Rakhi Sawant Arrest: ಕಳೆದ ಕೆಲವು ದಿನಗಳಿಂದ, ನಟಿ ರಾಖಿ ಸಾವಂತ್ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮರಾಠಿಯಿಂದ ಹೊರಬಂದ ನಂತರ, ಕ್ಯಾನ್ಸರ್ ರೋಗಿಯಾದ ತನ್ನ ತಾಯಿಗೆ ಈಗ ಬ್ರೈನ್ ಟ್ಯೂಮರ್ ಬಂದಿದೆ ಎಂದು ನಟಿ ಹೇಳಿದ್ದರು. ಇದಾದ ಕೆಲ ದಿನಗಳ ನಂತರ, ನಟಿಯ ಗೆಳೆಯ ಆದಿಲ್ ದುರಾನಿ ಜೊತೆಗಿನ ಮದುವೆಯ ಫೋಟೋಗಳು ವೈರಲ್ ಆಗಿದ್ದವು. ನಂತರ ಕೆಲವು ದಿನಗಳ ಕಾಲ ಆದಿಲ್ ಮದುವೆಯಾಗಲು ನಿರಾಕರಿಸಿದ ಎಂದು ಸುದ್ದಿ ವೈರಲ್ ಆಯಿತು. ಹೀಗೆ ಒಂದಿಲ್ಲೊಂದು ಚರ್ಚೆಯಲ್ಲಿರುವ ರಾಖಿ ಇದೀಗ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ


COMMERCIAL BREAK
SCROLL TO CONTINUE READING

ಇದನ್ನೂ ಓದಿ: Urfi Javed : ಖ್ಯಾತ ಗೀತರಚನೆಕಾರ ʼಜಾವೇದ್‌ ಅಖ್ತರ್‌ ಉರ್ಫಿ ಅಜ್ಜʼ... ನೆಟ್ಟಿಗರು ಶಾಕ್‌..!


ರಾಖಿ ಸಾವಂತ್ ಬಂಧನವಾಗಿಲ್ಲ:


ಮದುವೆ ಗರ್ಭಪಾತದ ಸುದ್ದಿಗಳ ನಡುವೆ, ರಾಖಿ ಸಾವಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ- ಸುದ್ದಿಗಳು ಮುನ್ನೆಲೆಗೆ ಬರುತ್ತಿದ್ದವು. ಸದ್ಯಕ್ಕೆ ರಾಖಿಯನ್ನು ಬಂಧಿಸಲಾಗಿಲ್ಲ. ಆದರೆ ನಟಿ ಶೆರ್ಲಿನ್ ಚೋಪ್ರಾ ಅವರ ದೂರಿನ ಮೇರೆಗೆ ಪೊಲೀಸರು ರಾಖಿಯನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.


 


Poonam Pandey : ಪೂನಂ ಅವತಾರ ನೋಡಿ ʼಚಡ್ಡಿ ಹಾಕಿದಿ ಏನಮ್ಮಾʼ ಎಂದ ನೆಟ್ಟಿಗರು..! ವಿಡಿಯೋ ನೋಡಿ


ನಟಿ ಶೆರ್ಲಿನ್ ಚೋಪ್ರಾ ದೂರು:


ರಾಖಿ ಸಾವಂತ್ ವಿರುದ್ಧ ಎಫ್‌ಐಆರ್ ದಾಖಲಾಗಿರುವುದರಿಂದ ಅಂಬೋಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಈ ಟ್ವೀಟ್‌ನಲ್ಲಿ ಬರೆದಿದ್ದಾರೆ. ರಾಖಿ ಸಾವಂತ್ ಅವರ ಕೋರಿಕೆಯನ್ನು ಮುಂಬೈ ಸೆಷನ್ಸ್ ಕೋರ್ಟ್ ನಿನ್ನೆ ತಿರಸ್ಕರಿಸಿದೆ ಎಂದು ಶೆರ್ಲಿನ್ ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ. ಜೀ ನ್ಯೂಸ್‌ ಮೂಲಗಳ ಪ್ರಕಾರ, ರಾಖಿಯನ್ನು ಸದ್ಯಕ್ಕೆ ಬಂಧಿಸಲಾಗಿಲ್ಲ. ಬದಲಾಗಿ ಆಕೆಯನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.


ರಾಖಿ ತನ್ನ ಆಕ್ಷೇಪಾರ್ಹ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ರಾಖಿ ಸಾವಂತ್ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ರಾಖಿಯನ್ನು ವಿಚಾರಣೆಗೆ ಕರೆದಿದ್ದು, ಅಂಧೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದುಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...