ ಟಿಕೆಟ್‌ಗಳು 300 ರೂ.ಗೆ ಲಭ್ಯವಿರುತ್ತವೆ
  • ತಿರುಪತಿಯಲ್ಲಿ ಕೌಂಟರ್‌ಗಳಲ್ಲಿ ಸರ್ವ ದರ್ಶನ ಟೋಕನ್ ನೀಡುವುದನ್ನು ನಿಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
  • ಸೆಪ್ಟೆಂಬರ್ 25 ರಿಂದ ಅವುಗಳನ್ನು ಆನ್‌ಲೈನ್‌ನಲ್ಲಿ ಲಭ್ಯಗೊಳಿಸಲಾಗುವುದು ಎನ್ನಲಾಗಿದೆ
Tirumala Tirupati Temple: ತಿರುಪತಿಗೆ ಹೋಗಲು ಯೋಜಿಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ title=
Tirumala Tirupati Temple: ತಿರುಪತಿಗೆ ಹೋಗಲು ಯೋಜಿಸುತ್ತಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ

Tirumala Tirupati Temple Sarva Darshan Tickets: ತಿರುಪತಿ ತಿರುಮಲ ದೇವಸ್ಥಾನವು ವಿಶ್ವವಿಖ್ಯಾತವಾಗಿದೆ. ತಿರುಪತಿ ತಿಮ್ಮಪ್ಪನನ್ನು ವಿಶ್ವದ ಅತ್ಯಂತ ಶ್ರೀಮಂತ ದೇವರು ಎಂದು ಪರಿಗಣಿಸಲಾಗಿದೆ. ಈ ದೇವಸ್ಥಾನವು ಭಾರತದಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ. ಇದೀಗ ತಿರುಪತಿಗೆ ಹೋಗಲು ಯೋಜಿಸುತ್ತಿರುವವರಿಗೆ ಸಂತಸದ ಸುದ್ದಿ ಇದೆ. ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ತಿರುಪತಿಯಲ್ಲಿ ಕೌಂಟರ್‌ಗಳಲ್ಲಿ ಸರ್ವ ದರ್ಶನ ಟೋಕನ್ ನೀಡುವುದನ್ನು ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಸೆಪ್ಟೆಂಬರ್ 25 ರಿಂದ ಅವುಗಳನ್ನು ಆನ್‌ಲೈನ್‌ನಲ್ಲಿ ಲಭ್ಯಗೊಳಿಸಲಾಗುವುದು ಎನ್ನಲಾಗಿದೆ.

ಎಸ್‌ಎಸ್‌ಡಿ ಟೋಕನ್‌ಗಳನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 31 ರವರೆಗೆ ಲಭ್ಯವಿರುತ್ತದೆ. ಈ ಅವಧಿಯ ಆನ್‌ಲೈನ್ ಟೋಕನ್‌ಗಳನ್ನು ಸೆಪ್ಟೆಂಬರ್ 25 ರಂದು ಬೆಳಿಗ್ಗೆ 9 ಗಂಟೆಗೆ ಟಿಟಿಡಿಯ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಭಕ್ತರಿಗೆ 300 ರೂ.ಗಳ ವಿಶೇಷ ದರ್ಶನ ಟಿಕೆಟ್ (Special Darshan Tickets) ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 23 ರಿಂದ ತಿರುಪತಿಯಲ್ಲಿ ಭಕ್ತರಿಗೆ 300 ರೂ.ಗಳ ವಿಶೇಷ ದರ್ಶನ ಟಿಕೆಟ್ ಲಭ್ಯವಾಗಲಿದೆ.

ಪ್ರಸ್ತುತ, ತಿರುಪತಿಯ (Tirupati) ಟಿಟಿಡಿ ಕೌಂಟರ್‌ಗಳಲ್ಲಿ ಪ್ರತಿದಿನ 2,000 ಎಸ್‌ಎಸ್‌ಡಿ ಟೋಕನ್‌ಗಳನ್ನು ಆಫ್‌ಲೈನ್‌ನಲ್ಲಿ ನೀಡಲಾಗುತ್ತದೆ. ಟಿಟಿಡಿ ಜಿಲ್ಲೆಯಿಂದ ಬಂದ ಜನರಿಗೆ ಮಾತ್ರ ಸದ್ಯಕ್ಕೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಟಿಟಿಡಿ ಸ್ಪಷ್ಟಪಡಿಸಿದ್ದರೂ ಕೌಂಟರ್‌ಗಳು ಭಾರೀ ಜನಸಂದಣಿ ಕಂಡು ಬರುತ್ತಿತ್ತು. 

ಇದನ್ನೂ ಓದಿ- Vastu Tips: ಮನೆಯಲ್ಲಿ ಈ ಸ್ಥಳದಲ್ಲಿ ಪುಸ್ತಕಗಳನ್ನು ಇರಿಸಿದರೆ, ಜ್ಞಾನ, ತಿಳುವಳಿಕೆ ಹೆಚ್ಚಾಗುತ್ತೆ

ತಮಿಳು 'ಪುರಟಾಸಿ' ಮಾಸದ ಆಗಮವು  ಟಿಟಿಡಿಯ ಕಷ್ಟಗಳನ್ನು ಜಟಿಲಗೊಳಿಸಿತು, ಏಕೆಂದರೆ ತಮಿಳುನಾಡಿನ ಭಕ್ತರು ಈ ಮಾಸವನ್ನು ಬಹಳ ಶುಭ ಎಂದು ಪರಿಗಣಿಸುತ್ತಾರೆ. ಹಾಗಾಗಿ ಈ ಶುಭ ಮಾಸಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಆರಂಭಿಸಿದರು.

ಈ ಹಿನ್ನೆಲೆಯಲ್ಲಿ, ಎಸ್‌ಎಸ್‌ಡಿ ಟೋಕನ್‌ಗಳನ್ನು 8,000 ಕ್ಕೆ ಹೆಚ್ಚಿಸಲು ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲು ಟಿಟಿಡಿ ನಿರ್ಧರಿಸಿತು. ಜೊತೆಗೆ ಸೆಪ್ಟೆಂಬರ್ 26 ರಿಂದ ತಿರುಪತಿಯ ತನ್ನ ಕೌಂಟರ್‌ಗಳಲ್ಲಿ ಆಫ್‌ಲೈನ್‌ನಲ್ಲಿ ಟೋಕನ್‌ಗಳ ವಿತರಣೆಯನ್ನು ನಿಲ್ಲಿಸಲು ನಿರ್ಧರಿಸಿದೆ.

ಕೋವಿಡ್ -19 (Covid-19) ಸಮಯದಲ್ಲಿ ಭಕ್ತರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಆಫ್‌ಲೈನ್ ಟೋಕನ್ ನೀಡುವುದನ್ನು ನಿಲ್ಲಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ಹೇಳಿದರು.

ಇದನ್ನೂ ಓದಿ- Gurudosh Parihar: ಜಾತಕದಲ್ಲಿ ಗುರು ದೋಷವಿದ್ದರೆ ಈ ರೀತಿ ಪರಿಹರಿಸಿಕೊಳ್ಳಿ

ತಿರುಪತಿಗೆ ತೆರಳುವಾಗ ಇವುಗಳ ಬಗ್ಗೆ ಗಮನವಿರಲಿ: 
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರು ಕರೋನಾ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿರುವ ಲಸಿಕಾ ಪ್ರಮಾಣ ಪತ್ರ ಅಥವಾ ಮೂರು ದಿನಗಳ ಹಿಂದೆ ಪಡೆದಿರುವ ಕರೋನಾ ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಜೊತೆಗೆ ಕೊಂಡೊಯ್ಯುವಂತೆ ಅವರು ಭಕ್ತರಿಗೆ ಮನವಿ ಮಾಡಿದ್ದಾರೆ.

ಐದು ತಿಂಗಳ ನಂತರ, ಭಕ್ತರಿಗೆ ಸರ್ವ ದರ್ಶನ ಟೋಕನ್ ನೀಡುವ ಪ್ರಕ್ರಿಯೆಯನ್ನು ಆರಂಭಿಸಲು ಟಿಟಿಡಿ ನಿರ್ಧರಿಸಿತು. ಈ ವರ್ಷದ ಏಪ್ರಿಲ್-ಮೇನಲ್ಲಿ ಎರಡನೇ ತರಂಗದಲ್ಲಿ ಕೊರೊನಾವೈರಸ್‌ನ ಧನಾತ್ಮಕ ಪ್ರಕರಣಗಳ ಏರಿಕೆಯ ನಂತರ ಉಚಿತ ದರ್ಶನ ಮತ್ತು ಪಾದಚಾರಿ ದರ್ಶನ ದೇವಾಲಯವನ್ನು ಸ್ಥಗಿತಗೊಳಿಸಿದ ಶ್ರೀಮಂತ ಹಿಂದೂ ದೇವಾಲಯಗಳಲ್ಲಿ ಟಿಡಿಡಿ ಕೂಡ ಒಂದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News