Shocking Video:ಆಮ್ಲೆಟ್ ಮಾಡಲು ಮೊಟ್ಟೆ ಒಡೆದ ವ್ಯಾಪಾರಿ.. ಹೊರಬಂತು ಮರಿ!

Chicken Viral Video: ಮೊಟ್ಟೆ ಒಡೆದಾಗ ಮರಿಗಳು ಹೊರಬರಬಹುದು ಎಂದು ನೀವು ಭಾವಿಸುತ್ತೀರಾ? ಆದರೆ ಈ ವಿಡಿಯೋದಲ್ಲಿ ಹಾಗೇ ಆಗಿದೆ.

Edited by - Zee Kannada News Desk | Last Updated : Jan 2, 2022, 11:49 AM IST
  • ಆಮ್ಲೆಟ್ ಮಾಡಲು ಮೊಟ್ಟೆ ಒಡೆದ ವ್ಯಾಪಾರಿ
  • ಮೊಟ್ಟೆಯಿಂದ ಹೊರಬಂದ ಮರಿ
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯ್ತು ವಿಡಿಯೋ
Shocking Video:ಆಮ್ಲೆಟ್ ಮಾಡಲು ಮೊಟ್ಟೆ ಒಡೆದ ವ್ಯಾಪಾರಿ.. ಹೊರಬಂತು ಮರಿ!   title=
ಮೊಟ್ಟೆಯಿಂದ ಹೊರಬಂದ ಮರಿ

ಸಾಮಾಜಿಕ ಮಾಧ್ಯಮದಲ್ಲಿ ನಾವು ಅನೇಕ ಆಘಾತಕಾರಿ ವಿಡಿಯೋಗಳನ್ನು ನೋಡುತ್ತೇವೆ. ಈ ಕೆಲವು ವಿಡಿಯೋಗಳು ನೋಡಿದ ನಂತರ ನಮ್ಮ ಕಣ್ಣನ್ನೇ ನಂಬದ ಹಾಗೆ ಇರುತ್ತವೆ. ಇಂತಹದೊಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral video) ಆಗುತ್ತಿದೆ. 

ಮೊಟ್ಟೆಯಿಂದ ಹೊರಬಂದ ಮರಿ:

ಅಂಗಡಿಯೊಂದರ ವಿಡಿಯೋ ವೈರಲ್ ಆಗಿದೆ. ಅಂಗಡಿಯವನು ದೊಡ್ಡ ಬಾಣಲೆಯ ಮೇಲೆ ಮೊಟ್ಟೆ ಒಡೆದು ಆಮ್ಲೆಟ್ ಮಾಡಲು ಹೊರಟಿರುವುದನ್ನು ಈ ವಿಡಿಯೋದಲ್ಲಿ (Chicken Viral Video) ಕಾಣಬಹುದು. ಈ ವೇಳೆ ಮೊಟ್ಟೆ ಒಡೆದ ನಂತರ ಏನಾಗುತ್ತದೆ ಎಂಬುದನ್ನು ನೋಡಿ ಅಲ್ಲಿದ್ದವರು ದಿಗ್ಬ್ರಮೆಗೊಂಡಿದ್ದಾರೆ. 

ಏಕೆಂದರೆ ಆಮ್ಲೆಟ್ (Omelet) ಮಾಡುವಾಗ ಮೊಟ್ಟೆಯಿಂದ ಮರಿ ಹೊರಬಂದಿದೆ. ಇದನ್ನು ನೋಡಿ ಸಾಮಾಜಿಕ ಜಾಲತಾಣ ಬಳಕೆದಾರರೂ ಅಚ್ಚರಿಗೊಂಡಿದ್ದಾರೆ. 

ನೀವು ಮೊಟ್ಟೆಯನ್ನು ಒಡೆದಾಗ ಅದರಿಂದ ಮರಿ ಹೊರಬರಬಹುದು ಎಂದು ನೀವು ಭಾವಿಸುತ್ತೀರಾ? ಆದರೆ ಈ ವಿಡಿಯೋದಲ್ಲಿ ಹಾಗೇ ಆಗಿದೆ. 

 

 

ಅಂಗಡಿಯವನು ಆಮ್ಲೆಟ್ ಮಾಡಲು ದೊಡ್ಡ ಬಾಣಲೆಯ ಮೇಲೆ ಮೊಟ್ಟೆಯನ್ನು ಒಡೆಯುತ್ತಿರುವುದನ್ನು ನೀವು ನೋಡಬಹುದು. ಮೊದಲು ಅವನು ಎರಡು ಮೊಟ್ಟೆಗಳನ್ನು ಒಡೆಯುತ್ತಾನೆ. ಇದರ ನಂತರ, ಅವನು ಬಾಣಲೆಯ ಮೇಲೆ ಮತ್ತೊಂದು ಮೊಟ್ಟೆಯನ್ನು (chick came out of the egg) ಒಡೆದ ತಕ್ಷಣ, ಒಂದು ಮರಿಯನ್ನು ಆ ಮೊಟ್ಟೆಯಿಂದ ಹೊರಬಂದು ಜಿಗಿಯಲು ಪ್ರಾರಂಭಿಸುತ್ತದೆ. 

ಪ್ಯಾನ್‌ನ ಶಾಖದಿಂದ ಮರಿ ಓಡಿಹೋಗಲು ಪ್ರಾರಂಭಿಸುವುದನ್ನು ವಿಡಿಯೋದಲ್ಲಿ (Social Media) ನೀವು ನೋಡಬಹುದು. ಈ ಶಾಕಿಂಗ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Kajal Aggarwal:ತಾಯಿಯಾಗ್ತಿದ್ದಾರೆ ಕಾಜಲ್ ಅಗರ್ವಾಲ್, ಸಿಹಿ ಸುದ್ದಿ ಹಂಚಿಕೊಂಡ ಪತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News