ನವದೆಹಲಿ: ಯೋಗ ಗುರು ರಾಮದೇವ್ ಅವರ ವತಿಯಿಂದ ಕೊರೊನಾ ವೈರಸ್ ಚಿಕಿತ್ಸೆಗಾಗಿ ಕೊರೋನಿಲ್ ಔಷಧಿ ಬಿಡುಗಡೆಗ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅಸ್ಸಿಸ್ತೆಂತ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿದೆ. ಈ ನಡುವೆ ತಮ್ಮ ಔಷಧಿಗೆ ಸಂಬಂಧಿಸಿಂತೆ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿರುವ ಸ್ವಾಮಿ ರಾಮದೇವ್, "ಕೊರೋನಿಲ್ ಔಷಧಿಯ ಕ್ಲಿನಿಕಲ್ ಟ್ರಯಲ್ ಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ನಾವು ಆಯುಶ್ ಸಚಿವಾಲಯಕ್ಕೆ ಕಳುಹಿಸಿ, ಸಚಿವಾಲಯದ ಅನುಮೋದನೆ ಕೂಡ ಪಡೆದಿದ್ದೇವೆ. ನಾವು ಎಲ್ಲ ಪ್ಯಾರಾಮೀಟರ್ ಗಳನ್ನು ಅನುಸರಿಸಿದ್ದೇವೆ. ನಿಮಗೆ ಬೇಕಾದರೆ FIR ದಾಖಲಿಸಿ, ದೇಶದ್ರೋಹಿ ಎಂದು ಕರೆಯಿರಿ ಅಥವಾ ಉಗ್ರವಾದಿ ಎಂದೇ ಕರೆಯಿರಿ. ಇದರಿಂದ ನಮ್ಮ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಭಾರತದಲ್ಲಿ ಯೋಗ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವುದು ಅಪರಾಧ ಎಂದು ಅವರು ಹೇಳುತ್ತಾರೆ. ನನ್ನ ವಿರುದ್ಧ FIR ದಾಖಲಿಸಲಾಗಿದೆ. ಔಷಧಿ ತಯಾರಿಸಿ ನಾವು ಅಪರಾಧ ಎಸಗಿದ್ದೆವೆಯೇ? ನಿಮಗೆ ಸತ್ಕರಿಸುವ ಮನೋಭಾವ ಇಲ್ಲ ಎಂದಾದಲ್ಲಿ ತಿರಸ್ಕಾರವನ್ನಾದರೂ ಬಿಡಿ. ಕೇವಲ ಕೋಟು-ಟೈ ಧರಿಸಿದವರೇ ಸಂಶೋಧನೆ ಮಾಡಬೇಕಾ? ಧೋತಿ ಧರಿಸಿದವರು ಮಾಡಿದರೆ ತಪ್ಪಾ?" ಎಂದು ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಸದ್ಯ ನಾವು ಕೇವಲ ಕೊರೋನಿಲ್ ಗೆ ಸಂಬಂಧಿಸಿದ ಕ್ಲಿನಿಕಲ್ ಟ್ರಯಲ್ ದತ್ತಾಂಶವನ್ನು ದೇಶದ ಜನತೆಯ ಮುಂದೆ ಇರಿಸಿದ್ದು, ಬಿರುಗಾಲಿಯೇ ಸೃಷ್ಟಿಯಾಗಿದೆ. ಡ್ರಗ್ ಮಾಫಿಯಾ, ಬಹುರಾಷ್ಟ್ರೀಯ ಕಂಪನಿ ಮಾಫಿಯಾ, ಭಾರತೀಯ ಹಾಗೂ ಭಾರತೀಯತೆಯನ್ನು ವಿರೋಧಿಸುವ ಶಕ್ತಿಗಳ ಬೇರುಗಳು ಅಲ್ಲಾಡಲು ಆರಂಭಿಸಿವೆ.


"ನಮ್ಮಿಬ್ಬರ ಮೇಲೆ ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ. ಈ ಮಾನಸಿಕತೆ ನಮ್ಮನ್ನು ಎಲ್ಲಿಗೆ ಕೊಂಡೊಯ್ಯಲಿದೆ ಎಂಬುದು ಗೊತ್ತಿಲ್ಲ. ಕಳೆದ ಸುಮಾರು 35 ವರ್ಷಗಳಿಂದ ನಾವಿಬ್ಬರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಾವಿಬ್ಬರು ಸಾಮಾನ್ಯ ಕುಟುಂಬದಿಂದ ಬಂದವರಾಗಿದ್ದೇವೆ. ಕಳೆದ ಸುಮಾರು ಮೂರು ದಶಕಗಳಿಂದ ಕೋಟ್ಯಂತರ ಜನರು ನಮ್ಮಿಂದ ನಿರೋಗಿಯಾಗಿದ್ದು, ನಾವು ಅವರಿಗೆ ಯೋಗ ಹೇಳಿಕೊತ್ತಿದ್ದೇವೆ. ಆಯುಶ್ ಸಚಿವಾಲಯ ಕೂಡ ಕ್ಲಿನಿಕಲ್ ಟ್ರಯಲ್ ಮಾಡಲಾಗಿದೆ ಎಂದು ಹೇಳುತ್ತಿದೆ. ಸೊಂಕಿತರು ಕೇವಲ ಮೂರೇ ದಿನಗಳಲ್ಲಿ ಗುಣಮುಖರಾಗಿದ್ದಾರೆ. ನಮಗೆ ಸಿಕ್ಕ ಅನುಮತಿಯನ್ನು ಕೂಡ ನಾವು ಸಾದರುಪಡಿಸಿದ್ದೇವೆ. ಎಲ್ಲ ಅನುಮತಿಗಳನ್ನು ಪಡೆದುಕೊಂಡೆ ಕೊರೊನಾ ಮೇಲೆ ಟ್ರಯಲ್ ನಡೆಸಿದ್ದೇವೆ" ಎಂದು ಸ್ವಾಮಿ ರಾಮದೇವ್ ಹೇಳಿದ್ದಾರೆ.


ಮುಂದುವರೆದು ಮಾತನಾಡಿರುವ ರಾಮದೇವ್, ಮಿನಿಸ್ಟ್ರಿ ಆಫ್ ಆಯುಶ್ ಕೂಡ ಕೊವಿಡ್ ಮ್ಯಾನೇಜ್ಮೆಂಟ್ ಗಾಗಿ ಪತಂಜಲಿ ನಡೆಸಿರುವ ಕಾರ್ಯವನ್ನು ನಾವು ಸರಿ ಎಂದು ಭಾವಿಸುತ್ತೇವೆ ಎಂದಿದೆ. ಇದರಿಂದ ಕೆಲ ಜನರಿಗೆ ಖುಷಿಯಾಗಬಹುದು. ಮ್ಯಾನೆಜ್ಮೆಂಟ್ ಹಾಗೂ ಟ್ರೀಟ್ಮೆಂಟ್ ಈ ಎರಡು ಶಬ್ದಗಳ ಮಾಯಾಜಾಲದಲ್ಲಿ ನಾವು ಆಯುರ್ವೇದದ ವಾಸ್ತವಿಕತೆಯನ್ನು ತುಳಿಯಲು ಬಿಡುವುದಿಲ್ಲ" ಎಂದಿದ್ದಾರೆ.


ಪತಂಜಲಿ ವತಿಯಿಂದ ಕೊರೋನಿಲ್ ಔಷಧಿಯ ಬಿಡುಗಡೆಯ ಬಳಿಕ ಹೈಕೋರ್ಟ್ ನಲ್ಲಿ ವಕೀಲರಾಗಿರುವ ಮಣಿ ಕುಮಾರ್ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ದಾಖಲಿಸಿದ್ದಾರೆ. ಅರ್ಜಿಯಲ್ಲಿ ಪತಂಜಲಿ ಯೊಗಪೀಠದ ಅಂಗ ಸಂಸ್ಥೆಯಾಗಿರುವ ದಿವ್ಯ ಫಾರ್ಮಸಿ ಕಂಪನಿ ಜಾಗತಿಕ ಮಯಾಮಾರಿ ಕೊರೊನಾದಿಂದ ಮುಕ್ತಿ ಪಡೆಯಲು ಕೊರೋನಿಲ್ ಔಷಧಿ ಅಭಿವೃದ್ಧಿಪಡಿಸಿರುವುದಾಗಿ ಹೇಳಿಕೊಂಡಿದೆ. ರಾಮದೇವ್ ಕಳೆದ ಮಂಗಳವಾರ ತಮ್ಮ ಸಹವರ್ತಿ ಆಚಾರ್ಯ ಬಾಲಕೃಷ್ಣ ಅವರ ಕೋಟೆ ಸೇರಿ ಹರಿದ್ವಾರದಲ್ಲಿ ಈ ಔಷಧಿಯನ್ನು ಬಿಡುಗಡೆಗೊಳಿಸಿದ್ದಾರೆ. ಇದಕ್ಕಾಗಿ ರಾಮದೇವ್ ಅವರು ಎಲ್ಲಾ ನಿಯಮಗಳನ್ನು ಅನುಸರಿಸಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.