ನವದೆಹಲಿ: ಭಾರತೀಯ ರಿಸರ್ವ ಬ್ಯಾಂಕ್ ನೂತನವಾಗಿ ರಚಿಸಿರುವ ಡಿಜಿಟಲ್ ಪಾವತಿ ವಿಶೇಷ ಸಮಿತಿಯ ಅಧ್ಯಕ್ಷರಾಗಿ ಆಧಾರ್ ಯೋಜನೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಂದನ್ ನಿಲೇಕಣಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. 


COMMERCIAL BREAK
SCROLL TO CONTINUE READING

ಈ ಸಮಿತಿಯು ದೇಶದಲ್ಲಿನ ಪಾವತಿಗಳ ಡಿಜಿಟಲೀಕರಣ ಸ್ಥಿತಿಯನ್ನು ಪರಿಶೀಲಿಸುತ್ತದೆ ಮತ್ತು ಹಣಕಾಸಿನ ಸೇರ್ಪಡೆಗೆ ಪ್ರಸ್ತುತದ ಡಿಜಿಟಲ್ ಪಾವತಿಗಳ ಹಂತಗಳನ್ನು ನಿರ್ಣಯಿಸಲಿದೆ. ಜೊತೆಗೆ ನೂತನ ಯೋಜನೆಗಳು, ಡಿಜಿಟಲ್ ಪಾವತಿಯ ಸಾಧಕ-ಬಾಧಕಗಳು, ಡಿಜಿಟಲ್ ಪಾವತಿಯ ಭದ್ರತೆ ಬಗ್ಗೆ ಈ ವಿಶೇಷ ಸಮಿತಿ ಆಳವಾಗಿ ಅಧ್ಯಯನ ಮಾಡಲಿದೆ ಎಂದು ಆರ್ಬಿಐ ಹೇಳಿದೆ. 


ನಿಲೇಕಣಿ ಅವರನ್ನು ಹೊರತುಪಡಿಸಿ ಆರ್ಬಿಐನ ಮಾಜಿ ಡೆಪ್ಯೂಟಿ ಗವರ್ನರ್ ಎಚ್.ಆರ್.ಖಾನ್, ವಿಜಯಾಬ್ಯಾಂಕಿನ ಮಾಜಿ ಎಂ.ಡಿ. ಹಾಗೂ ಸಿಇಒ ಕಿಶೋರ್ ಸನ್ಸಿ, ಐಟಿ ಹಾಗೂ ಉಕ್ಕು ಸಚಿವಾಲಯದ ಮಾಜಿ ಕಾರ್ಯದರ್ಶಿ ಅರುಣ ಶರ್ಮಾ ಹಾಗೂ ಐಐಎಂ ಅಹಮದಾಬಾದ್ ನ ಸಂಜಯ್ ಜೈನ್ ಸೇರಿದಂತೆ ಒಟ್ಟು ಐವರು ಸದಸ್ಯರು ಇರಲಿದ್ದಾರೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.