ಮದುವೆಯಾದ ಏಳೇ ತಿಂಗಳಿಗೆ ಮತ್ತೆ ಮದುವೆಯಾದ ಸ್ಟಾರ್ ಕ್ರಿಕೆಟಿಗ! ಫೋಟೋ ವೈರಲ್

shaheen shah afridi Marriage: ಶಾಹೀನ್ ಶಾ ಆಫ್ರಿದಿ ಈ ವರ್ಷದ ಫೆಬ್ರವರಿಯಲ್ಲಿ ಅನ್ಶಾ ಅವರನ್ನು ವಿವಾಹವಾಗಿದ್ದರು. ಆದರೆ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರ ಅನೇಕ ಸಂಬಂಧಿಕರು ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.

Written by - Bhavishya Shetty | Last Updated : Sep 20, 2023, 12:36 PM IST
    • ಶಾಹೀನ್ ಅಫ್ರಿದಿ ತಮ್ಮ ಪತ್ನಿ ಅನ್ಶಾ ಅಫ್ರಿದಿಯನ್ನು ಮತ್ತೊಮ್ಮೆ ವಿವಾಹವಾಗಿದ್ದಾರೆ
    • ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ.
    • ಇವರ ವಿವಾಹ ಕಾರ್ಯಕ್ರಮದಲ್ಲಿ ಪಾಕಿಸ್ತಾನ ತಂಡದ ಹಲವು ಆಟಗಾರರು ಪಾಲ್ಗೊಂಡಿದ್ದರು.
ಮದುವೆಯಾದ ಏಳೇ ತಿಂಗಳಿಗೆ ಮತ್ತೆ ಮದುವೆಯಾದ ಸ್ಟಾರ್ ಕ್ರಿಕೆಟಿಗ! ಫೋಟೋ ವೈರಲ್ title=
shaheen shah afridi Marriage

shaheen shah afridi Marriage: 2023 ರ ODI ವಿಶ್ವಕಪ್‌’ಗೆ ಮೊದಲು, ಸ್ಟಾರ್ ವೇಗದ ಬೌಲರ್ ತಾನು ಮದುವೆಯಾದ ಏಳೇ ತಿಂಗಳಿಗೆ ಮತ್ತೆ ಎರಡನೇ ಬಾರಿ ಮದುವೆಯಾಗಿದ್ದಾನೆ. ಈ ಆಟಗಾರ ಬೇರೆ ಯಾರೂ ಅಲ್ಲ. ಪಾಕಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ.

ಶಾಹೀನ್ ಅಫ್ರಿದಿ ತಮ್ಮ ಪತ್ನಿ ಅನ್ಶಾ ಅಫ್ರಿದಿಯನ್ನು ಮತ್ತೊಮ್ಮೆ ವಿವಾಹವಾಗಿದ್ದಾರೆ. ಇವರ ವಿವಾಹ ಕಾರ್ಯಕ್ರಮದಲ್ಲಿ ಪಾಕಿಸ್ತಾನ ತಂಡದ ಹಲವು ಆಟಗಾರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಬಿಡದೆ ಸುರಿಯಲಿದೆ ಭಾರೀ ಮಳೆ

ಶಾಹೀನ್ ಶಾ ಆಫ್ರಿದಿ ಈ ವರ್ಷದ ಫೆಬ್ರವರಿಯಲ್ಲಿ ಅನ್ಶಾ ಅವರನ್ನು ವಿವಾಹವಾಗಿದ್ದರು. ಆದರೆ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರ ಅನೇಕ ಸಂಬಂಧಿಕರು ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ಶಾಹೀನ್ ಮತ್ತೆ ಮದುವೆಯಾಗಲು ನಿರ್ಧರಿಸಿದ್ದಾರೆ. ಅನ್ಶಾ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ಪುತ್ರಿ.

ಶಾಹೀನ್ ಶಾ ಆಫ್ರಿದಿ ಮತ್ತು ಅನ್ಶಾ ಈ ಮೊದಲು ಫೆಬ್ರವರಿ 3 ರಂದು ಮೊದಲ ಬಾರಿಗೆ ಮದುವೆಯಾಗಿದ್ದರು. ಕಳೆದ ವರ್ಷದಿಂದ ಇವರ ಮದುವೆಯ ಸುದ್ದಿ ಭಾರೀ ಹಬ್ಬಿತ್ತು.

ಇನ್ನು ಪುತ್ರಿಯ ವಿವಾಹ ಸಂಬಂಧ ಶಾಹಿದ್ ಅಫ್ರಿದಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಹಂಚಿಕೊಂಡಿದ್ದು ಭಾವನಾತ್ಮಕ ಸಂದೇಶವನ್ನೂ ಸಹ ಬರೆದಿದ್ದಾರೆ.  

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ‘X’ ನಲ್ಲಿ ಈ ವಿವಾಹ ಸಮಾರಂಭದ ಫೋಟೋವನ್ನು ಹಂಚಿಕೊಂಡಿದ್ದಾರೆ. ಶಾಹೀನ್ ಶಾ ಅಫ್ರಿದಿ ಅವರಿಗೆ ಶುಭಕೋರಿದ್ದಾರೆ.  

ಇದನ್ನೂ ಓದಿ: ಈ ಬಾರಿ ಸರ್ಕಾರಿ ಉದ್ಯೋಗಿಗಳಿಗೆ ಡಬಲ್ ಧಮಾಕ ! ವೇತನದಲ್ಲಿ ಇಷ್ಟು ಹೆಚ್ಚಳ ಫಿಕ್ಸ್ 

ಶಾಹೀನ್ ಅಫ್ರಿದಿ ಅವರ ಎರಡನೇ ವಿವಾಹದ ದಿನಾಂಕವನ್ನು ಏಷ್ಯಾ ಕಪ್‌’ಗೆ ಮುಂಚೆಯೇ ಘೋಷಿಸಲಾಗಿತ್ತು.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News