26 Fingers baby: ರಾಜಸ್ಥಾನದ ದೀಗ್ ಜಿಲ್ಲೆಯ ಕಾಮಾ ಪಟ್ಟಣದಲ್ಲಿ 26 ಬೆರಳುಗಳಿರುವ ಅಪರೂಪದ ಮಗು ಜನಿಸಿದೆ. ಈ ಮಗುವನ್ನು ಕಂಡ ಕುಟುಂಬಸ್ಥರು, ದೇವಿಯ ಅವತಾರವೆಂದು ನಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಮಾಹಿತಿಯ ಪ್ರಕಾರ, ಈ ಕಂದಮ್ಮನ ಎರಡೂ ಕೈಗಳಲ್ಲಿ ತಲಾ ಏಲು ಬೆರಳುಗಳು ಮತ್ತು ಎರಡೂ ಕಾಲುಗಳಲ್ಲಿ ತಲಾ 6 ಬೆರಳುಗಳಿವೆ. ಈ ಸಂಬಂಧ ಹೇಳಿಕೆ ನೀಡಿರುವ ವೈದ್ಯರು, ಇದನ್ನು ಆನುವಂಶಿಕ ಘಟನೆ ಎಂದು ಪರಿಗಣಿಸಿದ್ದಾರೆ. ಇನ್ನು 26 ಬೆರಳುಗಳನ್ನು ಹೊಂದುವುದರಿಂದ ಯಾವುದೇ ಅಪಾಯ ಇಲ್ಲ ಎಂದಿದ್ದಾರೆ.


ಇದನ್ನೂ ಓದಿ: ಮದುವೆಯಾದ ಏಳೇ ತಿಂಗಳಿಗೆ ಮತ್ತೆ ಮದುವೆಯಾದ ಸ್ಟಾರ್ ಕ್ರಿಕೆಟಿಗ! ಫೋಟೋ ವೈರಲ್


26 ಬೆರಳುಗಳೊಂದಿಗೆ ಹೆಣ್ಣು ಮಗು ಜನಿಸಿರುವುದು ಒಂದೆಡೆ ಭಾರೀ ಚರ್ಚೆಗೆ ಕಾರಣವಾಗಿದ್ದರೆ, ಮತ್ತೊಂದೆಡೆ ಆ ಕುಟುಂಬದ ಸದಸ್ಯರು ಧೋಲಗಢ ದೇವಿಯ ಅವತಾರವೆಂದು ಸಂಭ್ರಮಿಸುತ್ತಿದ್ದಾರೆ.


ದೀಗ್ ಜಿಲ್ಲೆಯ ಕಮಾನ್ ಪಟ್ಟಣದ ಗೋಪಿನಾಥ್ ಪ್ರದೇಶದಲ್ಲಿ ವಾಸಿಸುತ್ತಿರುವ ಗೋಪಾಲ್ ಭಟ್ಟಾಚಾರ್ಯ ಅವರ ಪತ್ನಿ 25 ವರ್ಷದ ಸರ್ಜು ದೇವಿ 8 ತಿಂಗಳ ಗರ್ಭಿಣಿಯಾಗಿದ್ದರು. ಇತ್ತೀಚೆಗಷ್ಟೇ ಸರ್ಜು ಅವರನ್ನು ಕಮಾನ್‌’ನ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆಂದು ಕರೆದುಕೊಂಡು ಹೋಗಲಾಗಿತ್ತು. ಆ ಸಂದರ್ಭದಲ್ಲಿ ವೈದ್ಯರು ಸರ್ಜು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಸರ್ಜು ಅವರ ಪತಿ ಗೋಪಾಲ್ ಭಟ್ಟಾಚಾರ್ಯ ಸಿಆರ್‌’ಪಿಎಫ್‌’ನಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದು, ಪತ್ನಿಯ ಹೆರಿಗೆಗಾಗಿ ರಜೆಯ ಮೇಲೆ ಮನೆಗೆ ಬಂದಿದ್ದರು.


ಹೆರಿಗೆ ವೇಳೆ ಸರ್ಜು ದೇವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ನವಜಾತ ಹೆಣ್ಣು ಮಗುವಿನ ಕೈ ಮತ್ತು ಕಾಲುಗಳಲ್ಲಿ 26 ಬೆರಳುಗಳಿರುವುದನ್ನು ಕಂಡು ವೈದ್ಯರೂ ಆಶ್ಚರ್ಯಚಕಿತರಾಗಿದ್ದಾರೆ.


ಇನ್ನು ಈ ಕಂದಮ್ಮನ ಜನನದ ಬಗ್ಗೆ ಮಾತನಾಡಿದ ಸರ್ಜು ಅವರ ಸಹೋದರ ದೀಪಕ್, “ನನ್ನ ಸಹೋದರಿ ಒಟ್ಟು 26 ಬೆರಳುಗಳನ್ನು ಹೊಂದಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವನ್ನು ಧೋಲಗಢ ದೇವಿಯ ಅವತಾರವೆಂದು ಪರಿಗಣಿಸುತ್ತಿದ್ದೇವೆ. ನಮಗೆ ತುಂಬಾ ಸಂತೋಷವಾಗುತ್ತಿದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: 11 ಪ್ರದಕ್ಷಿಣೆ ಹಾಕಿದರೆ ಸಾಕು ಅಮೇರಿಕಾ-ಕೆನಡಾ ವೀಸಾ ನೀಡುತ್ತೆ ಈ ದೇವಸ್ಥಾನ!


ಈ ಬಗ್ಗೆ ವೈದ್ಯರು ಹೇಳಿದ್ದು ಹೀಗೆ..


“ಇಂದು ರಾತ್ರಿ ಮಹಿಳೆಯೊಬ್ಬರಿಗೆ ಹೆರಿಗೆಯಾಗಿದೆ. ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ನವಜಾತ ಹೆಣ್ಣು ಮಗುವಿಗೆ 26 ಬೆರಳುಗಳಿವೆ. ಇದು ಅತ್ಯಂತ ಅಪರೂಪದ ಪ್ರಕರಣವಾಗಿದೆ. 26 ಬೆರಳುಗಳನ್ನು ಹೊಂದಿರುವುದು ಯಾವುದೇ ರೀತಿಯ ಅಪಾಯವಲ್ಲ.  ಆದರೆ ಆನುವಂಶಿಕ ಅಸಂಗತತೆಯಿಂದಾಗಿ ಇದೆಲ್ಲವೂ ಸಂಭವಿಸುತ್ತದೆ. ನವಜಾತ ಹೆಣ್ಣು ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ” ಎಂದು ಕಮಾನ್ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಬಿ.ಎಸ್ ಸೋನಿ ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.