Viral Video: ತನ್ನ ಮರಿಯ ಪ್ರಾಣ ರಕ್ಷಣೆಗಾಗಿ ಹಾವಿನ ಜೊತೆ ಸೆಣೆಸಾಡಿ ಗೆದ್ದ ಇಲಿ
ಮಕ್ಕಳ ವಿಚಾರ ಬಂದಾಗ ಯಾರೂ ಊಹಿಸಲೂ ಸಾಧ್ಯವಾಗದ ಕೆಲಸಗಳನ್ನು ಮಾಡಿ ಬಿಡುತ್ತಾಳೆ ತಾಯಿ. ತಾಯಿ ತನ್ನ ಮಗುವಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾಳೆ ಎಂಬುದಕ್ಕೆ ಈ ವಿಡಿಯೋ ಒಂದು ಉತ್ತಮ ಉದಾಹರಣೆಯಾಗಿದೆ.
ನವದೆಹಲಿ : ದೇವರು ಎಲ್ಲ ಕಡೆ ಇರಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಈ ಭೂಮಿಯ ಮೇಲೆ ತಾಯಿಯನ್ನು ಸೃಷ್ಟಿ ಮಾಡಿದನಂತೆ. ಹೌದು ಅಮ್ಮ ಎಂದರೆ ಅದು ಯಾವ ದೇವರಿಗೂ ಕಮ್ಮಿಯಿಲ್ಲ. ತಾಯಿ ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಡುತ್ತಾಳೆ. ತನ್ನ ಮಕ್ಕಳ ಬಳಿ ಯಾವ ಅಪಾಯವೂ ಸುಳಿಯದಂತೆ ನೋಡಿಕೊಳ್ಳುತ್ತಾಳೆ. ಯಾವುದೇ ಆಪತ್ತು ಮಕ್ಕಳ ಬಳಿ ಬರುತ್ತಿದೆ ಎಂದು ಗೊತ್ತಾದಾಗ ತನ್ನೆಲ್ಲಾ ಶಕ್ತಿಯನ್ನು ಹಾಕಿ ತನ್ನ ಮಗುವಿನ ರಕ್ಷಣೆಗೆ ನಿಲ್ಲುತ್ತಾಳೆ ತಾಯಿ. ಅದು ಮನುಷ್ಯರಾದರೂ ಅಷ್ಟೇ, ಪ್ರಾಣಿಗಳಾದರೂ ಅಷ್ಟೇ.
ಮಕ್ಕಳ ವಿಚಾರ ಬಂದಾಗ ಯಾರೂ ಊಹಿಸಲೂ ಸಾಧ್ಯವಾಗದ ಕೆಲಸಗಳನ್ನು ಮಾಡಿ ಬಿಡುತ್ತಾಳೆ ತಾಯಿ. ತಾಯಿ ತನ್ನ ಮಗುವಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾಳೆ ಎಂಬುದಕ್ಕೆ ಈ ವಿಡಿಯೋ (Viral video) ಒಂದು ಉತ್ತಮ ಉದಾಹರಣೆಯಾಗಿದೆ. ಅದರಲ್ಲಿ ಇಲಿಯೊಂದು ತನ್ನ ಮರಿಯನ್ನು ಉಳಿಸಲು ದೊಡ್ಡ ವಿಷಪೂರಿತ ಹಾವಿನೊಂದಿಗೆ (Snake video) ಹೋರಾಡುತ್ತದೆ.
ಇದನ್ನೂ ಓದಿ : Shocking Video:ಆಮ್ಲೆಟ್ ಮಾಡಲು ಮೊಟ್ಟೆ ಒಡೆದ ವ್ಯಾಪಾರಿ.. ಹೊರಬಂತು ಮರಿ!
ಸರ್ಪದ ಜೊತೆ ಇಲಿಯ ಕಾದಾಟ :
ರಸ್ತೆ ಬದಿಯಲ್ಲಿ ಹಾವೊಂದು ಇಲಿ ಮರಿಯನ್ನು(Snake and rat video) ಬಾಯಿಯಲ್ಲಿ ಹಿಡಿದುಕೊಂಡು ವೇಗವಾಗಿ ಚಲಿಸುತ್ತಿರುವುದನ್ನು ವಿಡಿಯೋದಲ್ಲಿ (Viral video) ಕಾಣಬಹುದು. ತನ್ನ ಮರಿಯನ್ನು ಆಹಾರವಾಗಿಸಲು ಸರ್ಪ ಕೊಂಡೊಯ್ಯುತ್ತಿದೆ ಎಂದು ತಾಯಿ ಇಲಿಗೆ ತಿಳಿದಿದ್ದೇ ತಡ ಒಂದು ಕ್ಷಣವನ್ನು ಆ ತಾಯಿ ವ್ಯರ್ಥ ಮಾಡಲಿಲ್ಲ. ಚಂಗನೆ ಹಾರುತ್ತಾ ಬಂದು ಸರಸರನೇ ಹರಿದಾಡುತ್ತಿದ್ದ ಸರ್ಪದ ಮೇಲೆರಗಿದೆ. ಸರ್ಪ (Snake video) ತನ್ನ ಮರಿಯನ್ನು ಬಿಡುವವರೆಗೂ ನಿರಂತರವಾಗಿ ಇಲಿ ಕಾದಾಡಿದೆ.
Watch:ಪುಟ್ಟ ಮಗುವಿನಂತೆ ಹಾವಿಗೆ ಸ್ನಾನ ಮಾಡಿಸುವ ವ್ಯಕ್ತಿ, ವಿಡಿಯೋ ವೈರಲ್
ತಾಯ್ತನಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ:
ತನ್ನ ಮಗುವಿಗಾಗಿ ತಾಯಿ ಯಾವುದೇ ಅಪಾಯಕಾರಿ ಶತ್ರುವನ್ನು ಎದುರಿಸಬಹುದು ಎಂಬುದಕ್ಕೆ ಈ ವೀಡಿಯೊ ಸಾಕ್ಷಿ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇದುವರೆಗೆ 24 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಐಎಫ್‌ಎಸ್ ಅಧಿಕಾರಿ ಸುರೇಂದ್ರ ಮೆಹ್ರಾ ಅವರು ತಮ್ಮ ಟ್ವಿಟ್ಟರ್ ಪುಟದಲ್ಲಿ ಈ ವಿಡಿಯೋ ವನ್ನು ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.