ʼಇದು ನೋಟ್ ಬ್ಯಾನ್ ಅಲ್ಲʼ : 2000 ರೂ. ನೋಟಿನ ಕುರಿತು ನಿಮ್ಮ ತಲೆಯಲ್ಲಿರುವ ಪ್ರಶ್ನೆಗೆ ಉತ್ತರ ಇಲ್ಲಿವೆ...!
2000rs note Ban : ರೂ. 2000 ನೋಟು ಹಿಂಪಡೆಯಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆಯೇ..? ಈಗ ನಮ್ಮ ಬಳಿ ಇರುವ ರೂ. 2000 ನೋಟುಗಳನ್ನು ಏನು ಮಾಡಬೇಕು..? ಹೇಗೆ ಬದಲಾಯಿಸಬಹುದು, ಎಷ್ಟು ಬದಲಾಯಿಸಬಹುದು, ಎಷ್ಟು ಠೇವಣಿ ಇಡಬಹುದು ಹೀಗೆ 2000 ನೋಟಿನ ಸುತ್ತ ಹಲವು ರೀತಿಯ ಪ್ರಶ್ನೆಗಳು ಸುತ್ತುವರಿದಿವೆ. ನಿಮ್ಮ ಎಲ್ಲಾ ಸಂದೇಹಗಳಿಗೆ ಒಂದೇ ಸ್ಥಳದಲ್ಲಿ ಉತ್ತರ ಇಲ್ಲಿದೆ ನೋಡಿ.
2000rs Note Ban : ಆರ್‌ಬಿಐ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಿದ ಬೆನ್ನಲ್ಲೆ ಎಲ್ಲರೂ ನೋಟ್ ಬ್ಯಾನ್ ಅಂತ ತಲೆಕಡಿಸಿಕೊಂಡಿದ್ದಾರೆ. ಆದ್ರೆ, ನಿಗದಿತ ಸಮಯದವರೆಗೂ 2,000 ರೂ. ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ ಅಂತ ಆರ್‌ಬಿಐ ತಿಳಿಸಿದೆ. ಅಲ್ಲದೆ, ಸೆಪ್ಟೆಂಬರ್ 30ರ ಒಳಗೆ ಎಲ್ಲರೂ ನೋಟುಗಳ ಬದಲಾವಣೆ ಇಲ್ಲವೇ ಠೇವಣಿ ಇಡುವಂತೆ ತಿಳಿಸಿದೆ. ಸದ್ಯ ಇದೇ ವಿಚಾರ ಎಲ್ಲರ ತಲೆ ಕೆಡಿಸಿದೆ. ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿವೆ ನೋಡಿ..
ಭಾರತೀಯ ರಿಸರ್ವ್ ಬ್ಯಾಂಕ್ ರೂ 2000 ಮುಖಬೆಲೆಯ ನೋಟುಗಳನ್ನು ಏಕೆ ಹಿಂತೆಗೆದುಕೊಂಡಿತು..?
ನವೆಂಬರ್ 2016 ರಲ್ಲಿ ಆರ್‌ಬಿಐ ಕಾಯಿದೆ, 1934 ರ ಸೆಕ್ಷನ್ 24 (1) ರ ಅಡಿಯಲ್ಲಿ ರೂ. 500 ಮತ್ತು 1000 ನೋಟುಗಳನ್ನು ಅಮಾನ್ಯಗೊಳಿಸಿದ ನಂತರ, ಆರ್ಥಿಕತೆಯ ಕರೆನ್ಸಿ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಕೇಂದ್ರವು ರೂ.2000 ನೋಟನ್ನು ಪರಿಚಯಿಸಿತು. 2018-19ನೇ ಸಾಲಿನಲ್ಲಿ 2000 ನೋಟುಗಳ ಮುದ್ರಣವನ್ನು ಕೇಂದ್ರವು ಸ್ಥಗಿತಗೊಳಿಸಿದ್ದು, ನಿಗದಿತ ಗುರಿ ತಲುಪಿದ್ದು, ಅಗತ್ಯಕ್ಕೆ ತಕ್ಕಂತೆ ಇತರೆ ಮುಖಬೆಲೆಯ ನೋಟುಗಳು ಲಭ್ಯವಿವೆ. 2000 ರೂ ಮುಖಬೆಲೆಯ ನೋಟುಗಳಲ್ಲಿ ಹೆಚ್ಚಿನವು ಮಾರ್ಚ್ 2017 ಕ್ಕಿಂತ ಮೊದಲು ಬಿಡುಗಡೆಯಾಗಿದೆ. ಇತರ ಮುಖಬೆಲೆಯ ನೋಟುಗಳು ಪ್ರಸ್ತುತ ದೇಶದ ಜನರ ಕರೆನ್ಸಿ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆ. ಈ ಕಾರಣಕ್ಕಾಗಿಯೇ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು "ಕ್ಲೀನ್ ನೋಟ್ ಪಾಲಿಸಿ" ಪ್ರಕಾರ ಚಲಾವಣೆಯಿಂದ ಹಿಂಪಡೆಯಲಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಇನ್ಮುಂದೆ 2,000 ರೂಪಾಯಿ ನೋಟು ನಿಷೇಧ..!
ಕ್ಲೀನ್ ನೋಟ್ ನೀತಿ ಎಂದರೇನು?
ಗುಣಮಟ್ಟದ ನೋಟುಗಳನ್ನು ಚಲಾವಣೆಯಲ್ಲಿಡಲು RBI ಅನುಸರಿಸುವ ನೀತಿಯೇ ಕ್ಲೀನ್ ನೋಟ್ ಪಾಲಿಸಿ.
2000 ರೂಪಾಯಿ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತದೆಯೇ?
ಹೌದು, ಸದ್ಯಕ್ಕೆ 2000 ರೂಪಾಯಿ ನೋಟಿನ ವಹಿವಾಟಿನ ವಿಚಾರದಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ.
ಸಾಮಾನ್ಯ ವಹಿವಾಟಿಗೆ 2000 ನೋಟುಗಳನ್ನು ಬಳಸಬಹುದೇ?
ಹೌದು, ಜನರು ತಮ್ಮ ವಹಿವಾಟಿಗೆ 2000 ರೂಪಾಯಿ ನೋಟುಗಳನ್ನು ಬಳಸಬಹುದು. ಅಲ್ಲದೆ ಅವುಗಳನ್ನು ಪಾವತಿಯ ರೂಪದಲ್ಲಿ ಪಡೆಯಬಹುದು. ಇಲ್ಲದಿದ್ದರೆ, ನೋಟುಗಳನ್ನು ಸೆಪ್ಟೆಂಬರ್ 30, 2023 ರಂದು ಅಥವಾ ಮೊದಲು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾಗುತ್ತದೆ.
ಜನರ ಬಳಿ ಇರುವ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಏನು ಮಾಡಬೇಕು..?
ನಿಮ್ಮ ಬಳಿ ರೂ. 2000 ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಬಹುದು ಅಥವಾ ಬ್ಯಾಂಕ್‌ನಲ್ಲಿ ವಿನಿಮಯ ಮಾಡಿಕೊಳ್ಳಬಹುದು. ಈ ಸೌಲಭ್ಯವು ಎಲ್ಲಾ ಬ್ಯಾಂಕ್‌ಗಳಲ್ಲಿ ಸೆಪ್ಟೆಂಬರ್ 30, 2023 ರವರೆಗೆ ಲಭ್ಯವಿರುತ್ತದೆ. ಅಲ್ಲದೆ ದೇಶಾದ್ಯಂತ 19 RBI ಪ್ರಾದೇಶಿಕ ಕಚೇರಿಗಳಲ್ಲಿ ರೂ. 2000 ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.
ಬ್ಯಾಂಕ್ ಖಾತೆಯಲ್ಲಿ ರೂ 2000 ನೋಟುಗಳನ್ನು ಜಮಾ ಮಾಡಲು ಯಾವುದೇ ಮಿತಿ ಇದೆಯೇ.?
ಅಸ್ತಿತ್ವದಲ್ಲಿರುವ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ) ನಿಯಮಗಳ ಪ್ರಕಾರ, ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಯಾವುದೇ ನಿರ್ಬಂಧಗಳಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ