ನವದೆಹಲಿ: ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ ಬಳಕೆದಾರರಿಗೆ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಸುರಕ್ಷಿತ ವಹಿವಾಟು ನಡೆಸಲು ಬ್ಯಾಂಕ್ ಈ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ಕುರಿತು ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿರುವ ಕೇಂದ್ರೀಯ ಬ್ಯಾಂಕ್, ಭಾರತದಲ್ಲಿ ಕಾರ್ಡ್ ನೀಡುವ ಸಮಯದಲ್ಲಿ ATM ಹಾಗೂ PoSಗಳ ಮೇಲೆ ಕೇವಲ ಡೊಮೆಸ್ಟಿಕ್ ಕಾರ್ಡ್ ಬಳಕೆಗೆ ಅನುಮತಿ ನೀಡುವಂತೆ ಹೇಳಿದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ವ್ಯವಹಾರ, ಕಾರ್ಡ್ ರಹಿತ ವ್ಯವಹಾರ, ಆನ್ಲೈನ್ ವ್ಯವಹಾರ ಮತ್ತು ಕಾಂಟಾಕ್ಟ್ ಲೆನ್ಸ್ ವ್ಯವಹಾರಕ್ಕೆ ಗ್ರಾಹಕರು ಕಾರ್ಡ್ ಗಳ ಸೇವೆಗಾಗಿ ಪ್ರತ್ಯೇಕ ಸೆಟ್ಟಿಂಗ್ ಮಾಡಬೇಕು. ಈ ಹೊಸ ನಿಯಮ ಮಾರ್ಚ್ 16, 2020 ರಿಂದ ಹೊಸ ಕಾರ್ಡ್ ಗಳ ಮೇಲೆ ಅನ್ವಯಿಸಲಿದೆ. ಹಳೆ ಕಾರ್ಡ್ ಧಾರಕರು ಈ ಸೇವೆಗಳನ್ನು ಬಳಸಬಹುದು ಅಥವಾ ನಿಷ್ಕ್ರೀಯಗೋಳಿಸಬಹುದು ಮತ್ತು ಈ ಆಯ್ಕೆಗೆ ಗ್ರಾಹಕರು ಸ್ವಾತಂತ್ರರಾಗಿದ್ದಾರೆ ಎಂದು ಬ್ಯಾಂಕ್ ಹೇಳಿದೆ. 


COMMERCIAL BREAK
SCROLL TO CONTINUE READING

ಸದ್ಯ ಕಾರ್ಡ್ ಹೊಂದಿರುವ ಗ್ರಾಹಕರು ರಿಸ್ಕ್ ಆಧಾರದ ಮೇಲೆ ತಮ್ಮ ನಿರ್ಣಯ ಕೈಗೊಳ್ಳಲು ಸ್ವತಂತ್ರರಾಗಿದ್ದಾರೆ. ಇವರು ಆನ್ಲೈನ್/ಅಂತಾರಾಷ್ಟ್ರೀಯ/ಕಾಂಟಾಕ್ಟ್ ಲೆನ್ಸ್ ಇತ್ಯಾದಿ ವ್ಯವಹಾರಗಳನ್ನು ಬಳಸಬಹುದು ಅಥವಾ ಇಂತಹ ವ್ಯವಹಾರಗಳನ್ನು ಆಫ್ ಕೂಡ ಮಾಡಬಹುದು. ಇದರ ಜೊತೆಗೆ ಬಳಕೆದಾರರು ಕಾರ್ಡ್ ನ 24X7 ಆಕ್ಸಸ್ ಕೂಡ ಆನ್ ಅಥವಾ ಆಫ್ ಮಾಡಬಹುದಾಗಿದೆ. ಜೊತೆಗೆ ತಮ್ಮ ಲಿಮಿಟ್ ಕೂಡ ಬದಲಾಯಿಸಬಹುದು. ಗ್ರಾಹಕರು ಮೊಬೈಲ್ ಅಪ್ಲಿಕೇಶನ್, ಇಂಟರ್ನೆಟ್ ಬ್ಯಾಂಕಿಂಗ್, ATM, IVR ಮಾಧ್ಯಮದ ಮೂಲಕ ತಮ್ಮ ಎಲ್ಲ ವ್ಯವಹಾರಗಳ ಮಿತಿಯನ್ನು ಆನ್ ಅಥವಾ ಆಫ್ ಮಾಡಬಹುದು.