ನವದೆಹಲಿ : ಟ್ವಿಟರ್ ಸುಮಾರು ಒಂದು ಗಂಟೆಗಳ ಕಾಲ ತಮ್ಮ ಖಾತೆಗೆ ಪ್ರವೇಶವನ್ನ ನಿರಾಕರಿಸಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಕೂ ಆಪ್ ಮೂಲಕ ಸಚಿವರು ವಿಷ್ಯ ತಿಳಿಸಿದ್ದು, ಯುಎಸ್‌ಎಯ ಡಿಜಿಟಲ್ ಮಿಲೇನಿಯಂ ಕಾಫ್ ರೈಟ್ ಆಕ್ಟ್(Digital Millennium Copyright Act of the USA) ಉಲ್ಲಂಘನೆಯಾಗಿದೆ ಎಂಬ ಆರೋಪದ ಮೇಲೆ ಟ್ವಿಟರ್ ಸುಮಾರು ಒಂದು ಗಂಟೆಗಳ ಕಾಲ ತಮ್ಮ ಖಾತೆಗೆ ಪ್ರವೇಶವನ್ನ ನಿರಾಕರಿಸಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.


ಇದನ್ನೂ ಓದಿ : ಭಾರತೀಯ ನೌಕಾಪಡೆಯಲ್ಲಿ ಆಫೀಸರ್ ಹುದ್ದೆ ಅಲಂಕರಿಸಲು ಸುವರ್ಣಾವಕಾಶ ; ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ


ಇನ್ನು ಸಚಿವರ ಟ್ವಿಟರ್ ಖಾತೆ(Twitter Account) ಸಾರ್ವಜನಿಕ ವೀಕ್ಷಣೆಗೆ ಗೋಚರಿಸುತ್ತಿದ್ದರೂ, ಈ ಖಾತೆಯನ್ನ ಪ್ರವೇಶಿಸಲು ಅಥವಾ ಯಾವುದೇ ಪೋಸ್ಟ್ ಮಾಡಲು ಅಧಿಕಾರ ಹೊಂದಿರುವ ಯಾರಿಗೂ ಟ್ವಿಟರ್ ಅನುಮತಿ ನೀಡಿಲ್ಲ ಎಂದು ಹೇಳಿದರು.


EPFO: ನಿಮ್ಮ ಖಾತೆ ಈ ಬ್ಯಾಂಕುಗಳಲ್ಲಿದ್ದರೆ ಈಗಲೇ ಈ ಕೆಲಸ ಮಾಡಿ


ಕೇಂದ್ರ ಸಚಿವರು(Ravi Shankar Prasad) ತಮ್ಮ ಟ್ವೀಟ್‌ನಲ್ಲಿ ಎರಡು ಸ್ಕ್ರೀನ್‌ ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಸ್ಕ್ರೀನ್‌ ಶಾಟ್‌ನಲ್ಲಿ, ಖಾತೆಗೆ ಯಾವ ಪ್ರವೇಶವನ್ನು ಮುಚ್ಚಲಾಗಿದೆ ಎಂಬ ಕಾರಣಕ್ಕಾಗಿ ಟ್ವಿಟರ್ ಕಾರಣವನ್ನು ನೀಡಿದೆ. ಎರಡನೇ ಸ್ಕ್ರೀನ್‌ಶಾಟ್‌ನಲ್ಲಿ, ಖಾತೆ ಪ್ರವೇಶವನ್ನು ಪಡೆಯುವ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.


ಇದನ್ನೂ ಓದಿ : Impact Feature: ಲಕ್ ಬೈ ಚಾನ್ಸ್ ಮಾರಾಟದಲ್ಲಿ ಭಾಗವಹಿಸಿ, 2899 ರೂ.ಗಳಿಗೆ ಸ್ಮಾರ್ಟ್‌ಫೋನ್‌ ಖರೀದಿಸಿ


ಟ್ವಿಟರ್(Twitter) ಖಾತೆಗೆ ಪ್ರವೇಶವನ್ನು ನಿಲ್ಲಿಸಲು ಕಾರಣವೆಂದರೆ - ನಿಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಷಯವನ್ನು ಪೋಸ್ಟ್ ಮಾಡುವ ಬಗ್ಗೆ ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯ್ದೆಯಡಿ ನಮಗೆ ದೂರು ಬಂದಿರುವುದರಿಂದ ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗಿದೆ.


ಇದನ್ನೂ ಓದಿ : Indian Currency: 25 ಪೈಸೆಯ ಬದಲಿಗೆ 1.5 ಲಕ್ಷ ರೂ. ಮಾರಾಟ ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ


ಕಾಫ್ ರೈಟ್ ಆಕ್ಟ್(Copyright Act) ನಿಯಮಗಳನ್ನು ಉಳಿಸಿಕೊಳ್ಳಲು ಮತ್ತು ಚಲಾಯಿಸಲು ನಾವು ಬದ್ಧರಾಗಿದ್ದೇವೆ ಎಂದು ಟ್ವಿಟರ್ ಹೇಳಿದೆ. ಮತ್ತು ಈ ನಿಯಮಗಳ ಪುನರಾವರ್ತಿತ ಉಲ್ಲಂಘನೆಯ ಖಾತೆಯನ್ನು ಅಮಾನತುಗೊಳಿಸಬಹುದು. ನಿಮ್ಮ ಖಾತೆಯನ್ನು ಅನ್‌ಲಾಕ್ ಮಾಡಲು ನೀವು ಬಯಸಿದರೆ, ನೀವು ಟ್ವಿಟರ್‌ನ ಹಕ್ಕುಸ್ವಾಮ್ಯ ನಿಯಮಗಳನ್ನು ಪರಿಶೀಲಿಸಬೇಕಾಗುತ್ತದೆ ಎಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.